ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೫೬.] ಕಿಷಿಂಧಾಕಾಂಡವು ೧೬೩೧ ಇದೊಂದು ವಿಧದಿಂದ ಅವನೂ, ರಾಮನಿಗೆ ಪ್ರಿಯವನ್ನು ಂಟುಮಾಡಿದಂ ತೆಯೇ ಆಯಿತು ಈಗ ನಾವೂ ರಾಮಕಾರಾರ್ಥವಾಗಿ ಸುತ್ತಿ ಸುತ್ತಿ ಸಾ ಕಾಯಿತು, ಇನ್ನು ನಮಗೆ ಜೀವದಾಸೆಯೇ ಹೋಯಿತು ಕೊನೆಗೆ ಈ ದು ರ್ಗಮಪ್ರದೇಶದಲ್ಲಿ ಸಿಕ್ಕಿಬಿದ್ದೆವು ಇಷ್ಟಾದರೂ ನಾವು ಸೀತೆಯನ್ನು ಕಾ ಣಲಿಲ್ಲ ಆದರೇನು? ರಾವಣನಿಂದ ಹತನಾದರೂ, ಹೃದ್ರರಾಜನಾದ ಆ ಜಟಾಯುವೊಬ್ಬನೇ ಭಾಗ್ಯಶಾಲಿಯೆಂದೆಣಿಸಬೇಕಾಗಿದೆ ನನ್ನಂತೆ ಅವನು ಸುಗ್ರೀವನ ಭಯಕ್ಕೆ ಸಿಕ್ಕದೆ ಸುಖವಾಗಿ ಸತ್ತುದಲ್ಲದೆ, ರಾಮನ ಕೈಯಿಂದ ಸಂಸ್ಕಾರವನ್ನು ಹೊಂದಿ ಸದ್ಧತಿಯನ್ನೂ ಹೊಂದಿದನು * ಜಟಾಯುವುಹತ ನಾದುದೊಂದು; ದಶರಥರಾಜನ ಮರಣವೊಂದು, ರಾವಣನು ಸೀತೆಯನ್ನ ಪಹರಿಸಿದುದೊಂದು; ಇವೆಲ್ಲವೂ ವಾನರರಾದ ನಮ್ಮ ಪ್ರಾಣಗಳಿಗೆ ಸಂ ಚಕಾರವಾಯಿತು ರಾಮಲಕ್ಷ್ಮಣರು ಸೀತೆಯೊಡನೆ ವನವಾಸಮಾಡಿದು ದೂ, ರಾಮಬಾಣದಿಂದ ವಾಲಿಯು ಹತನಾದುದೂ, ರಾಮನ ಕೋಪ ದಿಂದ ಜನಸ್ಥಾನದಲ್ಲಿ ರಾಕ್ಷಸರಿಗುಂಟಾದ ವಿನಾಶವೂ, ಈ ವಿಪರೀತಗಳೆಲ್ಲ ವೂ ದಶರಥನು ಕೈಕೇಯಿಗೆ ವರವನ್ನು ಕೊಟ್ಟುದರಿಂದಲೇ ಪ್ರಾಪ್ತವಾ ದುವು ” ಎಂದನು ಹೀಗೆ ಅಂಗದನು ಹೇಳುತಿದ್ದ ದುಃಖವಾಕ್ಯವನ್ನು ಕೇಳಿ, ಥೀಮಂತನಾದ ಆ ಗೃಢರಾಜನು ಮೆಲ್ಲಗೆ ಮುಂದೆ ಸರಿದು, ಅಲ್ಲಿ ವಾ ನರರೆಲ್ಲರೂ ದೈನ್ಯದಿಂದ ಮಲಗಿರುವುದನ್ನೂ ನೋಡಿ, ಕದಲಿದ ಮನ ಸ್ಸುಳ್ಳವನಾಗಿ ಮಾತನಾಡಿಸಬೇಕೆಂದೆಣಿಸಿದನು ತೀಕ್ಷವಾದ ಕೋ ಕುಳ್ಳವನಾಗಿಯೂ, ಗಂಭೀರವಾದ ಮಹಾಧ್ವನಿಯುಳ್ಳವನಾಗಿಯೂ ರುವ ಆ ಗೃಢರಾಜನು, ಅಂಗದನ ಬಾಯಿಂದ ಹೊರಟ ಮಾತನ್ನು ಕೇಳಿ ದೊಡನೆ ಓಹೋ' ಇದೇನು' ನನಗೆ ಪ್ರಾಣಕ್ಕಿಂತಲೂ ಪ್ರಿಯನಾದ ಆ ಜಟಾಯುವಿನ ವಧವನ್ನು ಹೇಳುವವನಾರು? ಈ ಮಾತು ನನ್ನ ಮನಸ್ಸನ್ನು ನಡುಗಿಸುವಂತಿದೆಯಲ್ಲಾ? ಜನಸ್ಪ್ಯಾನದಲ್ಲಿ ರಾವಣನಿಗೂ, ಜಟಾಯುವಿಗೂ

  • ಜಟಾಯುವು ಹತನಾಗದಿದ್ದರೆ ಅವನಿಂದಲೇ ರಾಮನಿಗೆ ಸೀತಾವೃತ್ತಾಂತವು ತಿಳಿಯುತ್ತಿತ್ತೆಂದೂ,ಅಥವಾ ದಶರಥನು ಸಾಯದಿದ್ದರೆ ರಾಮನ ಕಷ್ಟವನ್ನು ಕೇಳಿ ತಾನೇ ಬಂದು ಅವನನ್ನು ಅಯೋಧ್ಯಗಾದರೂ ಕರೆದುಕೊಂಡು ಹೋಗುತ್ತಿದ್ದನೆಂದೂ ಇಲ್ಲಿ ವಾನರರ ಆಶಯವು