ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧) ಕಿಕ್ಕಿಂಧಾಕಾಂಡವು, ೧೩xt ರುವ ಈ ವಾಯುವು ಸೀತೆಯ ನಿಟ್ಟುಸಿರಿನಂತೆ ಸುಗಂಧವಿಶಿಷ್ಟವಾಗಿ ಸಬಾರದೆ?” ಎಂದರೆ (ನಿಶ್ಯಾಸ ಇವ ಸೀತಾಯಾ ) ಸೀತೆಯ ನಿಶ್ವಾಸದಂತೆ ತೋರು ತ್ರ, ಪ್ರಥಮಪರಿಚಿತನಾದವನಂತೆ ಬರುತ್ತಿರುವುದರಿಂದ ಅದನ್ನು ನಿಷೇಧಿಸುವುದಕ್ಕೂ ಮನಸ್ಸು ಬಾರದೆಂದು ಭಾವವು. ಇದಲ್ಲದೆ ಈ ವಾಯುವು ಸೀತೆಯ ನಿಟ್ಟುಸಿರಿನಂತ ತನಗೆ ಭ್ರಾಂತಿಯನ್ನು ಹುಟ್ಟಿಸುತ್ತಿರುವುದರಿಂದ, ಒಂದುವೇಳೆ ಈ ಮರದ ಮರೆಯಲ್ಲಿ ಸೀತೆಯು ಮರೆಸಿಕೊಂಡಿದ್ದು, ನನ್ನ ಕಡೆಗೆ ಬರುತ್ತಿರುವಳೊ ಎಂಬ ಚಾಪಲ್ಯ ವಿರುವು ದರಿಂದ ಈ ಸ್ಥಳವನ್ನು ಬಿಟ್ಟು ಕದಲುವುದಕ್ಕೂ ನನಗೆ ಮನಸ್ಸು ಬಾರದೆಂದು ಭಾವವು (ವಾತಿ ವಾಯು ) ವಾಯುವ ಬೀಸುತ್ತಿರುವುದೆಂಬುದರಿಂದ ( “ಭೀಷಾಸ್ಕಾ ದ್ವಾತಂಪವತೇ” ಎಂಬಂತೆ ಯಾವ ವಾಯುವು ನನಗಾಗಿ ಹೆದರಿ ಬೀಸುತ್ತಿರಬೇಕೋ ಆ ವಾಯುವೇ ಈಗ ನನಗೆ ಪ್ರತಿಕೂಲವಾಗಿ ನನ್ನ ನ್ನು ಬಾಧಿಸುತ್ತಿರುವುದೆಂದು ಭಾ ವವು ಅದು ಬಾಧಿಸತಕ್ಕ ರೀತಿಯಾದರೂ ಸಾಮಾನ್ಯವಲ್ಲ (ಮನೋಹರ:) ಪ್ರತ್ಯಕ್ಷ ವಾಗಿ ಹೊರಗೆ ಕಾಣುವ ದೇಹವನ್ನೇ ಆಲ್ಲದೆ, ಅಂತರ್ಗತವಾಗಿ ಕಣ್ಣಿಗೆ ಕಾಣದಿರುವ ಮನಸ್ಸನ್ನೂ ಪೀಡಿಸುವ ಅದ್ಭುತ ಸಾಮರ್ಥ್ಯವುಳ್ಳುದೆಂದು ಭಾವವು ಮತ್ತು ಇಲ್ಲಿ ವಾಯುವಿಗೆ ಮಾರ್ಗಸ್ಥರ ಸರ್ವಸ್ವವನ್ನೂ ಸುಲಿಗೆ ಮಾಡುವ ದಾರಿಗಳ್ಳರ ಸ್ವಭಾವವು ವರ್ಣಿಸಲ್ಪಡುವುದಾಗಿಯೂ ಗ್ರಹಿಸಬಹುದು. ಹೇಗೆಂದರೆ, (ಪದ ಕೇಸರಸಂಸ್ಕೃಷ್ಟ ) ತಾನು ಇಂಥವನೆಂದು ತನ್ನ ನಿಜಸ್ವರೂಪ ವನ್ನು ತಿಳಿಸದಿರುವುದಕ್ಕಾಗಿಯೂ, ಭೀರುಸ್ವಭಾವವುಳ್ಳವರನ್ನು ತಮ್ಮ ಸ್ವರಾಪದಿಂ ದಲೇ ಹೆದರಿಸುವುದಕ್ಕಾಗಿಯೂ, ದಾರಿಗಳ್ಳರು ಮುಖಕ್ಕೆ ಮಸಿಮೊದಲಾದವುಗಳನ್ನು ಬಳಿದುಕೊಂಡು ಬರುವಂತೆ, ಈ ವಾಯುವೂ ಕಮಲದ ಕೆಂದೂಳಿಗಳಿಂದ ವೇಷವನ್ನು ಮರೆಸಿಕೊಂಡು ಬರುವುದೆಂದು ಭಾವವು (ವೃಕ್ಷಂತರವಿನಿಸ್ಕೃತ ) ಮಾರ್ಗಸ್ಥರು ಸಮೀಪಕ್ಕೆ ಬರುವವರೆಗೆ ಅಲ್ಲಲ್ಲಿ ಮರಗಳ ಮರೆಯಲ್ಲಿ ಅವಿತುಕೊಂಡೇ ಬರುವ ಕಳ್ಳರಂತೆ, ಇದೂ ಅಲ್ಲಲ್ಲಿ ಮರೆಸಿಕೊಂಡು ಬರುತ್ತಿರುವುದು (ನಿಶ್ಯಾಸಇವ ಸೀತಾ ಯಾ ) ಸೀತಾನಿಶ್ಯಾಸದಂತೆ ತಾನೂ ಚಿರಪರಿಚಯವನ್ನು ತೋರಿಸುತ್ಯ, ಸ್ನೇಹಿತರು ಮಾತಾಡಿಸುವುದಕ್ಕೆ ಬರುವಹಾಗೆ ಬರುತ್ತಿರುವುದೆಂದು ಭಾವವು (ವಾಯು ) ತನ್ನ ನ್ನು ಹಿಡಿದುಬಿಡುವರೆಂಬ ಭಯದಿಂದ ನಿಂತಕಡೆಯಲ್ಲಿ ನಿಲ್ಲದೆ ಕೈಗೆ ಸಿಕ್ಕಿದಹಾಗೆ ಅತ್ತ ತಿರುಗುತ್ತಲೇ ಇರುವ ಸ್ವಭಾವವುಳ್ಳದು (ಮನೋಹರಃ) ಮೇಲೆ ಕಾಣು ರುವ ಬಟ್ಟೆಬರೆ, ಒಡವೆವು, ಮುಂತಾದುವುಗಳನ್ನು ಮಾತ್ರವೇ ಅಲ್ಲದೆ, ಒಳಗಿನ ಮನಸ್ಸನ್ನೂ ಕಳುವ ಅದ್ಭುತವಾಮರ್ಥ್ಯವುಳ್ಳದೆಂದರ್ಥವು, ಇಂತಹ ದಾರಿಗಳ್ಳನು, (ನಾ) ಸಮಯನಿರೀಕ್ಷಣೆಯಿಂದ ಅತ್ತಿತ್ತ ಸುತ್ತುತ್ತಿರುವನೆಂದು ಭಾವವು