ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೩ ಶ್ರೀಮದ್ರಾಮಾಯಣವು [ಸರ್ಗ ೫೮ ನೆಲ್ಲಿರುವನೆಂಬುದು ನಿನಗೆ ತಿಳಿದಿದ್ದರೆ ಕೃಪೆಯಿಟ್ಟು ನಮಗೆ ತಿಳಿಸು, ಮುಂ ದೆಬರುವ ಅನರ್ಥಗಳನ್ನು ತಿಳಿಯದೆ ಅಕೃತ್ಯವನ್ನು ನಡೆಸಿದ, ಆ ನೀಚರಾಕ್ಷ ಸನು ವಾಸಮಾಡುವ ಸ್ಥಳವು, ಸಮೀಪವಾದರೂ, ದೂರವಾದರೂ ನಿನಗೆ ತಿಳಿದಿದ್ದರೆ ಹೇಳು” ಎಂದನು ಆಗ ಮಹಾತೇಜಸ್ವಿಯಾದ ಸಂಪಾತಿಯು ತನ್ನ ಗುಣಕ್ಕನುರೂಪವಾಗಿ ಆ ವಾನರರೆಲ್ಲರ ಕಿವಿಗಳಿಗೂ ಅಮೃತವರ್ಷ ವನ್ನು ಕರೆದಂತೆ ಒಂದಾನೊಂದು ಮಾತನ್ನು ಹೇಳುವನು, ಎಲೈ ವಾನರ ರೇ' ನಾನಾದರೋ ಪರಮವೃದ್ಧನು ಕೇವಲತಿಶ್ಯಂತುವಾದ ದೃಢ ವಾಗಿರುವೆನು ನನ್ನ ರೆಕ್ಕೆಗಳೂ ಬೆಂದುಹೋಗಿರುವುವು ನನ್ನ ವೀಲ್ಯವೆಲ್ಲವೂ ಉಡುಗಿಹೋದುವು ನನ್ನಿಂದ ಯಾವ ಕಾರವಾದೀತು?ನಾನು ಯಾರಿಗೆ ಯಾ ವಪ್ರಯೋಜನವನ್ನು ಮಾಡಬಲ್ಲೆನು? ಆದರೆ ವಾಾತ್ರದಿಂದಲಾದರೂ ಈಗ ರಾಮನಿಗೆ ಉತ್ತಮವಾದ ಸಹಾಯವನ್ನು ಮಾಡಲಾರೆನೆ' ಎಲೈ ವಾನ ರರೆ' ನೀವು ನನ್ನನ್ನು ಕುರಿತು 1 ರಾವಣವೃತ್ತಾಂತವನ್ನು ನೀನು ಬಲ್ಲವನಾ ಗಿದ್ದರೆ ತಿಳಿಸು” ಎಂದು ಹೇಳಿದಿರಲ್ಲವೆ? ಈ ಲೋಕದಲ್ಲಿ ನನಗೆ ತಿಳಿಯದು ದೊಂದೂ ಇಲ್ಲ ನಾನು ವರುಣಲೋಕಗಳೆಲ್ಲವನ್ನೂ ಬಲ್ಲೆನು ತ್ರಿವಿ ಕ್ರಮರೂಪಿಯಾದ ಶ್ರೀಮಹಾವಿಷ್ಣುವು ಸಾಧಿಸಿದ ಊರ್ಧ್ವಲೋಕಗಳೆಲ್ಲ ವನ್ನೂ ಬಲ್ಲೆನು ದೇವಾಸುರ ಯುದ್ಧಗಳನ್ನೂ ನೋಡಿರುವೆನು ಆದಿಯ ಕ್ಲಿ ನಡೆದ ಅಮೃತಮಥನವನ್ನೂ ಕಂಡಿರುವೆನು ಈಗ ನೀವು ಬಂದಿರುವುದು ರಾಮನ ಕಾರವಾದುದರಿಂದ, ನಾನೂ ಆಕಾರಕ್ಕೆ ತಕ್ಕ ಸಹಾಯವನ್ನು ಮಾ ಡಿಯೇ ತೀರಬೇಕು ಆದರೆ ಮುಪ್ಪಿನಿಂದ ನನ್ನ ತೇಜಸ್ರ ಕುಂದಿಹೋಯಿ ತು, ನನ್ನ ಪ್ರಾಣಗಳಲ್ಲಿಯೂ ಬಲವು ತಪ್ಪಿ ಹೋಯಿತು ನನ್ನ ದೇಹದ ಆವ ಯವಗಳೂ ಬಿಗಿತಪ್ಪಿದುವು ಈಗ ಕೆಲವುದಿನಗಳ ಕಳಗೆ ದುರಾತ್ಮನಾದ ರಾವಣನು, ರೂಪಸಂಪನ್ನೆ ಯಾಗಿಯೂ, ಆಭರಣಭೂಷಿತೆಯಾಗಿಯೂ ಇದ್ದ ಒಬ್ಬ ಯುವತಿಯನ್ನು ಅಂತರಕ್ಷದಲ್ಲಿ ಎತ್ತಿಕೊಂಡು ಹೋಗುತ್ತಿರುವು ದನ್ನು ಕಂಡೆನು ಆಗ ಅವಳು ಒಮ್ಮೊಮ್ಮೆ ರಾಮಾ'ರಾಮಾ!!” ಎಂದೂ ಮತ್ತೊಮ್ಮೆ«ಲಕ್ಷಣಾ'ಲಕ್ಷಣಾ!!ಎಂದೂ ಆಶಿಸುತ್ತಾನುತೋ ಟಿದ್ದ ಆಭರಣಗಳನ್ನು ಕಿತ್ತೆಸೆದು, ರಾವಣನ ಕೈಯಿಂದ ಬಿಡಿಸಿಕೊಳ್ಳುವುದ