ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೫೪ ಶ್ರೀಮದ್ರಾಮಾಯಣವು [ಸರ್ಗ, ೩೫, ಜಾಂಬವಂತನೂ ಕ್ರಮವಾಗಿ ತಮ್ಮ ತಮ್ಮ ಶಕ್ತಿಯನ್ನು ಹೇಳತೊಡಗಿದ ರು ತಾನು ಹತ್ತು ಯೋಜನಕ್ಕೆ ಹಾರುವುದಾಗಿ *ಗಜನು ಹೇಳಿದನು ಗವಾ ಕ್ಷನು ಇಪ್ಪತ್ತು ಯೋಜನಗಳನ್ನು ಹಾರುವೆನೆಂದನು ಗವಯನು ಅಲ್ಲಿದ್ದ ವಾನರರನ್ನು ಕುರಿತು (ಎಲೈ ವೀರರೆ ' ನಾನು ಮೂವತ್ತು ಯೋಜನೆಗಳ ವರೆಗೆ ಹಾರುವೆ” ನೆಂದನು ಶರಭನು ತಾನು ನಾಲ್ವತ್ತು ಯೋಜನಗಳನ್ನು ಹಾರಬಲ್ಲೆನೆಂದನು ಮಹಾತೇಜಸ್ವಿಯಾದ ಗಂಧಮಾದನನು ನಾನು ಸ್ವ ಲ್ಪವೂ ಸಂದೇಹವಿಲ್ಲದೆ ಐವತ್ತುಯೋಜನಗಳನ್ನು ಹಾರಿಬಿಡುವೆನು” ಎಂದ ನು ಮೈಂದನು ಆರವತ್ತುಯೋಜನಗಳನ್ನು ಹಾರಬಲ್ಲೆನೆಂದನು ತೇಜೋ ವಿಶಿಷ್ಟನಾದ ದ್ವಿವಿದನು ತಾನು ಎಪ್ಪತ್ತುಯೋಜನಗಳನ್ನು ಹಾರಬಲ್ಲೆ ನೆಂದನು ಕಪಿಶ್ರೇಷ್ಠನಾದ ಸುಷೇಣನು ಎಂಭತ್ತು ಯೋಜನಗಳನ್ನು ಹಾ ರಿಬಿಡುವೆನೆಂದನು ಹೀಗೆ ಒಬ್ಬರಮೇಲೊಬ್ಬರು ತಮ್ಮ ವೀರವನ್ನು ಹೇಳಿ ಕೊಳ್ಳುತ್ತಿರಲು ವೃದ್ಧನಾದ ಜಾಂಬವಂತನು ಆ ಸಮಸ್ತ ವಾನರರನ್ನೂ ಸಮಾಧಾನಪಡಿಸಿ ತಡೆದು, ಅವರನ್ನು ಕುರಿತು - ಎಲೈ ವೀರರೆ' ಪೂರೈದ ಲ್ಲಿ ನನಗೂ ತಕ್ಕಷ್ಟು ಲಂಪುನಶಕ್ತಿಯಿದ್ದಿತು ಹಾಗಿದ್ದ ನನಗೆ ಈಗ ವಯ * * ಗಜನೇ ಮೊದಲಾದವರು, ಮೊದಲು ತಮ್ಮನ್ನು ಸೀತಾನ್ವೇಷಣಕ್ಕಾಗಿ ಸು ಗ್ರೀವನು ಕಳುಹಿಸುವಾಗ ಭೂತಲೇ ಸಾಗರೇ ವಾಪಿ ಶೈಲೇಷಚ ವನೇಷುಟ | ಪಾತಾಳು vಪಿಮಧೇವಾನಮಾಮಾಶ್ಮೀದ್ಯತೇಗತಿ ಭೂಮಿಯಲ್ಲಿಯಾಗಲಿ, ಸಮುದ್ರದ ಲ್ಲಿಯಾಗಲಿ, ಪರತಾರಣ್ಯಗಳಲ್ಲಿಯಾಗಲಿ, ಕೊನೆಗೆ ಪಾತಾಳಮಧ್ಯದಲ್ಲಿಯಾಗಲಿ ತನ್ನ ಗತಿಗೆ ತಡೆಯಿಲ್ಲವೆಂದು ಒಬ್ಬೊಬ್ಬ ಕಪಿಯಧಪನೂ ತನ್ನ ತನ್ನ ಶಕ್ತಿಯನ್ನು ಹೇಳಿ ಕೊಂಡಿರುವನು ಹಾಗೆಯೇ ಅಂಗದನೂ ಪೂರೈಸರ್ಗದಲ್ಲಿ “ನಹಿ ವೋ ಗಮನೇ ಸಂ ಗಃ ಕದಾಚಿತ್ಯಸ್ಯಚಿತ” ಎಂದು ಅವರ ಪರಾಕ್ರಮವನ್ನು ಅನುಮೋದಿಸಿರುವ ನು ಈ ಮಾತುಗಳು ನಿಜವಾಗಿದ್ದ ಪಕ್ಷದಲ್ಲಿ,ಈಗ ಇಲ್ಲಿ ವೀರರಾದ ವಾನರರ, ತಾವು ಹತ್ತು ಯೋಜನಗಳನ್ನೂ, ಇಪ್ಪತಯೋಜನಗಳನ್ನೂ ಹಾರಬಲ್ಲೆವೆಂದು ಹೇಳಬ ಹುದೆ! ಎಂದರೆ, ತಾವು ಬಹಳಶಕ್ತಿಯುಕ್ತರಾಗಿದ್ದರೂ ರಾವಣನಿರುವ ಲಂಕೆಯನ್ನು ಪ್ರವೇಶಿಸಿ ಸೀತೆಯನ್ನು ಹುಡುಕುವುದು ತಮಗೆ ಸಾಧ್ಯವಲ್ಲವೆಂದು ತೋರಿದುದರಿಂದ್ಯ ಅದಕ್ಕೆ ಸಮರ್ಥನಾದ ಹನುಮಂತನಲ್ಲಿಯೇ ಈ ಕಾರಭರವನ್ನು ಹೊರಿಸಬೇಕೆಂದು ನಿಶ ಯಿಸಿ, ಅವನಿಗೆ ವಿಶೇಷಪ್ರೋತ್ಸಾಹವನ್ನು ಹುಟ್ಟಿಸುವುದಕ್ಕಾಗಿಯೇ ತಮ್ಮ ಶಕಿ, ಯನ್ನು ತಗ್ಗಿಸಿ ಹೇಳಿಕೊಂಡರೆಂದು ಗ್ರಾಹ್ಯವು.