ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೮.] ಕಿಟ ೦ಥಾರಂಡವು. ೧೩೩೬ ಕ್ಯಾಗಿ ಕೈಕಾಲುಗಳನ್ನೊದರುತ್ತಿದ್ದಳು ಪರತಾಗ್ರದಮೇಲೆ ಸರಕಾಂ ತಿಯು ಪ್ರಸರಿಸುವಂತೆಯೂ, ಮೇಫುದಲ್ಲಿ ಮಿಂಚು ಹೊಳೆಯು ವಂತೆಯೂ, ಆರಾಕ್ಷಸನ ಕಪ್ಪಾದ ಮೈಮೇಲೆ,ಅವಳು ಧರಸಿದ್ದ ಪಟ್ಟೆ ಮಡಿಯಸೆರಗುಹಾ ರುತ್ತಿರುವುದನ್ನು ಕಂಡೆನು ರಾಮನ ಹೆಸರನ್ನು ಹಿಡಿದು ಕೂಗುತಿದ್ದುದರಿಂ ದ, ಅವಳೇ ಸೀತೆಯೆಂದು ನನಗೆ ತೋರುವುದು ಆ ರಾಕ್ಷಸನಿರುವ ಸ್ಥಳವಾವು ದೆಂಬುದನ್ನೂ ನಿಮಗೆ ಹೇಳುವೆನು ಕೇಳಿರಿ ! ಆ ರಾಕ್ಷಸನು ಸಾಕ್ಷಾದ್ವಿಶ್ರವ ಸ್ಸಿನ ಮಗನು ಕುಬೇರನಿಗೆ ಒಡಹುಟ್ಟಿದವನು ಅವನು ಲಂಕೆಯೆಂಬ ಪಟ್ಟ, ಣದಲ್ಲಿ ವಾಸವಾಗಿರುವನು ಅವನಿಗೆ ರಾವಣನೆಂದು ಹೆಸರು ಇದೊ' ಇತ್ಯ ಲಾಗಿ ಈ ಸಮುದ್ರತೀರಕ್ಕೆ ನೂರುಗಾವುದಗಳ ದೂರದಲ್ಲಿ ಒಂದಾನೊಂದು ದ್ವೀಪವಿರುವುದು ಅದರಲ್ಲಿಯೇ ಸುಂದರವಾದ ಆ ಲಂಕಾನಗರವಿರುವುದು. ವಿಶ್ವಕಮ್ಮನೇ ಅದನ್ನು ಅಷ್ಟು ರಮಣೀಯವಾಗಿ ನಿರಿಸಿರುವನು ಅದಕ್ಕೆ ಜಿ «ದ ಜಗಲಿಗಳುಳ್ಳ ಸುರ್ವಣಮಯವಾದ ಒಂದುಮಹಾದ್ವಾರವಿರುವುದು. ಅದರಸುತ್ತಲೂ ಸೂಯ್ಯನಂತೆ ಜ್ವಲಿಸುವ ಮಹಾಪ್ರಾಕಾರವಿರುವುದು ಆ ಲಂಕೆಯಲ್ಲಿಯೇ ವಿದೇಹಪಿಯು ಮೊದಲು ತಾನು ಧರಿಸಿದ್ದ ಆ ಕಾಶೇ ಯವಸ್ತ್ರದೊಡನೆ ದುಃಖಿತೆಯಾಗಿ ಸೆರೆಯಲ್ಲಿಡಲ್ಪಟ್ಟಿರುವಳು ರಾವಣನ ಅಂತಃಪುರದಲ್ಲಿ ಅನೇಕಘೋರರಾಕ್ಷಸಿಯರು ಅವಳಮೇಲೆ ಕಾವಲಿರುವರು. ಅಲ್ಲಿಗೆ ಹೋದರೆ ನೀವು ಜನಕಪುತ್ರಿಯಾದ ಆ ಸೀತೆಯನ್ನು ನೋಡಬಹುದು. ಸುತ್ತಲೂ ಸಮುದ್ರದಿಂದ ಪರಿವೃತವಾದುದರಿಂದ, ಆ ಲಂಕೆಯು ಶತ್ರುಗಳ ಪ್ರವೇಶಕ್ಕವ ಕಾಶವಿಲ್ಲದೆ ಸುರಕ್ಷಿತವಾಗಿರುವುದು ನೀವು ಸಂಪೂರ್ಣವಾಗಿ ನೂರುಗಾವುದಗಳವರೆಗೆ ಈ ಸಮುದ್ರವನ್ನು ದಾಟಿ, ಅದರ ದಕ್ಷಿಣತೀರಕ್ಕೆ ಹೋದರೆ, ಆಗ ರಾವಣನನ್ನು ನೋಡಬಹುದು, ಎಲೈವಾನರರೆ' ನೀವು ತೀ ಪ್ರಾದಲ್ಲಿ ಆ ಲಂಕೆಗೆ ಹೋಗಿರಿ ಅಲ್ಲಿಗೆ ಹೋದರೆ ನೀವು ಸುಖವಾಗಿ ಸೀತೆ ಯನ್ನು ಕಂಡು ಹಿಂತಿರುಗಿ ಬರುವಿರೆಂದು ನನ್ನ ದಿವ್ಯಜ್ಞಾನದಿಂದಲೇ ನಾನು ತಿಳಿದಿರುವೆನು ಕುಳಿಂಗಗಳೂ, ಮತ್ತು ಅವುಗಳಂತೆ ಧಾನ್ಯಜೀವಿಗಳಾದ ಕೆಲ ವುಪಕ್ಷಿಗಳೂ, ಆಕಾಶದಲ್ಲಿ ಭೂಮಿಗೆ ಸಮೀಪವಾಗಿರುವ ಮೊದಲನೆಯದಾ ರಿಯಲ್ಲಿ ಸಂಚರಿಸುವುವು. ಕಾಗೆಗಳೂ, ಫಲಮೂಲಗಳಿಂದ ಜೀವಿಸುವ ಇತರ