ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೫.] ಕಿಂಧಾಕಾಂಡವು ೧೬೫೩ ಮಹಾಭಯವನ್ನು ಬಿಡಿಸಬಲ್ಲವನಾವನು? ಎಲೈ ವೀರರೆ ' ಯಾವನ ಮಹಿ ಮೆಯಿಂದ ನಾವೆಲ್ಲರೂ ಇಲ್ಲಿಂದ ಕೃತಾರರಾಗಿ ಹಿಂತಿರುಗಿ, ಸುಖವಾಗಿ ಕಿಕ್ಕಿಂಧೆಯನ್ನು ಸೇರಿ, ನಮ್ಮ ಮನೆಮಂದಿಮಕ್ಕಳನ್ನೆಲ್ಲಾ ನೋಡಬ ಹುದು | ಯಾವನ ಅನುಗ್ರಹದಿಂದ ನಾವು ಇಲ್ಲಿಂದ ಹಿಂತಿರುಗಿ ರಾ ಮನನ್ನೂ , ವೀರನಾದ ಲಕ್ಷಣವನ್ನೂ, ಮಹಾಬಲಾಡ್ಯನಾದ ಸುಗ್ರೀ ವನನ್ನೂ ಸಂತೋಷದಿಂದ ಇದಿರುಗೊಳ್ಳುವೆವೋ ತಿಳಿಯಲಿಲ್ಲ ನಿಮ್ಮಲ್ಲಿ ಯಾವನಾದರೂ ಒಬ್ಬನು ಈ ಸಮುದ್ರವನ್ನು ದಾಟುವುದಕ್ಕೆ ಸಮರನಾ ಗಿದ್ದ ಪಕ್ಷದಲ್ಲಿ, ಅಂತವನು ಶೀಘ್ರದಲ್ಲಿಯೇ ಮುಂದೆ ಬಂದು ಪುಣ್ಯಹೇತು ವಾದ ಈ ಅಭಯದಕ್ಷಿಣೆಯನ್ನು ಕೊಟ್ಟು, ನಮ್ಮನ್ನು ಕಾಪಾಡಲಿ!” ಎಂದ ನು ಅಂಗದನು ಹೇಳಿದ ಮಾತನ್ನು ಕೇಳಿ ಆ ವಾನರರಲ್ಲಿ ಒಬ್ಬನಾದರೂ, ಒಂದು ಮಾತನ್ನೂ ಆಡಲಿಲ್ಲ ಸಮಸ್ತಕಪಿಸೈನ್ಯವೂ ಸ್ತಬ್ಧವಾಗಿ ನಿಂತಿ ತು ಆಗ ವಾನರೋತ್ತಮನಾದ ಅಂಗದನು ತಿರುಗಿ ಆ ಕಪಿಗಳನ್ನು ನೋ ಡಿ (ಎಲೈ' ಸೀವೆಲ್ಲರೂ ಬಲಾಡ್ಯರಲ್ಲಿ ಮೇಲೆನಿಸಿಕೊಂಡವರು ದೃಢಪರಾ ಕ್ರಮವುಳ್ಳವರು ಒಬ್ಬೊಬ್ಬರೂ ಲೋಕಮಾನ್ಯವಾದ ಮಹಾಕುಲದಲ್ಲಿ ಹುಟ್ಟಿದವರು ಲೋಕಪೂಜ್ಯರು ಎಲೈ ವಾನರೋತ್ತಮರೆ' ನಿಮ್ಮಲ್ಲಿ ಯಾ ವನೊಬ್ಬನಿಗೂ, ಯಾವಾಗಲೂ, ಎಲ್ಲಿಯೂ ಗತಿಭಂಗವಿಲ್ಲವಷ್ಟೆ ? ಈಗ ನೀವೇಕೆ ಸುಮ್ಮನಿರುವಿರಿ? ನಿಮ್ಮಲ್ಲಿ ಆರಾರಿಗೆ ಎಷ್ಟೆಷ್ಟು ದೂರದವರೆಗೆ | ದಾಟುವ ಶಕ್ತಿಯುಂಟೆಂಬುದನ್ನಾದರೂ ತಿಳಿಸಿರಿ” ಎಂದರು ಇಲ್ಲಿಗೆ ಆರು ವತ್ತು ನಾಲ್ಕನೆಯ ಸರ್ಗವು | ವಾನರರು ಸಮುದ್ರವನ್ನು ದಾಟುವುದರಲ್ಲಿ ತಮತಮ). " ಗಿರುವ ಶಕ್ತಿ ತಾರತಮ್ಯವನ್ನು ಹೇಳಿಕೊಂಡುದು ಅಲ್ಲಿದ್ದ ವಾನರರೆಲ್ಲರೂ ಅಂಗದನು ಹೇಳಿದ ಈ ಮಾತನ್ನು ಕೇಳಿ, ಸಮುದ್ರಲಂಪುನವಿಷಯದಲ್ಲಿ ತಮತಮಗಿರುವ ಬಲೋತ್ಸಾಹಗಳನ್ನು ಕ್ರಮವಾಗಿ ತಿಳಿಸುತ್ತ ಬಂದರು ಗಜನೂ, ಗವಾಕ್ಷನೂ, ಗವಯನೂ, ಶ ರಭನೂ, ಗಂಧಮಾದನನೂ, ಮೈಂದನೂ, ದ್ವಿವಿದನೂ, ಸುಷೇಣನೂ,