ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪೨ ಶ್ರೀಮದ್ರಾಮಾಯಕನ [ಸರ್ಗ ೬೦. ಚಿತವಾದ ಗುಣಗಳೂ ತಕ್ಕಮಟ್ಟಿಗೆ ಹೊಂದಿರುವುದರಿಂದ, ಅದರಿಂದ ನಾನು ನಿಮಗೆ ಹೇಗೆ ಸಹಾಯವನ್ನು ಮಾಡಬಹುದೋ ಅದನ್ನು ಮಾತ್ರ ಹೇಳುವೆ ನು ಅದನ್ನು ಕೇಳಿ ನಿಮ್ಮ ಪೌರುಷಬಲದಿಂದ ನಿಮ್ಮ ಕಾರವನ್ನು ನೀವೇ ಸಾಧಿಸಿಕೊಳ್ಳಬೇಕು ನಾನು ಮಾತಿನಿಂದಲೂ, ಬುದ್ಧಿಯಿಂದಲೂ ನಿಮಗೆ ನನ್ನಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಬಲ್ಲೆನು ರಾಮನ ಕಾವ್ಯ ವೂ ನನ್ನ ಕಾಲ್ಯವೇ ಹೊರತು ಬೇರೆಯಲ್ಲ ಇದರಲ್ಲಿ ಸಂದೇಹವಿಲ್ಲ 'ವಾನರರಾ ಜನಾದ ಸುಗ್ರೀವನು ದೇವತೆಗಳಿಗೂ ಇದಿರಿಸಲಾರದ ಬುದ್ಧಿಯಿಂದ ಲೂ, ಬಲದಿಂದಲೂ, ಧೈಯ್ಯದಿಂದಲೂ ಕೂಡಿದ ನಿಮ್ಮನ್ನು ಈ ಕಾರ್ ಕೈ ಕಳುಹಿಸಿರುವನು ಇದಲ್ಲದೆ ಆ ರಾಮಲಕ್ಷಣರ ತೀಕ್ಷಬಾಣಗಳಾ ದರೋ ಮೂರುಲೋಕಗಳನ್ನೂ ರಕ್ಷಿಸುವುದಕ್ಕಾಗಲಿ, ಶಿಕ್ಷಿಸುವುದಕ್ಕಾ ಗಲಿ ಸಮರ್ಥಗಳಾಗಿರುವುವು ಆ ರಾವಣನು ತೇಜಸ್ಸಿನಿಂದಲೂ, ಬಲದಿಂದ ಊ,ಎಷ್ಟೇ ಸಮರ್ಥನಾಗಿದ್ದರೂ ಇರಲಿ' ನಿಮ್ಮ ಸಾಮರ್ಥ್ಯವೂ ಅಸಾಧಾ ರಣವಾದುದರಿಂದ, ನಿಮಗೆ ಅಸಾಧ್ಯವಾದುದೊಂದೂ ಇಲ್ಲವು ಇನ್ನು ಕಾ ಲವನ್ನು ಕಳೆದುದುಸಾಕು ಬುದ್ಧಿವಂತರಾದ ನಿಮ್ಮಂತವರು ಕಾಠ್ಯವು ಬಂ ದೊದಗಿದಾಗ ಆಲಸ್ಯಮಾಡಬಾರದಲ್ಲವೆ' ಅದುದರಿಂದ ಶೀಘ್ರದಲ್ಲಿ ಮುಂದಿ ನ ಕಾರಕ್ಕೆ ಯತ್ನಿಸಿರಿ” ಎಂದನು ಇಲ್ಲಿಗೆ ಐವತ್ತೊಂಬತ್ತನೆಯಸರ್ಗವು | { ಸಂಪಾತಿಯು ತನ್ನ ಹಿಂದಿನ ವೃತ್ತಾಂತವನ್ನು . - ವಾನರರಿಗೆ ಹೇಳಿಕೊಂಡುದು ಸಂಪಾತಿಯು ಜಟಾಯುವಿಗೆ ಜಲತರ್ಪಣವನ್ನು ಮಾಡಿ, ಸ್ನಾನ ಮಾಡಿದ ಮೇಲೆ, ವಾನರರೆಲ್ಲರೂ, ಆ ಪರತದಲ್ಲಿ ಅವನ ಸುತ್ತಲೂ ಕುಳಿ ತರು ಹೀಗೆ ಸಮಸ್ತವಾನರರಿಂದ ಪರಿವೃತನಾದ ಸಂಪಾತಿಯು ಸಮೀ ಪದಲ್ಲಿದ್ದ ಅಂಗದನನ್ನೂ, ಅವನ ಸುತ್ತಲೂ ಇದ್ದ ವಾನರರನ್ನೂ ನೋಡಿದ ನು ಮೊದಲು ನಿಶಾಕರಮಹರ್ಷಿಯು ಹೇಳಿದಂತೆ, ಈ ವಾನರರ ದರ್ಶ ನದಿಂದ ತನಗೆ ಶಾಪವಿಮೋಚನಕಾಲವು ಬಂದೊದಗಿತೆಂದು ತೋರಿತು ಅದ ರಿಂದ ಸಂಪಾತಿಯು ಪರಮಸಂತೋಷಯುಕ್ತನಾಗಿ, ಆ ವಾನರರನ್ನು