ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೮ ಶ್ರೀಮದ್ರಾಮಾಯಣವು [ಸರ್ಗ, ೫೮, ಪಕ್ಷಿಗಳೂ ಸಂಚರಿಸತಕ್ಕ ದಾರಿಯು ಎರಡನೆಯದು ನೀರುಕಾಗೆಗಳೂ, ಕಾಂಚಗಳೂ, ಗೊರವಂಕಗಳೂ, ಅದಕ್ಕೆ ಮೇಲೆ ಮೂರನೆಯದಾರಿಯನ್ನು ಹಿಡಿದು ಹೋಗುವುವು ಗಿಡಗಗಳು ನಾಲ್ಕನೆಯದಾರಿಯನ್ನೂ, ಹದ್ದುಗಳು ಐದನೆಯದಾರಿಯನ್ನೂ ಹಿಡಿದುಹೋಗುವುವು ಬಲದಲ್ಲಿಯೂ, ವೀರದಲ್ಲಿ ಯೂ ಮೇಲೆನಿಸಿಕೊಂಡು, ರೂಪವನಗಳಿಂದ ಶೋಭಿಸುವ ಹಂಸಗಳ ದಾರಿಯು ಆರನೆಯದು ವಿನತೆಯ ಮಕ್ಕಳೆನಿಸಿಕೊಂಡ ಅರುಣಗರುಡರ ವಂ. ಶದಲ್ಲಿ ಹುಟ್ಟಿದ ಪಕ್ಷಿಗಳಿಗೆ, ಇವೆಲ್ಲಕ್ಕಿಂತಲೂ ಮೇಲಾದ ಏಳನೆಯಮಾರ್ಗ ವುಂಟು ಎಲೈವಾನರೋತ್ತಮರೆ' ನಾನೂ, ನನ್ನ ಕುಲದಲ್ಲಿ ಹುಟ್ಟಿದವರೂ, ವಿನತಾಪತ್ರನಾದ ವರುಣನಿಂದ ಜನಿಸಿದವರು ಆದುದರಿಂದ ನಮ್ಮೆಲ್ಲರಿಗೂ ಏಳನೆಯ ದಾರಿಯು ನಾನು ಈಗ ಇಲ್ಲಿದ್ದರೂ, ನನಗೆ ಗರುಡನಂತೆ ದಿವ್ಯದೃ ಸ್ಮಿಯೂ, ಅವನಂತೆಯೇ ಮಹಾಬಲವೂ ಇರುವುದರಿಂದ ಇಲ್ಲಿಂದಲೇ ನಾನು ಸೀತೆಯನ್ನೂ , ರಾವಣನನ್ನೂ ಚೆನ್ನಾಗಿ ನೋಡುತ್ತಿರುವೆನು ಆಹಾರಬಲ ದಿಂದಲೂ, ಸ್ವಾಭಾವಿಕವಾದ ಶಕ್ತಿಯಿಂದಲೂ ನಮ್ಮ ದೃಷ್ಟಿಯು ಯಾ ವಾಗಲೂ ಸಂಪೂರ್ಣವಾಗಿ ನೂರುಗಾವುದಗಳವರೆಗೆ ಪ್ರಸರಿಸುವುದು ಕೋಳಿಗಳಿಗೆ ಅವುಗಳ ಕಾಲಿನ ತಳದಲ್ಲಿ ದೈವದಿಂದ ವೃತ್ತಿಯು ಕಲ್ಪಿಸಲ್ಪಟ್ಟಿ ರುವಂತೆ, ನಮಗೆ ಬಹುದೂರದಿಂದಆಹಾರವನ್ನು ಗ್ರಹಿಸಿಕೊಳ್ಳತಕ್ಕ ದೃಷ್ಟಿ ಶಕ್ತಿಯು ದೈವವಿಹಿತವಾಗಿರುವುದು ಸೀತೆಯನ್ನು ಕದ್ದು, ನಿಂಹಿತಕಾಧ್ಯವ ನ್ನು ಮಾಡಿದ ದುರಾತ್ಮನಾದ ರಾವಣನನ್ನು , ಈಗ ನೀವೇ ರಾಮನ ಕೈಯಿಂದ ಕೊಲ್ಲಿಸಿದರೆ, ನಾನೂ ನನ್ನ ತಮ್ಮನವಿಷಯವಾಗಿ ಆ ರಾವಣನಮೇಲೆ ಹಗೆ ತೀರಿಸಿಕೊಳ್ಳಬೇಕಾದ ಪ್ರತಿಕ್ರಿಯೆಯನ್ನು ಸಾಧಿಸಿದಂತಾಗುವುದು ಈಗನೀ ವು ಈ ಸಮುದ್ರವನ್ನು ದಾಟುವುದಕ್ಕೆ ಉಪಾಯವೇನೆಂಬುದನ್ನು ಮೊದಲು ನೋಡಬೇಕು ನೀವು ಅಲ್ಲಿಗೆ ಹೋಗಿ ಸೇರಿದಮೇಲೆ, ಸೀತೆಯನ್ನು ನೋಡಿ ಇಷ್ಟಸಿದ್ಧಿಯನ್ನು ಹೊಂದಿ, ಸುಖವಾಗಿ ಕಿಷ್ಕಂಥೆಗೆ ಬಂದುಸೇರುವುದರಲ್ಲಿ ಸಂದೇಹವಿಲ್ಲ ಎಲೈಮಹಾತ್ಮರೆ' ಸ್ವರ್ಗವನ್ನು ಹೊಂದಿದ ಮಹಾತ್ಮನಾದ ನನ್ನ ತಮ್ಮನಾದ ಜಟಾಯುವಿಗೆ ನಾನು ಜಲತರ್ಪಣವನ್ನು ಮಾಡಬೇಕು ಅದಕ್ಕಾಗಿ ನೀವು ನನ್ನನ್ನು ಸಮುದ್ರತೀರಕ್ಕೆ ಸಾಗಿಸಬೇಕೆಂದುಕೇಳಿಕೊಳ್ಳು