ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೨೨ ಶ್ರೀಮದ್ರಾಮಾಯಣವು [ಸರ್ಗ ೫೫ ರಾಮನವಿಷಯದಲ್ಲಿಯೇ ಆಡಿದಮಾತಿಗೆ ತಪ್ಪಿದ ಕೃತಷ್ಟು ನಾಗಿಯೂ, ಚಪ ಲಚಿತ್ತನಾಗಿಯೂ ಇರುವ ಸುಗ್ರೀವನಲ್ಲಿ,ಬದುಕಬೇಕೆಂಬ ಆಸೆಯುಳ್ಳಯಾ ವಸಾಧುವಿಗೆ ತಾನೇ ನಂಬಿಕೆಯು ಹುಟ್ಟುವುದು ಸುಗ್ರೀವನು ಗುಣವಂತ ನಾಗಲಿ, ಗುಣಹೀನನಾಗಲಿ, ಮುಂದೆ ತನ್ನ ಮಗನಿಗೆ ರಾಜ್ಯವನ್ನು ಕೊಡುವ ನೇಹೊರತು, ಅವನ ವೈರಿಯ ಮಗನಾದ ನನ್ನನ್ನು ಪ್ರಾಣಹಿಂಡುಳಿಸುವನೆ'ಎ ಲೆ ಹನುಮಂತನೆ' ಮುಖ್ಯವಾಗಿ ಈಗ ನಾನು ದಿಕ್ಕಿಲ್ಲದವನಾದೆನು ಆ ಸು ಗ್ರೀವನಿಂದ ತಲೆತಪ್ಪಿಸಿಕೊಂಡು ಈ ಯಕ್ಷಬಿಲದಲ್ಲಿಯೇ ಇದ್ದು ಬಿಡಬೇಕೆಂ ದು, ನಾನು ಅವನಕಡೆಯವರಾದ ನಿಮ್ಮೊಡನೆ ಮಾಡಿದ ಮಂತ್ರಲೋಚನೆ ಯೂ ಹೊರಕ್ಕೆ ಬಿದ್ದಿತು ಈಗ ನಾನು ಅವನ ರಾಜಾಜ್ಞೆಗೆ ತಪ್ಪಿದ ಮಹಾಪ ರಾಧಿಯೂ ಆಗಿರುವೆನು ಸಮಸ್ತವಿಷಯಗಳಲ್ಲಿಯೂ ಅವನಿಗಿಂತಲೂ ನಾನು ದುರ್ಬಲನು ಹೀಗಿರುವಾಗ ಕಿಷಿಂಥೆಯನ್ನು ಸೇರಿ ನಾನು ಹೇಗೆ ಬದುಕಿರ ಬಲ್ಲೆನು? ಸುಗ್ರೀವನು ಗೂಢವಾಗಿ ವಂಚಿಸತಕ್ಕವನು ಕ್ರೂರನು ಫತು ಕನು ರಾಜ್ಯದಾಸೆಯಾದರೋ ಅವನಿಗೆ ಮಿತಿಮೀರಿ ಹೋಗಿರುವುದು ಈ ಕಾರಣಗಳಿಂದ ಅವನು ರಹಸ್ಯವಾಗಿ ನನ್ನನ್ನು ನೇಣುಹಾಕಿಯೋ, ಸೆರೆಯಲ್ಲಿ ರಿಸಿಯೋ ಕೊಂದೇಬಿಡುವನು ಹಾಗೆ ಸೆರೆಯಲ್ಲಿದ್ದು ಸಾಯುವುದಕ್ಕಿಂತಲೂ ಇಲ್ಲಿ ಪ್ರಾಯೋಪವೇಶವೇ ನನಗೆ ಮೇಲೆಂದು ತೋರಿರುವುದು ಆದುದರಿಂದ ಎಲೈವಾನರರೆ' ನೀವೆಲ್ಲರೂ ನನಗೆ ಅನುಮತಿಯನ್ನು ಕೊಡಬೇಕು ಇಷ್ಟ ವಿದ್ದರೆ ನೀವು ಕಿಷಿಂಧೆಗೆ ಹೋಗಬಹುದು ಪ್ರತಿಜ್ಞೆ ಮಾಡಿ ಹೇಳುವೆನು, ನಾನುಮಾತ್ರ ಕಿಂಧೆಗೆ ಬರುವವನಲ್ಲ ಇಲ್ಲಿಯೇ ಪ್ರಾಯೋಪವೇಶವನ್ನು ಮಾಡುವೆನು ಇಲ್ಲಿನ ಮರಣವೇ ನನಗೆ ಶ್ರೇಯಸ್ಕರವು,ಬಲಾಡ್ಯರಾದ ರಾಮ ಲಕ್ಷ್ಮಣರನ್ನು ನೋಡಿದಾಗ, ನೀವು ಅವರಿಗೆ ನನ್ನ ಪ್ರಣಾಮವನ್ನು ತಿಳಿಸಿ ನಾ ನು ಆವರಕ್ಷೇಮವನ್ನು ವಿಚಾರಿಸಿದುದಾಗಿ ಹೇಳಬೇಕು ನನ್ನ ಚಿಕ್ಕತಂದೆ ಸುಗ್ರೀವನಿಗೂ, ಚಿಕ್ಕಮ್ಮನಾದ ರುಮೆಗೂ,ನನ್ನ ಪ್ರಣಾಮವನ್ನು ತಿಳಿಸಿಬಿ ಹಿರಿ' ನನ್ನ ತಾಯಿಯಾದ ತಾರೆಯನ್ನೂ ಸಮಾಧಾನಪಡಿಸಿ, ನನ್ನ ಪ್ರಣಾಮ ವನ್ನು ತಿಳಿಸಿರಿ' ಅವಳು ಸಹಜವಾಗಿಯೇ ಮಕ್ಕಳಲ್ಲಿ ಬಹಳ ಪ್ರೀತಿಯುಳ್ಳ ವಳು ಯಾವಪ್ರಾಣಿಗಳಲ್ಲಿಯೂ ಬಹಳ ಕನಿಕರವುಳ್ಳವಳು ಇಲ್ಲಿ ನಾನು ಸತ್ತುದನ್ನು ಕೇಳಿದೊಡನೆ ನಿಜವಾಗಿ ಪ್ರಾಣವನ್ನು ಬಿಟ್ಟುಬಿಡುವಳು.”