ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೪ } ಕಿಷಿಂಧಾಕಾಂಡವು ೧೬೨೫ ಹಳ ಸಮರ್ಥನೇ ಸರಿ ! ಮತ್ತು ನಿನ್ನ ತಂದೆಯಂತೆ ಕಪಿರಾಜ್ಯಭಾರವೆಲ್ಲವ ನ್ಯೂ ದೃಢವಾಗಿ ನೀನೂ ವಹಿಸಬಲ್ಲೆ ಯಂಬುದೂ ನಿಜವು ಆದರೇನು ? ಎಲೆ ವಾನರೇಂದ್ರನೆ ! ಕಪಿಗಳು ಯಾವಾಗಲೂ ಚಂಚಲಮನಸ್ಸುಳ್ಳ ವರು ನೀನು ಇಲ್ಲಿರಬೇಕೆಂದು ಇವರಿಗೆ ಆಜ್ಞೆಯನ್ನು ಮಾಡಿದರೂ, ಆ ವರು ತಮ್ಮ ಹೆಂಡಿರುಮಕ್ಕಳನ್ನು ಬಿಟ್ಟು ಎಷ್ಟು ಮಾತ್ರವೂ ನಿನ್ನಾ ಜೈಗೊಳಪಟ್ಟು ನಿಲ್ಲಲಾರರು ನಾನು ನಿನ್ನಿ ದಿರಾಗಿಯೇ ಇದ್ದ ಸ್ಥಿತಿಯ ನ್ನು ತಿಳಿಸುವೆನು ಕೇಳು ಈ ಜಾಂಬವಂತನೂ, ಈ ನಲನೂ, ಈ ಸು ಹೋತ್ರನೂ, ಹೇಗೆ ನಿನ್ನನ್ನು ಅನುವರ್ತಿಸುವುದಿಲ್ಲವೋ ಹಾಗೆಯೇ ನಾ ನೂ ಎಂದಿಗೂ ನಿನ್ನನ್ನು ಹಿಂಬಾಲಿಸುವೆನೆಂದೆಣಿಸಬೇಡ ! ಈ ನಮ್ಮೆಲ್ಲ ರನ್ನೂ ಸಾಮದಾನಭದಗಳಿಂದಲಾಗಲಿ, ದಂಡೋಪಾಯದಿಂದಾಗಲಿ ಆ ಸುಗ್ರೀವನ ಕಡೆಯಿಂದ ನಿನ್ನ ಕಡೆಗೆ ಆಕರ್ಷಿಸುವುದು ನಿನಗೆ ಎಂದಿಗೂ ಶಕ್ಕೆ ಎಲ್ಲ ಬಲವಂತನಾದವನು ಬಲಹೀನನೊಡನೆ ಒಂದುವೇಳೆ ವಿರೋಧವನ್ನು ಮಾಡಿದರೂ ಮಾಡಬಹುದೆಂದು ನೀತಿಜ್ಞರು ಹೇಳುವರೇಹೊರತು,ದುರ್ಬ ಲನಾದವನು ಬಲಾಡ್ಯನೊಡನೆ ವಿರೋಧಿಸುವುದು ಶ್ರೇಯಸ್ಕರವೆಂದು ಯಾರೂ ಹೇಳುವುದಿಲ್ಲ ಬಲಹೀನನು ಆತ್ಮರಕ್ಷಣೆಯನ್ನು ಮಾಡಿಕೊಳ್ಳಬೇ ಕಾದುದರಿಂದ, ಅಂತವನು ಬಲಾಢನೊಡನೆ ವಿರೋಧವನ್ನು ಮಾಡಿಕೊಳ್ಳ ಲೇ ಬಾರದು ಎಲೆ ಅಂಗದಾ'ನಿನಗೆ ಬೇರೆ ಬಲವಿಲ್ಲದಿದ್ದರೂ ನಿನ್ನ ರಕ್ಷಣೆಗಾ ಗಿ ಯಾವ ಈ ಗುಹೆಯನ್ನು ಆಶ್ರಯಿಸಬೇಕಂದು 'ಅಪೇಕ್ಷಿಸುವಯೋ, ತಾರನೂ ಯಾವ ಬಿಲವನ್ನು ತೋರಿಸಿದನೋ, ಆಬಿಲವನ್ನು ಭೇದಿಸುವುದು ಲಕ್ಷಣನ ಬಾಣಗಳಿಗೆ ಅತ್ಯಲ್ಪವಾದ ಕಾರವೆಂದು ತಿಳಿ' ಪೂತ್ವದಲ್ಲಿ ಇಂ ದ್ರನು ಮಯನಮೇಲಿನ ಕೋಪದಿಂದ ಈ ಬಿಲದಮೇಲೆ ವಜ್ರಾಯುಧವನ್ನು ಪ್ರಯೋಗಿಸಿ ಇದನ್ನು ಸ್ವಲ್ಪ ಮಾತ್ರವಾಗಿ ಕದಲಿಸಿರುವನು ಈಗ ಲಕ್ಷಣ ನು ತನ್ನ ತೀಕ್ಷಬಾಣಗಳಿಂದ ಎಲೆಯನ್ನು ಸೀಳುವಂತೆ ಸುಲಭವಾಗಿಇದನ್ನು ಭೇದಿಸಿಯೇಬಿಡುವನು ಪೂತ್ವದಲ್ಲಿ ಇಂದ್ರನು ಇದಕ್ಕೆ ಒಂದುದ್ವಾರವನ್ನು ಮಾತ್ರ ಮಾಡಿದನೇಹೊರತು ಬೇರೊಂದನ್ನೂ ಮಾಡಲಿಲ್ಲ ಈಗ ಲಕ್ಷಣ ನಕೋಪಕ್ಕೆ ಪಾತ್ರವಾದಮೇಲೆ ಈ ಗುಹೆಯು ಛಿನ್ನಭಿನ್ನ ವಾಗುವುದೆಂದೇ ತಿಳಿ! ಇಂತಹ ಅಸಮಾನಶಕ್ತಿಯನ್ನು ಹೊಂದಿ,ವಜದಲಗಿಗೆ ಸಮಾನಗಳಾದ