ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬೦] ಕೆಮ್ಮಿಂಧಾಕಾಂಡವು. ೧೬೪೩ ಕುರಿತು ( ಎಲೈ ವಾನರರೆ ! ನೀವೆಲ್ಲರೂ ನಾನು ಹೇಳುವ ಮಾ ತನ್ನು ಸಾವಧಾನವಾಗಿ ಕೇಳಬೇಕು ನನಗೆ ಸೀತಾದೇವಿಯ ವೃತ್ತಾಂತವು ತಿಳಿದ ರೀತಿಯನ್ನೂ ಯಥಾರ್ಥವಾಗಿ ಹೇಳುವೆನು ಪೂತ್ವದಲ್ಲಿ ನಾನು ಸೂ ರನ ಬಿಸಿಲಿಗೆ ಸಿಕ್ಕಿ, ಅದರಿಂದ ಬೆಂದ ಮೈಯುಳ್ಳವನಾಗಿ, ಈ ವಿಂಧ್ಯಪಕ್ಷ, ತದ ಶಿಖರದಲ್ಲಿ ಬಿದ್ದೆನು ಆರುದಿನಗಳವರೆಗೆ ನನಗೆ ಮೈಮೇಲೆ ಪ್ರಜ್ಞೆಯೇ ಇರಲಿಲ್ಲ ಹೀಗೆ ಮೂರ್ಛಹೊಂದಿ ಪರವಶನಾಗಿದ್ದ ನಾನು ಆರುದಿನಗಳ ಮೇಲೆ ಪ್ರಜ್ಞೆ ಹೊಂದಿ ಕಣ್ಣು ಬಿಟ್ಟು ನೋಡಿದೆನು ಹಾಗೆ ನೋಡಿದಾಗಲೂ ಈ ಪ್ರದೇಶವಾವುದೆಂದೇ ನನಗೆ ತಿಳಿಯಲಿಲ್ಲ ದಿಗ್ಗಾಂತನಾಗಿ ನೋಡುತ್ತಿ ರುವಾಗ ಸಮುದ್ರತೀರಗಳಲ್ಲಿರುವ ಪ್ರತಗಳನ್ನೂ, ಅಲ್ಲಿನ ಸಮಸ್ತನದಿಗಳ ನ್ಯೂ ,ಕೊಳಗಳನ್ನೂ, ವನಗಳನ್ನೂ, ಆ ತೀರಪ್ರದೇಶವನ್ನೂ ಕಂಡಮೇಲೆ ಇದು ಈ ಪ್ರದೇಶವೆಂದು ಗೊತ್ತಾಯಿತು ಇದು ದಕ್ಷಿಣಸಮುದ್ರತೀರದ ಕ್ಲಿ, ಪಕ್ಷಿ ಸಮೂಹಗಳ ಸಂತೋಷಜೀವನಕ್ಕೆಡೆಯಾಗಿ, ಗುಹೆಗಳಿಂದಲೂ, ಶಿಖರಗಳಿಂದಲೂ ಕೂಡಿದ- ವಿಂಧ್ಯಪತದ ಭಾಗವೆಂದು ನಿಶ್ಚಯಿಸಿ ತಿಳಿದು ಕೊಂಡೆನು ಈ ಪ್ರದೇಶದಲ್ಲಿ ಮೊದಲು ಆತಿಪವಿತ್ರವಾಗಿ, ದೇವತೆಗಳಿಗೂ ಪೂಜ್ಯವಾದ ಒಂದು ಋಷ್ಯಾಶ್ರಮವಿದ್ದಿತು ಅಲ್ಲಿ ಉಗ್ರತಪಸ್ವಿಯಾದ ನಿ ಶಾಕರನೆಂಬ ಮಹರ್ಷಿಯೊಬ್ಬನಿದ್ದನು ಎಲೆ ಥರಜ್ಞರೆ' ಆ ಮಹರ್ಷಿಯು ಮೃತನಾದಂದಿನಿಂದ ನಾನೊಬ್ಬನೇ ಈ ಪ್ರದೇಶದಲ್ಲಿ ವಾಸಮಾಡು ತಿರುವೆನು ಹೀಗೆ ನಾನು ಏಕಾಕಿಯಾಗಿ ವಾಸಮಾಡುವುದಕ್ಕೆ ತೊಡಗಿ, ಇದುವರೆಗೆ ಎಂಟುಸಹಸ್ರವರುಷಗಳಾದುವು ಆ ಋಷಿಯಿದ್ದಾಗ ನಾನು ಎಷ್ಟೊಕಷ್ಟಪಟ್ಟು ನಿನ್ನೋನ್ನತವಾದ ಆ ವಿಂಧ್ಯಶಿಖರದಿಂದ ಮೆಲ್ಲಗೆ ಕೆ ಳಗಿಳಿದು, ತೀಕ್ಷವಾದ ದರ್ಭೆಗಳಿಂದ ತುಂಬಿದ ಈ ಆಶ್ರಮಭೂಮಿಗೂ ಬಂದು ಸೇರಿ, ಆ ನಿಶಾಕರಮಹರ್ಷಿಯನ್ನು ನೋಡಬೇಕೆಂದು ಪ್ರಯ ತ್ನಿಸಿದೆನು ಅದಕ್ಕೆ ಮೊದಲೇ ಜಟಾಯುವೂ, ನಾನೂ ಅನೇಕಾವರ್ತಿ ಅವನ ದರ್ಶನವನ್ನು ಮಾಡಿ ಆಗಾಗ ಅವನ ಸೇವೆಯಲ್ಲಿರುತ್ತಿದ್ದೆವು ಅವ ನು ಮಹಾನುಭಾವನು ಆ ಮಹರ್ಷಿಯ ಆಶ್ರಮದಲ್ಲಿ ಪುಷ್ಪಗಳಾಗಲಿ, ಫಲಗಳಾಗಲಿ ಇಲ್ಲದ ವೃಕ್ಷಗಳೇ ಇಲ್ಲವು ಆ ಆಶ್ರಮದ ಸಮೀಪಕ್ಕೆ