ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೨ ಶ್ರೀಮದ್ರಾಮಾಯಣವು [ಸರ್ಗ೬೪ ಆಕಾಶದಂತೆ ಕೊನೆಮೊದಲಿಲ್ಲದ ಆ ಮಹಾಸಾಗರವನ್ನು ನೋಡಿ ಅವರೆಲ್ಲ ರೂ, ಮುಂದೆ ಮಾಡಬೇಕಾದ ಕಾಠ್ಯವೇನೆಂದು ಒಬ್ಬರಿಗೊಬ್ಬರು ಹೇಳಿ ಕೊಳ್ಳುತ್ತ ಚಿಂತಾಕುಲಿತರಾಗಿದ್ದರು ಹೀಗೆ ಮಹಾಸಮುದ್ರವನ್ನು ನೋ ಡಿ ವಿಷಾದಹೊಂದಿ ಭಯಪಡುತ್ತಿರುವ ಆ ವಾನರಸೈನ್ಯವನ್ನು ನೋಡಿ ಅಂ ಗದನು ಸಮಾಧಾನಪಡಿಸುವುದಕ್ಕಾರಂಭಿಸಿದನು ಕಾಲೋಚಿತವಾದ ಬು ದ್ವೀಚಾತುರವುಳ್ಳ ಆ ವಾಲಿಪುತ್ರನು, ಮಿತಿಮೀರಿದ ಚಿಂತೆಯಿಂದ ಕೊರಗು ತಿರುವ ಅ ಸಮಸ್ತವಾನರರನ್ನೂ ನೋಡಿ, 'ಎಲೈವೀರರೆ ಈಗ ನೀವು ಮ ನಸ್ಸಿನಲ್ಲಿ ಹೀಗೆ ವಿಷಾದಕ್ಕೆ ಅವಕಾಶಕೊಡಬಾರದು ಚಿಂತೆಯೆಂಬುದೇ ಸಮ ಪ್ರದೋಷಗಳಿಗೂ ಪ್ರಧಾವಸ್ಥಾನವು ಕೋಪಗೊಂಡ ಹಾವು ಎಳೇ ಮ ಗುವನ್ನು ಕಚ್ಚಿ ಕೊಲ್ಲುವಂತೆ, ಈ ಚಿಂತೆಯೆಂಬುದೇ ಮನುಷ್ಯನನ್ನು ಕೊಂ ದುಬಿಡುವುದು ಪರಾಕ್ರಮಕಾಲದಲ್ಲಿಮಾತ್ರ ವಿಷಾದವು ಬಂದೊದಗಿದ ಪಕ್ಷದಲ್ಲಿ, ಆಗಲೇ ಅದು ಪುರುಷನಿಗೆ ಅಧೋಗತಿಯನ್ನೇ ತಂದಿಡುವುದು. ಥೈರಗುಂದಿದವನಿಗೆ ಯಾವ ಪುರುಷಾರವೂ ಸಿದ್ಧಿಸದು ” ಹೀಗೆಂದು ಹೇಳಿ ಅಂಗದನು, ಆ ರಾತ್ರಿಯು ಕಳೆದಮೇಲೆ, ವಾನರಸೈನ್ಯದಲ್ಲಿ ಪ್ರಮುಖರಾದ ವರೊಡನೆ ಕನೆತು, ಸಮುದ್ರಲಂಘನವನ್ನು ಕುರಿತು ತಿರುಗಿ ಆಲೋಚಿಸ ತೊಡಗಿದನು ಆಗ ದೇವೇಂದ್ರನನ್ನು ಬಳಸಿ ನಿಂತಿರುವ ದೇವಸೇನೆಯಂತೆ ಆ ಅಂಗದನ ಸುತ್ತಲೂ ಸಮಸ್ತವಾನರಸೇನೆಯೂ ಬಳಸಿ ನಿಂತುಪ್ರಕಾಶಿಸು ತಿತ್ತು ವಾಲಿಪುತ್ರನಾದ ಅಂಗದನು, ಮತ್ತು ಆಂಜನೇಯನು ಇವರಿಬ್ಬರು ಹೊರತು ಅಷ್ಟು ದೊಡ್ಡಕಪಿಸೈನ್ಯವನ್ನು ತಡೆದು ನಿಲ್ಲಿಸುವುದಕ್ಕೆ ಬೇರಯಾ ರಿಂದ ಸಾಧ್ಯವು?ಆಮೇಲೆ ಶ್ರೀಮಂತನಾದ ಅಂಗದನು, ಅಲ್ಲಿ ಪ್ರಮುಖರಾ ಗಿದ್ದ ಕೆಲವು ವೃದ್ಯವಾನರರನ್ನು ನೋಡಿ,ಇತರ ಕಪಿಸೈನ್ಯವನ್ನೂ ಸಮಾಧಾ ನಗೊಳಿಸುತ್ತ ಆಯುಕ್ತವಾದ ಮಾತಿನಿಂದ ಅವರನ್ನು ಕುರಿತು ಹೇಳುವ ನು (ಎಲೈ ವಾನರರ' ನಿಮ್ಮಲ್ಲಿ ಈ ಸಮುದ್ರವನ್ನು ದಾಟಬಲ್ಲ ಮಹಾತೇಜ ಸ್ವಿಯಾವನು?ಶತ್ರುಸೂದನನಾದ ಸುಗ್ರೀವನನ್ನು ಸತ್ಯಸಂಧವನ್ನಾಗಿ ಮಾ ಡಬಲ್ಲವನಾವನು? ಈ ನೂರುಯೋಜನಗಳ ದೂರವನ್ನು ಯಾವ ವೀರನು ಹಾರಬಲ್ಲನು? ಈ ಸಮಸ್ತಕಪಿಯೂಧಪರಿಗೂ, ಈಗ ಬಂದೊದಗಿರುವ