ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೬೫ ] ಕಿಂಧಾಕಾಂಡವು. ೧೩೫೫ ಸ್ಟು ಕಳೆದುಹೋಯಿತು ಮುದುಕನಾಗಿಬಿಟ್ಟೆನು ಹೀಗಿದ್ದರೂ ನಮ್ಮ ಪ್ರ ಭುವಾದ ಸುಗ್ರೀವನ, ರಾಮನೂ ನಿಶ್ಚಯಿಸಿರುವ ಪ್ರಕೃತಕಾಲ್ಯವನ್ನು ಉಪೇಕ್ಷಿಸಿ ಬಿಟ್ಟು ಬಿಡುವುದಕ್ಕಿಲ್ಲ ಕಾಲಭೇದದಿಂದ ನನಗೆ ಈ ಅವಸ್ಥೆಯುಂ ಟಾಗಿದ್ದರೂ, ಈಗಲೂ ನಾನು ಎಷ್ಟು ದೂರಕ್ಕೆ ಹಾರಬಲ್ಲೆನೆಂಬುದನ್ನು ಹೇ ಳುವೆನು ಕೇಳಿರಿ ಈ ಮುಪ್ಪಿನಲ್ಲಿಯೂ ನಾನು ನಿಸ್ಸಂದೇಹವಾಗಿ ಸ್ವಲ್ಪ ವೂ ಹೆಚ್ಚು ಕಡಿಮೆಯಿಲ್ಲದೆ, ತೊಂಬತ್ತು ಯೋಜನಗಳನ್ನು ಹಾರುವೆನು ನ ನಗೆ ಮೊದಲು ಒಳ್ಳೆ ಯೌವನವಿದ್ದಾಗ, ನನಗಿದ್ದ ಗಮನಶಕ್ತಿಯು ಇಷ್ಟು ಮಾತ್ರವೇ ಅಲ್ಲ ಮೊದಲು ಬಲಿಚಕ್ರವರಿಯಾಗದಲ್ಲಿ ಶ್ರೀಮಹಾವಿಷ್ಣು ವು ತ್ರಿವಿಕ್ರಮಾವತಾರವನ್ನೆತ್ತಿ, ಮೂರಡಿಗಳ ಭೂಮಿಯನ್ನು ಯಾಚಿ ಸಿ, ಅದನ್ನು ತನ್ನ ಕಾಲಿನಿಂದ ಅಳೆಯುತಿದ್ದನಲ್ಲವೆ? ಆಗ ಮೂರು ಲೋಕ ವನ್ನೂ ಅತಿಕ್ರಮಿಸಿದ ಅವನ ಆಕಾರವನ್ನೇ (ಬ್ರಹ್ಮಾಂಡವನ್ನೇ ನಾನು ಪ್ರದಕ್ಷಿಣವಾಗಿ ಸುತ್ತಿ ಬಂದಿರುವೆನು ನನಗೆ ಯೌವನಕಾಲದಲ್ಲಿ ಬೇರೆ ಯಾರಿಗೂ ಇಲ್ಲದ ಅಸಾಧಾರಣಗಮನಶಕ್ತಿಯಿದ್ದಿತು ಹಾಗಿದ್ದ ನಾನು ಈಗ ಕೈಲಾಗದ ಮಧುಕನಾಗಿಬಿಟ್ಟೆನು ನನ್ನ ಹಾರುವ ಶಕ್ತಿಯೆಲ್ಲವೂ ಅಡ ಗಿಹೋಯಿತು ಈಗ ನನಗೆ ತೊಂಬತ್ತು ಯೋಜನಗಳನ್ನು ಮಾತ್ರ ಹಾರುವಶ ಕಿಯುಂಟೆಂದು ತೋರಿರುವುದು ಆದರೆ ಲಂಕೆಗೆ ನೂರುಯೋಜನಗಳನ್ನು ದಾಟಿ ಹೋಗಬೇಕಾಗಿರುವುದರಿಂದ, ಈಗ ನನ್ನ ಶಕ್ತಿಯ ಪ್ರಯೋಜನಕ್ಕೆ ಬಾರದು” ಎಂದನು ಇವೆಲ್ಲವನ್ನೂ ಕೇಳುತಿದ್ದ ಯುವರಾಜನಾದ ಅಂಗದ ನು, ಪ್ರಾಜ್ಞನಾದ ಜಾಂಬವಂತನ ಅನುಮತಿಯನ್ನು ಪಡೆದು, ತನಗಿರುವ ಶಕ್ತಿಯನ್ನು ಹೇಳುವುದಕ್ಕೆ ತೊಡಗಿ, ಬಹಳ ಸಾರವತ್ತಾದ ವಾಕ್ಯದಿಂದ ಆ ವಾನರರನ್ನು ಕುರಿತು, ಎಲೈ ವಾನರರೆ ' ನೀವು ನಿಮ್ಮ ನಿಮ್ಮ ಪರಾ ಕ್ರಮವನ್ನು ಹೇಳಿದು ನಾಯಿತಷ್ಟೆ” ನನ್ನ ಶಕ್ತಿಯನ್ನೂ ಹೇಳುವೆನು ಕೇ ೪ರಿ ಇಲ್ಲಿಂದ ಲಂಕೆಗೆ ನೂರುಯೋಜನಗಳಿರುವುವಷ್ಟೆ? ಈ ನೂರುಯೋ ಜನಗಳನ್ನೂ ನಾನು ಹಾರಿಹೋಗಬಲ್ಲೆನು ಆದರೆ ಹಿಂತಿರುಗಿ ಬರುವುದಕ್ಕೆ ನ ನಗೆ ಶಕ್ತಿಯಿರುವುದೋ ಇಲ್ಲವೋ ಎಂಬುದನ್ನು ಈಗ ನಿಶ್ಚಯಿಸಿ ಹೇಳಲಾ