ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

c೬೪೬ ಸರ್ಗ ೩೨] ಕಿಷಿಂಧಾಕಾಂಡವು ಹೋದನು ರಾಜ್ಯವೂ ಕೈತಪ್ಪಿ ಹೋಯಿತು ನನ್ನ ಪರಾಕ್ರಮವೂ ಕಂದಿ ಹೋಯಿತು ಈ ದುರವಸ್ಥೆಯಲ್ಲಿ ನನಗೆ ಇನ್ನು ಮೇಲೆ ಈ ಪ್ರಾಣಗಳನ್ನಿ ಟ್ಟುಕೊಂಡಿರುವುದೇ ಇಷ್ಟವಿಲ್ಲ ಸರವಿಧದಿಂದಲೂ, ಪ್ರಾಣತ್ಯಾಗವ ನ್ನು ಮಾಡಿಬಿಡಬೇಕೆಂಬುದೇ ನನ್ನ ಕೋರಿಕೆಯಾಗಿರುವುದರಿಂದ, ಈಗಲೇ ಈ ಪ್ರತಶಿಖರದಿಂದ ಬಿದ್ದು ಸಾಯುವೆನು” ಎಂದು ನಾನು ಆ ಮಹ ರ್ಷಿಗೆ ತಿಳಿಸಿದೆನು” ಇಲ್ಲಿಗೆ ಆರುವತ್ತೊಂದನೆಯಸರ್ಗವು ( ನಿಶಾಕರಮುನಿಯು ಸಂಪಾಪಿಗೆ ಪುನಃ ರೆಕ್ಕೆಗಳು | ಬರುವ ರೀತಿಯನ್ನು ತಿಳಿಸಿದುದು - (ಎಲೆವಾನರರ' ನಾನು ಆ ನಿಶಾಕರಮುನಿಯಲ್ಲಿ ಹೀಗೆಂದು ವಿಜ್ಞಾ ಪಿಸಿ, ನನ್ನ ಮನಸ್ಸಂಕಟವನ್ನು ತಡೆಯಲಾರದೆ ಅಳುತಿದ್ದೆನು ಅದನ್ನು ನೋ ಡಿ ಮಹಾತ್ಮನಾದ ಆ ಋಷಿಯು, ಸ್ವಲ್ಪ ಕಾಲದವರೆಗೆ ಏನನ್ನೋ ಧ್ಯಾನಿಸು ತಿದ್ದು, ಆಮೇಲೆ ನನ್ನನ್ನು ನೋಡಿ, 'ಎಲಸಂಪಾತಿ' ನಿನಗೆ ರಕ್ಕಗಳೂ, ಗರಿ ಗಳೂ, ಪ್ರಾಣಗಳೂ, ಕಣ್ಣುಗಳೂ, ಬಲಪರಾಕ್ರಮಗಳೂ ತಿರುಗಿ ಹೊಸ ದಾಗಿ ಹುಟ್ಟುವುವು ನೀನು ಭಯಪಡಬೇಡ ಮುಂದೆ ಒಂದುದೊಡ್ಕಾ ಕ್ಯವು ನಡೆಯುವುದೆಂದು ಪೂರದಲ್ಲಿ ನಾನು ಕೇಳಿದ್ದೆನು ಈ ಭವಿಷ್ಯ ತಾಂತವನ್ನು ನನ್ನ ತಪೋಮಹಿಮೆಯಿಂದಲೇ ನಾನು ತಿಳಿದುಕೊಂಡುದ ಲ್ಲದೆ ಹಿರಿಯರಿಂದಲೂ ಕೇಳಿಬಲ್ಲೆನು ಆದೇನೆಂದರೆ, ಇಕ್ಷಾಕುವಂಶದಲ್ಲಿ ದಶರಥನೆಂಬ ರಾಜನೊಬ್ಬನು ಹುಟ್ಟಿ, ರಾಜ್ಯವಾಳುತ್ತಿರುವನು ಅವನಿಗೆ ಮ ಹಾತೇಜಸ್ವಿಯಾದ ರಾಮನೆಂಬ ಪುತ್ರನೊಬ್ಬನು ಹುಟ್ಟುವನು ತಂದೆಯ ಆ ಜ್ಞೆಯಮೇಲೆ ಸತ್ಯಪರಾಕ್ರಮನಾದ ಆ ರಾಮನು,ತನ್ನ ತಮ್ಮನಾದ ಲಕ್ಷ ಇನೊಡನೆಯೂ, ಪತ್ನಿಯಾದ ಸೀತೆಯೊಡನೆಯೂ, ಅರಣ್ಯಕ್ಕೆ ಬರುವನು ರಾಮನು ವನಸ್ಪ್ಯಾನದಲ್ಲಿರುವಾಗ ಅವನ ಪ್ರಿಯಪತ್ನಿ ಯಾದ ಸೀತೆಯನ್ನು ದೇವದಾನವರಿಗೂ ದುರ್ಜಯನಾದ ರಾವಣನೆಂಬ ರಾಕ್ಷಸರಾಜನು ಅಪಹರಿ ಸುವನು ಮಹಾಭಾಗೆಯಾಗಿಯೂ, ಮಹಾಯಶಸ್ವಿನಿಯಾಗಿಯೂ ಇರುವ ಆ ಸೀತೆಯು ರಾವಣನ ಸೆರೆಮನೆಯಲ್ಲಿರುವಾಗ, ಆಕೆಗೆ ರಾವಣನುಬಗೆಬಗೆಯ