ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೪೪ ಶ್ರೀಮದ್ರಾಮಾಯಣವು (ಸರ್ಗ, ೬೦. ಬರುವಾಗಲೇ ಸುಗಂಧವಾಯುವು ಫುಮಫುಮಿಸಿಬೀಸುತ್ತಿರುವುದು ನಾ ನು ಆ ಪುಣ್ಯಾಶ್ರಮಕ್ಕೆ ಬಂದೊಡನೆ ಒಂದು ಮರದಕೆಳಗೆ ಕುಳಿತು, ಪೂ ಜ್ಯನಾದ ಆ ನಿಶಾಕರಮುನಿಯ ದರ್ಶನಾರ್ಥವಾಗಿ ನಿರೀಕ್ಷಿಸುತಿದ್ದೆನು ಇಷ್ಯರಲ್ಲಿ ಜಾಜ್ವಲ್ಯಮಾನವಾದ ತೇಜಸ್ಸುಳ್ಳವನಾಗಿ, ಯಾರಿಂದಲೂ ತಿ ರಸ್ತರಿಸಲಾರದ ತಪೋಮಹಿಮೆಯುಳ್ಳವನಾಗಿದ್ದ ಆ ಮಹರ್ಷಿಯು ಸ್ನಾ ನಮಾಡಿ ಉತ್ತರಾಭಿಮುಖವಾಗಿ ಬರುತ್ತೆ, ನನಗೆ ಸಮೀಪಿಸಿದುದನ್ನು ನೋ ಡಿದೆನು ಸಮಸ್ತಭೂತಗಳೂ, ಬ್ರಹ್ಮದೇವನನ್ನು ಸುತ್ತಿ ಸೇವಿಸುವಂತೆ ವನಚರಗಳಾದ ಕರಡಿಗಳೂ, ಚಮರಮೃಗಗಳೂ, ಹುಲಿಗಳೂ, ಸಹ್ಮಗ , ಸರ್ಪಗಳೂ, ಆನೆಗಳೂ, ಆ ಆಮಹರ್ಷಿಯನ್ನು ಸುತ್ತಿಕೊಂಡು ಅವ ನ ಸೇವೆಯನ್ನು ಮಾಡುತಿದ್ದುವು ರಾಜನು ಅಂತಃಪುರಕ್ಕೆ ಸೇರಿದಮೇಲೆ ಅ ವನ ಪರಿವಾರಗಳು ರಾಜಾಜ್ಞೆಯನ್ನು ಹೊಂದಿ ಹಿಂತಿರುಗುವಂತೆ, ಆ ಮಹ ರ್ಷಿಯು ಆಶ್ರಮದೊಳಗೆ ಪ್ರವೇಶಿಸಿದಮೇಲೆ ಆ ಪ್ರಾಣಿಗಳೆಲ್ಲವೂ ತಮ್ಮ ತಮ್ಮ ನಿವಾಸಕ್ಕೆ ಹೋಗುತಿದ್ದುವು ಆ ಮಹರ್ಷಿಯು ನನ್ನ ಸಮೀಪಕ್ಕೆ ಬಂದಾಗ ನನ್ನ ಮೇಲೆ ಪ್ರೀತಿಪೂಲ್ಸಕವಾದ ದೃಷ್ಟಿಯಿಟ್ಟು, ಆಗ ನನ್ನನ್ನು ಮಾತಾಡಿಸದೆ ಆಶ್ರಮದೊಳಕ್ಕೆ ಪ್ರವೇಶಿಸಿ ಸ್ವಲ್ಪ ಕಾಲದಮೇಲೆ ಹಿಂತಿ ರುಗಿ ಬಂದು ನನ್ನನ್ನು ನೋಡಿ, ನಾನು ಬಂದಕಾರವೇನೆಂದು ವಿಚಾರಿಸು ತ್ಯ ಎಲೆ ಸೌಮ್ಯನೆ ನಿನ್ನ ಮೈಮೇಲಿನ ಕೂದಲುಗಳೆಲ್ಲವೂ ಬೆಂದು ಉದಿರಿ ಹೋಗಿರುವುದರಿಂದ, ನಿನ್ನ ಸ್ವರೂಪವೇ ತಿಳಿಯದಿರುವುದು ನಿನ್ನ ರೆಕ್ಕೆಗಳೆರ ಡೂ ಅಗ್ನಿ ಯಿಂದ ಬೆಂದು, ಚರ್ಮವೂ ವ್ರಣವಿಶಿಷ್ಟವಾಗಿ ಕಾಣುತ್ತಿರುವು ದು ನಾನು ಹಿಂದೆ ಎರಡು ಗೃಧಗಳನ್ನು ನೋಡಿದ್ದೆನು ಅವೆರಡೂ ವೇ ಗದಲ್ಲಿ ವಾಯುವಿಗೆ ಸಮಾನಗಳಾಗಿದ್ದುವು ಅವರಿಬ್ಬರೂ ಗೃಢರಾಜರೆನಿಸಿ ಕೊಂಡು ಒಡಹುಟ್ಟಿದವರಾಗಿದ್ದರು ಇಬ್ಬರೂ ಕಾಮರೂಪಿಗಳು ಅವರಲ್ಲಿ ನೀನು ಜೈಷ್ಣನಾದ ಸಂಪಾತಿಯಾಗಿರಬಹುದೆ? ನಿನ್ನ ತಮ್ಮನು ಜಟಾಯು ವಲ್ಲವೆ? ನೀವಿಬ್ಬರೂ ಮನುಷ್ಯರೂಪವನ್ನು ಧರಿಸಿ ನನ್ನ ಪಾದಗಳಿಗೆ ನಮ ಸ್ಕರಿಸುತಿದ್ದಿರಲ್ಲವೆ? ಇದೇನು? ನಿನಗೆ ವ್ಯಾಧಿಯೇನಾದರೂ ಪ್ರಾಪ್ತವಾಯಿ ತೆ?ನಿನ್ನ ರೆಕ್ಕೆಗಳು ಹೇಗೆ ಬಿದ್ದು ಹೋದುವು?ಯಾರಾದರೂ ನಿನ್ನನ್ನು ದಂಡಿಸಿ