ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪೫ ಹೆರ್ಗ, ೬೦] ಕಿಕ್ಕಿಂಧಾಕಾಂಡವು ದರೆ? ಹಾಗೆ ದಂಡಿಸಿದವರಾರು? ಅವೆಲ್ಲವನ್ನೂ ನನಗೆ ತಿಳಿಸು” ಎಂದನು. ಇಲ್ಲಿಗೆ ಆರುವತ್ತನೆಯಸರ್ಗವು { ಸಂಪಾತಿಯು ತನ್ನ ರೆಕ್ಕಗಳು ಬೆಂದ ವೃತ್ತಾಂತವನ್ನು | ನಿಶಾಕರಮಹರ್ಷಿಗೆ ತಿಳಿಸಿದುದು ಆಮೇಲೆ ನಾನು ಸೂರಮಂಡಲದವರೆಗೆ ಹೋದುದು ಮೊದ ಲಾಗಿ ಭಯಂಕರವಾದ ನನ್ನ ಸಾಹಸಕಾಲ್ಯವೆಲ್ಲವನ್ನೂ ಆ ಮಹರ್ಷಿಗೆ ತಿಳಿಸುತ್ತ ಅವನನ್ನು ಕುರಿತು (( ಎಲೆ ಮಹಾತ್ಮನೆ' ನನ್ನ ದೇಹ ವೆಲ್ಲವೂ ಸುಟ್ಟ ಗಾಯಗಳಿಂದ ತುಂಬಿ, ಗರಿಗಳು ಬೆಂದುಹೋಗಿರುವುದ ರಿಂದಲೂ, ಲಜ್ಞೆಯಿಂದ ನನ್ನ ಇಂದ್ರಿಯಗಳು ಕದಲಿರುವುದರಿಂದಲೂ, ನಾನು ಬಹುಕಾಲದಿಂದ ಕಷ್ಟದಲ್ಲಿ ಬಿದ್ದು ಬಳಲಿರುವುದರಿಂದಲೂ ನಿನಗೆ ಪ್ರತ್ಯುತ್ತರವನ್ನು ಹೇಳುವುದಕ್ಕೂ ಅಶಕ್ತನಾಗಿರುವೆನು ಆದರೂ ಸಂಗ್ರ ಹಿಸಿ ಹೇಳುವೆನು ಕೇಳು? ನಾನೂ, ನನ್ನ ತಮ್ಮನಾದ ಜಟಾಯುವೂ,ಮದ ರಿಂದ ಕೊಬ್ಬಿದವರಾಗಿ, ಯಾರು ಹೆಚ್ಚು ವೇಗವುಳ್ಳವರೆಂದು ಪರೀಕ್ಷಿಸಿ ನೋಡಬೇಕೆಂಬ ಹಟದಿಂದ ಆಕಾಶಕ್ಕೆ ಹಾರಿದೆವು ಹಾರುವುದಕ್ಕೆ ಮೊದ ಲು ನಾವಿಬ್ಬರೂ ಕೈಲಾಸಶಿಖರದಲ್ಲಿರುವ ಕೆಲವು ಋಷಿಗಳಮುಂದೆ ಸ ರನು ಆಸ್ತಗಿರಿಯನ್ನು ಹೊಂದುವವರೆಗೂ ಅವನನ್ನು ಬಿಡದೆ ಬೆಂಬಿಡಿದು ಹೋಗಬೇಕು” ಎಂದು ಪಂಥವನ್ನು ಕಟ್ಟಿ, ಇಬ್ಬರೂ ಏಕಕಾಲದಲ್ಲಿ ಆಕಾ ಶಕ್ಕೆ ಹಾರಿದೆವು ನಾವು ಹಾರುವಾಗ ಭೂಮಿಯಲ್ಲಿರುವ ಪಟ್ಟಣಗಳೆಲ್ಲವೂ ಬೇರೆಬೇರೆಯಾಗಿ ಒಂದು ಸಣ್ಣ ಬಂಡಿಯ ಚಕ್ರದಂತೆ ಕಾಣಿಸುತಿದ್ದುವು ಕೆಲ ವುಕಡೆಗಳಲ್ಲಿ ವಾದ್ಯಘೋಷಗಳೂ, ಕಲವುಕಡೆಯಲ್ಲಿ ಬ್ರಹ್ಮಘೋಷಗಳೂ ನಮ್ಮ ಕಿವಿಗೆ ಬಿಳುತಿದ್ದುವು ರಕ್ತವಸ್ತ್ರವನ್ನು ಧರಿಸಿದ ಬಹಳಮಂದಿ ಸ್ತ್ರೀ ಯರು ಆಂತರಿಕ್ಷದಲ್ಲಿ ಹಾಡುತ್ತಿರುವುದನ್ನೂ ನೋಡಿದೆವು ಹಾಗೆಯೇ ಅತಿವೇಗದಿಂದ ಹಾರಿ ಸೂರಮಾರ್ಗವನ್ನು ಹಿಡೆದೆವು, ನಾವು ಮೇಲೆ ಹೋ ದಾಗ ಭೂಮಿಯಮೇಲಿದ್ದ ಮಹಾರಣ್ಯಗಳೆಲ್ಲವೂ ಒಂದು ಸಣ್ಣ ಗರಿಕೆಯಂ ತೆ ಕಾಣುತ್ತಿದ್ದುವು ಮಹಾಪರತಗಳೆಲ್ಲವೂ ಭೂಮಿಯಮೇಲೆ ಸಣ್ಣ ಸಣ್ಣ