ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A೪೬ ಶ್ರೀಮದ್ರಾಮಾಯಣವು [ಸರ್ಗ, ೬೧.. ಹಾಸುಗಲ್ಲುಗಳನ್ನು ಹಾಸಿದಂತೆ ಕಾಣುತಿದ್ದುವು ಮಹಾನದಿಗಳೆಲ್ಲವೂ ಸೂ ಇದೆಳೆಗಳಂತೆ ಕಾಣಿಸುತ್ತಿದ್ದುವು ಭೂಮಿಯಮೇಲಿನ ಹಿಮವಂತವೂ,ವಿಂಧ್ಯ ವೂ, ಮಹಾಮೇರುಪವ್ವತವೂ ಮಹಾಸಮುದ್ರದೊಳಗೆ ನೀರಾನೆಗಳಂತೆ ಕಾ ಣಿಸುತಿದ್ದುವು ಅಷ್ಟು ದೂರಕ್ಕೆ ಹೋಗುವುದರಲ್ಲಿ ಮಹಾಶ್ರಮದಿಂದ ನಮ್ಮಿ ಬ್ಬರ ದೇಹದಲ್ಲಿಯೂ ಬೆವರು ಕಿತ್ತುಕೊಂಡಿತು ಸಹಿಸಲಾರದ ಕಷ್ಟವುಂ ಟಾಯಿತು ಮನಸ್ಸಿನಲ್ಲಿ ಮಹಾಭಯವೂ ಹುಟ್ಟಿತು ಮನಸ್ಸಿಗೆ ಭ್ರಮೆ ಬಂದಿ ತು ಕಣ್ಣುಗಳಲ್ಲಿ ಕತ್ತಲೆ ಕವಿದಂತಾಯಿತು ಭಯಂಕರವಾದ ಮೂರ್ಛ ಯೂ ಬಂದಾವರಿಸಿತು ದಿಕ್ಕುಗಳಲ್ಲಿ ಆಗ್ನೆಯವಾವುದು, ದಕ್ಷಿಣವಾವುದು, ಪಶ್ಚಿಮವಾವುದು ಎಂದೇ ತೋರಲಿಲ್ಲ ಪ್ರಳಯಕಾಲದಲ್ಲಿ ಅಗ್ನಿಯಿಂದ ದಗ್ಗವಾದ ಈ ಪ್ರಪಂಚದಲ್ಲಿ ಸಮಸ್ತಲೋಕಗಳೂ ನೆಲೆದಪ್ಪಿ, ರೂಪು ಗೆಡುವಂತೆ ಆಗ ನಮಗೆ ಯಾವುದೊಂದೂ ತಿಳಿಯದೆಹೋಯಿತು ನನ್ನ ಮನ ಸ್ಸು ಕದಲಿ ಅದಕ್ಕಾತ್ರಯವಾದ ಚಕ್ಷ ರಿಂದ್ರಯದಿಂದ ಬೇರ್ಪಟ್ಟು, ಎಲ್ಲಿ ಯೋ ಲೀನವಾಗಿ ಕೆಟ್ಟು ಹೋಯಿತು ನನ್ನ ದೃಷ್ಟಿಪಾಟವವೂ - ನಾಶಹೊಂ ದಿತು ಹಾಗಿದ್ದರೂ ನಾನು ಎಷ್ಟೋ ಪ್ರಯತ್ನದಿಂದ ನನ್ನ ಮನಸ್ಸನ್ನು ಚ ಕುರಿಂದ್ರಿಯದೊಡನೆ ನೆಲೆಗೆ ನಿಲ್ಲಿಸಿಕೊಂಡು, ಪ್ರಯತ್ನ ದಿಂದ ಪುನಃ ಸೂರ ಬಿಂಬವನ್ನೇ ಬೆನ್ನಟ್ಟಿ ಹೊರಟೆನು ಆಗ ನಮಗೆ ಸೂರಬಿಂಬವು ಈ ಭೂ ಗೋಳದಷ್ಟು ಮಹಾಪ್ರಮಾಣವುಳುದಾಗಿ ಗೋಚರಿಸಿತು ಇಷ್ಟರಲ್ಲಿ ಜಟಾಯುವು ಬಿಸಿಲಿನಿಂದ ಬೆಂದು, ನನಗೆ ತಿಳಿಸದೆಯೇ ಕೆಳಕ್ಕಿಳಿದನು ಇ ದನ್ನು ಕಂಡೊಡನೆ ನಾನೂ ಆಕ್ಷಣವೇ ಅಲ್ಲಿಂದ ಕೆಳಗಿಳಿದು ಜಟಾಯುವಿನ ದೇಹವು ಬೆಂದುಹೋಗದಂತೆ ನನ್ನ ರೆಕ್ಕೆಗಳಿಂದ ಅವನನ್ನು ಮರೆಸಿಕೊಂ ಡೆನು ಇದರಿಂದ ಅವನುಮಾತ್ರ ಬಿಸಿಲಿನಿಂದ ದಗ್ಗನಾಗದೆ ಬದುಕಿಕೊಂ ಡನು ನಾನು ಆ ತಮ್ಮನನ್ನು ರಕ್ಷಿಸಬೇಕೆಂದು ಆತುರಪಟ್ಟು ಆಕಾಶದಿಂ ದ ಬಿಳುವಾಗ ಪ್ರಮಾದವಶದಿಂದ ದಗ್ಗನಾಗಿ ಬಿಟ್ಟೆನು ಆ ಜಟಾಯು ವು ಜನಸ್ಪ್ಯಾನದಲ್ಲಿ ಬಿದ್ದಿರಬಹುದೆಂದು ಶಂಕಿಸುವೆನು ನನ್ನ ರೆಕ್ಕೆಗಳು ಬೆಂದೊಡನೆಯೇ ನಾನು ಮೂರ್ಛಿತನಾಗಿ ಈ ವಿಂಧ್ಯಪವ್ವತದಲ್ಲಿ ಬಿದ್ದೆ ನು ಎಲೈ ಮಹರ್ಷಿ' ನನಗೆ ರೆಕ್ಕೆಗಳೂ ಹೋದುವು ತಮ್ಮನೂ' ಆಗಲಿ