ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೪ ಶ್ರೀಮದ್ರಾಮಾಯಣವು [ಸರ್ಗ ೫೮ ರಾಡುತಿದ್ದು, ಕೊನೆಗೆ ಬಳಲಿ, ರಾವಣನಿಂದ ಹತನಾದನು ಆ ಗೃಢರಾಜ ನು ಪ್ರಬಲನಾದ ರಾಕ್ಷಸನಿಂದ ಹತನಾದುದಕ್ಕೆ ಇದೇ ಕಾರಣವು ಕೊನೆ ಗೆ ಜಟಾಯುವು ರಾಮನಿಂದ ಸಂಸ್ಕೃತನಾಗಿ ಉತ್ತಮಗತಿಯನ್ನೇ ಹೊಂ ಡಿದನು ಆಮೇಲೆ ಮಹಾತ್ಮನಾದ ಸುಗ್ರೀವನೆಂಬ ನನ್ನ ಚಿಕ್ಕತಂದೆಯೊ ಡನೆ ರಾಮನು ಸ್ನೇಹವನ್ನು ಬಳೆಸಿ, ಅವನ ಪ್ರೀತಿಗಾಗಿ ನನ್ನ ತಂದೆಯಾದವಾ ಲಿಯನ್ನು ಕೊಂದನು ಸುಗ್ರೀವನು ಮೊದಲಿಂದಲೇ ನನ್ನ ತಂದೆಯೊಡನೆ ವಿರೋಧಿಸಿಕೊಂಡು ತನ್ನ ಇಷ್ಯಮಂತ್ರಿಗಳೊಡನೆ ಬೇರೆಯಾಇರುತಿದ್ದ ನು ರಾಮನು ವಾಲಿಯನ್ನು ಕೊಂದಮೇಲೆ ಸುಗ್ರೀವನನ್ನು ವಾನರರಾ ಜ್ಯದಲ್ಲಿ ಅಭಿಷೇಕಿಸಿದನು ಹೀಗೆ ರಾಮನಿಂದ ಪಟ್ಟಾಭಿಷಿಕ್ತನಾದ ಸುಗ್ರಿ ವನು ರಾಮಕಾರಾರ್ಥವಾಗಿ ನಮ್ಮನ್ನು ಕಳುಹಿಸಿದನು ರಾಮನಿಂದ ಪ್ರೇ ರಿತರಾಗಿ ನಾವು ಅಲ್ಲಲ್ಲಿ ಸೀತೆಯನ್ನು ಹುಡುಕುತ್ತ ಇಲ್ಲಿಗೆ ಬಂದೆವು ರಾತ್ರಿ ಯಲ್ಲಿ ಸೂರಪ್ರಭೆಯನ್ನು ಹೇಗೆ ಕಾಣಲಾರೆವೋ, ಹಾಗೆ ಎಲ್ಲಿ ಹುಡುಕಿದ ರೂ ಸೀತೆಯನ್ನು ಕಾಣಲಿಲ್ಲ ನಾವೆಲ್ಲರೂ ದಂಡಕಾರಣ್ಯವನ್ನೆಲ್ಲಾ ಎ ಷೋ ಎಚ್ಚರಿಕೆಯಿಂದ ಸುತ್ತಿನೋಡಿದೆವು ಕೊನೆಗೆ ದಾರಿತಿಳಿಯದೆ ಆ ಜ್ಞಾನದಿಂದ ಇಲ್ಲಿ ಒಬ್ಬ ತಾಪಸಿಯ ಬಿಲವನ್ನು ಪ್ರವೇಶಿಸಿಬಿಟ್ಟೆವು ಮಯ ನ ಮಾಯೆಯಿಂದ ನಿರಿತವಾದ ಆಬಿಲವನ್ನು ಹುಡುಕುತ್ತಿರುವಾಗಲೇ ರಾಜ ನು ನಮಗೆ ನಿಶ್ಚಯಿಸಿಕೊಟ್ಟ ಒಂದು ತಿಂಗಳಕಾಲವೂ ಕಳೆದುಹೋಯಿತು ಈ ರಾಜಾಜ್ಞೆಯನ್ನು ಮೀರಿದ ಭಯಕ್ಕಾಗಿ ಸುಗ್ರೀವನಬಳಿಗೆ ಹಿಂತಿರುಗಿ ಹೋಗಲಾರದೆ, ಇಲ್ಲಿ ಪ್ರಾಯೋಪವೇಶವನ್ನು ಮಾಡುತ್ತಿರುವೆವು ಅಲ್ಲಿಗೆ ನಾವು ಹಿಂತಿರುಗಿ ಹೋದರೂ ರಾಮನಾಗಲಿ, ಸುಗ್ರೀವನಾಗಲಿ, ಲಕ್ಷ ಣನಾಗಲಿ ಕೋಪಗೊಂಡರೆ ನಮಗೆ ಉಳಿಗಾಲವಿಲ್ಲವು ” ಎಂದನು ಇಲ್ಲಿಗೆ ಐವತ್ತೇಳನೆಯ ಸರ್ಗವು • ಸಂಪಾತಿಯು ಸೀತೆಯಿರುವ ಸ್ಥಾನವನ್ನು ವಾನರರಿಗೆ +m ಹೀಗೆ ಪ್ರಾಣತ್ಯಾಗಕ್ಕೆ ಸಿದ್ಧರಾಗಿರುವ ವಾನರರು ದೈನ್ಯದಿಂದ ಹೇ. ಳಿದ ಮಾತನ್ನು ಕೇಳಿ ಸಂಪಾತಿಯು, ತಾನೂ ದುಃಖದಿಂದ ಕಣ್ಣೀರನುಬಿ ತಿಳಿಸಿದುದು”