ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪೦ ಶ್ರೀಮದ್ರಾಮಾಯಣವು - (ಸರ್ಗ. ೫೯ ಅವರನ್ನು ಸಮಾಧಾನಪಡಿಸುತ್ತ, ಪುನಃ ಈ ಮಾತುಗಳನ್ನು ಹೇಳುವನು. (ಎಲೈವಾನರರೆ'ರಾವಣನು ಸೀತೆಯನ್ನು ಕದ್ದು ಯ ವೃತ್ತಾಂತವನ್ನು ನಾ ನು ಯಾರಿಂದ, ಹೇಗೆ ಕೇಳಿಬಲ್ಲೆನೆಂಬುದನ್ನೂ, ಆಸೀತೆಯು ಈಗ ಎಲ್ಲಿರುವ ಳೆಂಬುದನ್ನೂ ಹೇಳುವೆನು ಕೇಳಿರಿ ! ಬಹುಯೋಜನಗಳ ವಿಸ್ತಾರವುಳ್ಳ ದು ರ್ಗಮವಾದ ಈ ಪದ್ವತದಲ್ಲಿಯೇ ಬಹುಕಾಲದಿಂದ ನಾನು ಶಕ್ತಿಗುಂದಿ ವಿಠ್ಯವಡಗಿ, ವಾರ್ಧಕದಿಂದಲೂ ಬಹಳವಾಗಿ ಬಳಲಿ ಬಿದ್ದಿದ್ದೆನು ಈ ದು ರವಸ್ಥೆಯಲ್ಲಿರುವ ನನ್ನನ್ನು ನೋಡಿ ಸುಪಾರ್ಶ್ವನೆಂಬ ನನ್ನ ಮಗನು, ಆಯಾ ಕಾಲಕ್ಕೆ ಆಹಾರವನ್ನು ತಂದುಕೊಟ್ಟು ನನ್ನನ್ನು ಪೋಷಿಸುತ್ತಿದ್ದನು. ಗಂಧರೂರಿಗೆ ಕಾಮವೆಂಬುದು ತೀವ್ರವಾಗಿರುವುದು ಸರ್ಪಗಳಿಗೆ ಕೂಪವು. ತೀವ್ರವು ಮೃಗಗಳಿಗೆ ಭಯವು ಅತಿ ತೀವ್ರವು ಪಕ್ಷಿವರ್ಗಗಳಲ್ಲಿ ಸೇರಿದ ನಮ ಗಾದರೋ ಹಸಿವೆಂಬುದು ಬಹಳತೀಕ್ಷ್ಯವು ಹೀಗಿರುವಾಗ ಒಮ್ಮೆ ನನ್ನ ಮಗನಾದ ಸುಪಾರ್ಶ್ವನು, ಸಂಜೆಯಹೊತ್ತಿನಲ್ಲಿ ಹಸಿವಿನಿಂದ ಆಹಾರಕ್ಕಾಗಿ ಆತುರಗೊಂಡಿರುವ ನನ್ನ ಬಳಿಗೆ ಯಾವುದೊಂದಾಹಾರವನ್ನೂ ತಾರದೆ ಬರೀ ಕೈಯಿಂದ ಬಂದನು ನಾನು ಮೊದಲೇ ಹಸಿವುಬಾಯಾರಿಕೆಗಳಿಂದ ಬಳಲಿ ದ್ವುದಲ್ಲದೆ, ವೃದ್ಧನಾಗಿಯೂ ಇದ್ದುದರಿಂದ್ರಬರಿಕೈಯಿಂದ ಮುಂದೆ ಬಂ ದುನಿಂತ ಆಮಗನನ್ನು ನೋಡಿ ಕೋಪದಿಂದಹೆದರಿಸಿದನು ಅಪುತ್ರನಾದರೋ ನನ್ನಲ್ಲಿ ನಿಜವಾದಭಕ್ತಿಯುಳ್ಳವನು ನಾನು ಹಸಿವಿನಿಂದ ಕೋಪಗೊಂಡಿರು ವುದನ್ನು ನೋಡಿ ಅವನು ಎಷ್ಟೊವಿಧದಿಂದ ಮನ್ನಣೆಯನ್ನು ಬೇಡುತ್ತ 'ಎಲೆ ತಾತನೆ' ನಾನು ಎಂದಿನಂತೆಯೇ ಕಾಲಕ್ಕೆ ಸರಿಯಾಗಿ ಆಹಾರವನ್ನು ಹುಡು ಕಿ ತರುವುದಕ್ಕಾಗಿ ಹಾರಿಹೋದೆನು ಮಹೇಂದ್ರಪಕ್ವತದ ದ್ವಾರವನ್ನು ಅಡ್ಡ ಕಟ್ಟಿಕುಳಿತೆನು ಅಲ್ಲಿ ಸಮುದ್ರಸಂಚಾರಿಗಳಾದ ಸಾವಿರಾರು ಜಂತುಗಳನ್ನು ಹಿಡಿಯುವುದಕ್ಕಾಗಿನಾನೊಬ್ಬನೇತಲೆಬಗ್ಗಿಸಿಕೊಂಡು ಆದಾರಿಗಡಲಾಗಿದೆ ನು ಆ ಸಂದರ್ಭದಲ್ಲಿ ಕಾಡಿಗೆಯಂತೆ ಕಪ್ಪಮೈಯುಳ್ಳ ಪುರುಷನೊಬ್ಬನು ಸೂರೋದಯಕ್ಕೆ ಸಮಾನವಾದ ದೇಹಕಾಂತಿಯುಳ್ಳ ಒಬ್ಬ ಹೆಂಗಸನ್ನು ಎ ತಿಕೊಂಡು ಹೋಗುತ್ತಿರುವುದನ್ನು ನೋಡಿದೆನು ನಾನು ಆಹಾರಕ್ಕಾಗಿಯೇ ಅಲ್ಲಿ ಕುಳಿತಿದ್ದುದರಿಂದ, ಆ ಎರಡುವ್ಯಕ್ತಿಗಳನ್ನೂ ಆಹಾರವಾಗಿ ಹಿಡಿಯಬೆ