ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೩ ಶ್ರೀಮದ್ರಾಮಾಯಣವು (ಸರ್ಗ, ೫೪ ಬಾಣಗಳು ಆ ಲಕ್ಷಣನಲ್ಲಿ ಎಷ್ಟೊಇರುವುವು ಅವು ಪರೂತಗಳನ್ನಾದರೂ ಭೇದಿಸಬಲ್ಲುವು ಅವುಗಳಿಗೆ ಈ ಬಿಲವೆಂಬುದು ಎಷ್ಟು ಮಾತ್ರವೆಂದೆಣಿಸುವೆ? ಮುಖ್ಯವಾಗಿ ನೀನು ಸುಗ್ರೀವನೊಡನೆ ವಿರೋಧಿಸಿ ಈ ಬಿಲದಲ್ಲಿಯೇ ಇದ್ದು ಬಿಡುವುದಕ್ಕೆ ಉದ್ದೇಶಿಸಿದೆಯಲ್ಲವೆ'ಇದನ್ನು ತಿಳಿದೊಡನೆಯೇ ಈ ವಾನರರೆ ಲ್ಲರೂ ನಿನ್ನನ್ನು ಬಿಟ್ಟು ಹೊರಟುಹೋಗುವರೆಂದು ತಿಳಿ ಇವರು ನಿನ್ನನ್ನು ಹಿಂಬಾಲಿಸಿ ಬಂದುದುಮೊದಲು, ತಮ್ಮ ಹೆಂಡಿರುಮಕ್ಕಳನ್ನು ನೆನೆಸಿಕೊಂಡು ಎಡೆಬಿಡದೆ ದುಃಖಿಸುತ್ತಾ ತಕ್ಕ ಅನ್ನಪಾನಗಳೂ ಇಲ್ಲದೆ, ಸುಖಶಯ್ಕೆಯೂ ಇಲ್ಲದೆ, ಹಸಿವುಬಾಯಾರಿಕೆಗಳಿಂದ ಬಳಲಿ, ಕಷ್ಟಪಡುತ್ತಿರುವರು ಈಗ ಇವರಿಗೆ ಇದೊಂದುನೆಪವೂ ಸಿಕ್ಕಿದರೆ, ಆಕ್ಷಣವೇ ನಿನ್ನನ್ನು ಬಿಟ್ಟು ಹೊರಟು ಹೋಗುವರು ಇವರು ನಿನ್ನನ್ನು ಬಿಟ್ಟು ಹೋದಮೇಲೆ ನೀನು ಮಿತ್ರಭಾಂ ಥವರನ್ನಗಲಿ ದಿಕ್ಕಿಲ್ಲದೆ ದುಃಖಕ್ಕ ಸಿಕ್ಕ ಬೇಕಾಗುವುದು ಆಗ ನೀನು ಗಾಳಿಗೆ ತೂರಿಹೋಗುವ ಹುಲ್ಲಿಗಿಂತಲೂ ಹೀನನಾಗುವೆ ಇಷ್ಟೆ ಅಲ್ಲದೆ ಅತಿತೀಕ್ಷ್ಯ ಗಳಾಗಿಯೂ, ವೇಗವಳ್ಳವುಗಳಾಗಿಯೂ, ಬೇರೆಯವರಿಗೆ ಇದಿರಿಸಿ ನಿಲ್ಲಲಸಾ ಧ್ಯಗಳಾಗಿಯೂ, ಮಹಾಭಯಂಕರಗಳಾಗಿಯೂ ಇರುವ ಲಕ್ಷ್ಮಣನ ಬಾಣ ಗಳು ರಾಜಾಜ್ಞೆಯನ್ನು ಮೀರಿದ ನಿನ್ನನ್ನು ತಪ್ಪದೆ ಕೊಂದುಬಿಡುವುವು ಈ ಗಲೂ ನೀನು ನನ್ನೊಡನೆ ಬಂದು, ವಿನೀತನಾಗಿ ನಡೆದುಕೊಳ್ಳುತಿದ್ದರೆಮಾ ತ್ರ, ಸುಗ್ರೀವನು ನಿನ್ನನ್ನು ಯೌವರಾಜ್ಯದಲ್ಲಿರಿಸಿರುವನಲ್ಲದೆ, ಮುಂದೆ ಕ್ರ ಮವಾಗಿ ನಿನಗೆ ಮುಖ್ಯವಾನರರಾಜ್ಯವನ್ನೂ ಕೊಟ್ಟುಬಿಡುವನು ನಿನ್ನ ಚಿಕ್ಕ ಪ್ಪನಾದ ಸುಗ್ರೀವನು ಸಾಮಾನ್ಯನಲ್ಲ ಧಮ್ಮಾತ್ಮನು ಯಾವಾಗಲೂ ಪರರಿಗೆ ಸಂತೋಷವನ್ನು ಂಟುಮಾಡುವವನು ಪಾಪರಹಿತನು, ದೃಢವ್ರತವುಳ್ಳವ ನು ಶುದ್ಧಸ್ವಭಾವವುಳ್ಳವನು ಪ್ರತಿಜ್ಞೆಗೆ ತಪ್ಪುವವನಲ್ಲ ನೀನು ಆವನನ್ನೇ ದ್ವೇಷಿಯೆಂದೆಣಿಸಿದೆಯಲ್ಲಾ' ಪ್ರಬಲಕಾರಣವಿದ್ದ ಹೊರತು ಎಂದಿಗೂ ನಿ ನನ್ನನ್ನು ಕೊಲ್ಲುವವನಲ್ಲ, ಇಷ್ಟೆ ಅಲ್ಲದೆ ನಿನ್ನ ತಾಯಿಯಲ್ಲಿ ಆತನಿಗೆ ಅಸಾಧಾ ರಣಪ್ರೀತಿಯಿರುವುದರಿಂದ, ಅವಳಿಗೆ ಪ್ರಿಯವನ್ನೇ ಕೋರುತ್ತಿರುವನು ಆ ವನ ಪ್ರಾಣಗಳೇ ನಿನ್ನ ತಾಯಿಗೆ ವಶಗಳಾಗಿರುವುವು ನೀನು ಅವಳ ಮಗನಾ ದುದರಿಂದ ಆತನಿಗೂ ನೀನು ಮಗನಲ್ಲದೆ ಬೇರೆಯಲ್ಲ ಅವನಿಗೆ ಬೇರೆಸಂತಾ