ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫೯.] ಕಿಂಧಾಕಾಂಡವು. ೧೩೩೯ ವೆನು”ಎಂದನು ಇದನ್ನು ಕೇಳಿ ಆ ವಾನರರು ರೆಕ್ಕೆಯಿಲ್ಲದ ಆ ಪಕ್ಷಿರಾಜನನ್ನು ಸಮುದ್ರತೀರಕ್ಕೆ ಸೇರಿಸಿ, ಅಲ್ಲಿ ಅವನು ಜಟಾಯುವಿಗೆ ಜಲತರ್ಪಣವನ್ನು ಮಾಡಿದಮೇಲೆ, ಅವನನ್ನು ಮೊದಲಿದ್ದ ಸ್ಥಳಕ್ಕೆ ಕರೆತಂದು ಬಿಟ್ಟು, ತಮಗೆ ರಾವಣವೃತ್ತಾಂತವು ತಿಳಿಯಿತೆಂಬ ಸಂತೋಷದಲ್ಲಿ ಮಗ್ನರಾಗಿದ್ದರು ಇಲ್ಲಿ ಗೆ ಐವತ್ತೆಂಟನೆಯಸರ್ಗವು.

  • ಪವ: ಜಾಂಬವಂತನು ಕೇಳಿದುದರಮೇಲೆ, ರಾವ) ) ಣನು ಸೀತೆಯನ್ನ ಪಹರಿಸಿದ ವೃತ್ತಾಂತವನ್ನು ಸಂಪಾ | 1 ತಿಯು ತನ್ನ ಮಗನಾದ ಸುಪಾರ್ಶ್ವನಿಂದ ತಾನು

ತಿಳಿದುದಾಗಿ ಹೇಳಿದುದು ಗೃಢರಾಜನಾದ ಸಂಪಾತಿಯ ಮುಖದಿಂದ ಆ ವಾನರರು ಅಮೃತ ದಂತೆ ಇಂಪಾದ ಈವಾಕ್ಯಗಳನ್ನು ಕೇಳಿ, ಪರಮಸಂತೋಷದಿಂದ ಪುಳಕಿತ ವಾದ ಮೈಯುಳ್ಳವರಾಗಿದ್ದರು ಆಗ ಅಲ್ಲಿದ್ದ ವಾನರರಿಗೆಲ್ಲಾ ಮಾರ್ಗದರ್ಶಿ ಯೆನಿಸಿದ ವೃದ್ಧನಾದ ಜಾಂಬವಂತನು,ಇತರವಾನರರೊಡನೆ ಆತಿಸಂಭ್ರಮ ದಿಂದ ತಟ್ಟನೆ ಮೇಲೆದ್ದು, ಮುಂದೆಬಂದು, ಸಂಪಾತಿಯನ್ನು ನೋಡಿ ಅ ಯಾ' ಸೀತೆಯಲ್ಲಿರುವಳು? ಅವಳನ್ನು ಕದ್ದುಕೊಂಡುಹೋದವನಾರು? ಅ ದನ್ನು ನೋಡಿದವರಾರು? ಇದು ನಿನಗೆ ಹೇಗೆ ತಿಳಿಯಿತು? ಈ ವಿಷಯವೆಲ್ಲವ ನ್ಯೂ ನಮಗೆ ವಿವರವಾಗಿ ತಿಳಿಸುವೆಯಾ?ನೀನೇ ನಮಗೆ ಈಗ ದಿಕ್ಕಾಗಿರುವೆ? ಔದಂತೆ ಆರ್ಭಟಿಸಿ ಮೇಲೆಬಿಳುವ ರಾಮನ ಬಾಣಗಳಲ್ಲಿಯೂ, ಲಕ್ಷಣಪ್ಪ ಯುಕ್ತಗಳಾದ ಬಾಣಗಳಲ್ಲಿಯೂ ಇರುವ ವೇಗಗವನ್ನು ತಿಳಿಯದೆ, ಈಆಕಾರ ವನ್ನು ಮಾಡಿದವನಾವನು?”ಎಂದನು ಸೀತಾವೃತ್ತಾಂತವನ್ನು ಕೇಳುವು ದರಲ್ಲಿ ಅತ್ಯಾತುರವುಳ್ಳ ಆ ವಾನರರು ಪ್ರೀತಿಪೂರೈಕವಾಗಿ ಹೇಳಿದ ಈಮಾತನ್ನು ಕೇಳಿ, ಸಂಪಾತಿಯು ಅವರಲ್ಲಿ ಪರಮಪ್ರೇಮವುಳ್ಳವನಾಗಿ,

  • ಇದು ಮೊದಲಾಗಿ ಐದುಸರ್ಗಗಳು ಅನೇಕಕೋಶಗಳಲ್ಲಿ ಈ ಸರ್ಗ ಗಳಿಲ್ಲದಿದ್ದರೂ ಕಥಾಘಟ್ಟಲ್ಲಿ ಕೆಡುವುದಿಲ್ಲ, ಇದಲ್ಲದೆ ಪೂರೊಕ್ಕ ವಿಷಯಗಳಿಗೆ ಇಲ್ಲಿ ಕೆಲವು ವಿರೋಧಗಳೂ ತೋರುವುವು ಆದುದರಿಂದ ಇವು ಪ್ರಸ್ತಗಳೆಂದೇ ಊಹಿಸ ಬೇಕಾಗಿದೆ