ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫ ಗರ್ಸ ೫೮ ] ಕಿಮೆಂಥಾಕಾಂಡವು. ಡುತ್ತ,ಉಚ್ಚ ಧ್ವನಿಯಿಂದ ಅವರನ್ನು ಕುರಿತು : ಎಲೈ ವಾನರರೆ' ಯುದ್ಧದ ↑ ಬಲಾಢನಾದ ರಾವಣನಿಂದ ಹತನಾದನೆಂದು ನೀವು ಹೇಳಿದ ಜಟಾಯು ವು ನನಗೆ ಒಡಹುಟ್ಟಿದ ತಮ್ಮನು ಆಹಾ ನನ್ನ ಪ್ರಿಯಸಹೋದರನನ್ನು ರಾ ವಣನು ಕೊಂದುದಾಗಿ ನಿಮ್ಮ ಬಾಯಿಂದ ಕೇಳುತ್ತಿದ್ದರೂ, ಮುಪ್ಪಿನಿಂದ ಲೂ,ರೆಕ್ಕೆಯಿಲ್ಲದುದರಿಂದಲೂ ಕೈಸಾಗದ ನಾನು ಅದನ್ನೂ ಸಹಿಸಿಕೊಂಡಿ ರಬೇಕಾಗಿದೆಯಲ್ಲಾ 'ಹಾ' ನನ್ನ ತಮ್ಮನಿಗೆ ವೈರಿಯಾದ ರಾವಣನನ್ನು ಕೊರ ದು ಹಗೆಯನ್ನು ತೀರಿಸಿಕೊಳ್ಳುವುದಕ್ಕೂ ಈಗ ನನಗೆ ಶಕ್ತಿಯಿಲ್ಲದೆ ಹೋ ಯಿತೆ' ನಾನೇನು ಮಾಡಲಿ'ಹೀಗೆ ನನ್ನ ಗರಿಗಳು ಬೆಂದುಹೋಗಿರುವುದಕ್ಕೆ ಕಾ ರಣವನ್ನು ಹೇಳುವೆನು ಕೇಳಿರಿ'ಪೂವ್ವದಲ್ಲಿ ವೃತ್ರಾಸುರನ ವಧವು ನಡೆದಾಗ, ಅಣ್ಣತಮ್ಮಂದಿರಾದ ನಾವಿಬ್ಬರೂ, ಒಬ್ಬರಿಗೊಬ್ಬರಿಗಿರುವ ವೇಗದ ತಾರತ ಮ್ಯವನ್ನು ಪರೀಕ್ಷಿಸಿನೋಡಬೇಕೆಂಬ ಹಟದಿಂದ, ಸಹಸ್ರಕಿರಣಗಳಿಂದ ಜ್ಯ ಲಿಸುವ ಸೂರನ ಸಮೀಪದವರೆಗೆ ಹಾರಿಹೋದೆವು ನಾವಿಬ್ಬರೂ, ಸುತ್ತಿ ಸುತ್ತಿ ಮಂಡಲಗತಿಯಿಂದಲೇ ತಿರುಗುತ್ತ, ಮಹಾವೇಗದಿಂದ ಆಕಾಶ ಮಾರ್ಗದಲ್ಲಿ ಬಹುದೂರವನ್ನು ಕಳೆದುಹೋದೆವು ಅಷ್ಟರಲ್ಲಿ ಸೂರನು ಆಕಾಶಮಧ್ಯಕ್ಕೆ ಬಂದನು ಅವನ ತಾಪವೂ ತೀಕ್ಷವಾಗುತ್ತ ಬಂದಿತು ನನ್ನ ತಮ್ಮನಾದ ಜಟಾಯುವು ಆ ಬಿಸಿಲಿನ ತಾಪಕ್ಕೆ ತಾಳಲಾರದೆ ಕಂದಿಹೋ ಡನು. ಹೀಗೆ ಸದ್ಯಕೀಠಣದಿಂದ ಬೆಂದುಹೋಗುತ್ತಿರುವ ತಮ್ಮನನ್ನು ನೋಡಿ ನನಗೆ ಆತನಲ್ಲಿ ಮರುಕಹುಟ್ಟಿತು ಆಗ ನಾನು, ನನ್ನ ರೆಕ್ಕೆಗಳಿಂದ ಆತ ನನ್ನು ಬಿಸಿಲಿಗೆ ತಾಗದಂತೆ ಮರೆಸಿಟ್ಟು ಕೊಂಡೆನು ಅದರಿಂದ ನನ್ನ ರೆಕ್ಕೆಗಳೆರ ಡೂ ಬೆಂದುಹೋದುವು ಆಗಲೇ ನಾನು ಅಲ್ಲಿಂದ ಈ ವಿಂಧ್ಯಪರೈತದಲ್ಲಿ ಬಿನು ಇದುವರೆಗೆ ಆ ನನ್ನ ತಮ್ಮನ ಗತಿಯೇನಾಯಿತೆಂದು ನನಗೆ ತಿಳಿದಿ ರಲಿಲ್ಲ ರೆಕ್ಕೆ ಮುರಿದು ಇಲ್ಲಿ ಬಿದ್ದಿರುವೆನು "ಎಂದನು ಸಂಪಾತಿಯು ಹೇಳಿದ ಮಾತನ್ನು ಕೇಳಿ ಯುವರಾಜನಾದ ಅಂಗದನು ಆ ಸಂಪಾತಿಯನ್ನು ಕುರಿತು ಓಹೋ' ನೀನು ಆ ಜಟಾಯುವಿಗೆ ಅಣ್ಣನೆ? ಇಲ್ಲಿ ನಾವು ಆಡುತಿದ್ದ ಮಾ ತುಗಳೆಲ್ಲವೂ ನಿನ್ನ ಕಿವಿಗೆ ಬಿದ್ದು ನೆ? ನೀನು ಜಟಾಯುವಿಗೆ ಸಹೋದರನಾ ಗಿದ್ದ ಪಕ್ಷದಲ್ಲಿ ನಿನಗೂ ರಾವಣವೃತ್ತಾಂತವು ತಿಳಿದಿರಬಹುದು ಆ ರಾಕ್ಷಸ