ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಪಗ, ೬೫] ಕಿಷಿಂಥಾಕಾಂಡವು ೧೫a ರಗಳ ಬೇರನ್ನು ಚೆನ್ನಾಗಿ ರಕ್ಷಿಸಿಟ್ಟರಲ್ಲವೇ ಅದರಿಂದ ಪುಷ್ಟಫಲಾದಿಗಳನ್ನು ಪಡೆಯಬಹುದು ಆ ಮೂಲವನ್ನೇ ಕದಲಿಸಿದಮೇಲೆ ವೃಕ್ಷಗಳಲ್ಲಿ ಯಾವ ಗುಣವುಂಟು? ಎಲೈ ಸತ್ಯಪರಾಕ್ರಮನೆ ! ಹಾಗೆಯೇ ಇಲ್ಲಿಯೂ ಈಗಿನ ಕಾರಸಾಧನೆಗಾಗಿ ನೀನೇ ನಮಗೆ ಮುಖ್ಯ ನಿಯಾಮಕನಾಗಿ, ಬುದ್ಧಿ ಪಗಾ ಕ್ರಮಗಳಲ್ಲಿ ಮೇಲೆನಿಸಿಕೊಂಡು, ಈ ಕಾರಸಿದ್ಧಿಗೂ ಮೂಲಭೂತನಾಗಿ ರುವೆ ! ನೀನು ಲಂಕೆಗೆ ಹೋದಮೇಲೆ ನಮಗೆ ಸಿದ್ದಿಯೆಲ್ಲಿಯದು? ಇದಲ್ಲದೆ ನೀನು ರಾಜಕುಮಾರನುಮಾತ್ರವೇ ಅಲ್ಲ' ಈಗ ನಮ್ಮೆಲ್ಲರಿಗೂ ನೀನೇ ರಾಜ ನಾಗಿಯೂ ಇರುವೆ ನಿನ್ನ ನ್ನಾಶ್ರಯಿಸಿಯೇ ನಾವೆಲ್ಲರೂ ಕಾಠ್ಯಸಾಧನೆಯಲ್ಲಿ ಸಮರರೆನಿಸಿಕೊಳ್ಳುವೆವು ನೀನಿಲ್ಲದಮೇಲೆ ನಮಗೆ ಯಾವ ಸಾಮರವುಂ ಟು ” ಎಂದನು ಮಹಾಪ್ರಾಜ್ಞನಾದ ಜಾಂಬವಂತನು ಹೇಳಿದ ಮಾತನ್ನು ಕೇಳಿ, ಅಂಗದನು ಅವನನ್ನು ಕುರಿತು “ಎಲೈ ಪೂಜ್ಯನೆ ' ಈ ಸಮುದ್ರವ ನ್ನು ದಾಟುವುದಕ್ಕಾಗಿ ನಾನೂ ಪ್ರಯತ್ನಿ ಸದೆ, ಬೇರೊಬ್ಬ ವಾನರ ನೂ ಹೋಗಲಾರದೆ ಸುಮ್ಮನಿದ್ದ ಪಕ್ಷದಲ್ಲಿ, ಇನ್ನು ನಾವೆಲ್ಲರೂ ತಿರುಗಿ ಪ್ರಾ ಯೋಪವೇಶವನ್ನೇ ಮಾಡಬೇಕಾಗಿ ಬರುವುದಲ್ಲವೆ? ವಾನರೇಂದ್ರನಾದ ಸ. ಗ್ರೀವನ ಆಜ್ಞೆಯನ್ನೂ ನೆರವೇರಿಸದೆ, ಅವನು ಹೇಳಿದ್ದ ಕಾಲವನ್ನೂ ಮೀರಿ ನಾವು ಹಿಂತಿರುಗಿ ಕಿಟ್ಟಂಧೆಗೆ ಹೋದರೂ, ನಮಗೆ ನಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದೇನೋ ಅಸಂಭವವು ನಮ್ಮ ರಾಜನಾದ ಸುಗ್ರೀವನಿಗೆ ಅನುಗ್ರಹವುಂಟಾದರೂ ಮಿತಿಮೀರಿ ಹೋಗುವುದು ಕೋಪವುಂಟಾದರೂ ಮಿತಿಮೀರಿ ಹೋಗುವುದು ಅವನ ಆಜ್ಞೆಯನ್ನು ಮೀರಿ ನಾವು ಅವನಲ್ಲಿಗೆ ಹೋದರೆ ನಮ್ಮೆಲ್ಲರಿಗೂ ನಾಶವು ತಪ್ಪದು ಆದುದರಿಂದ ಸಮಸ್ತವಿಷಯ ಗಳನ್ನೂ ಬಲ್ಲ ನೀನೇ ನಿನ್ನಲ್ಲಿ ಚೆನ್ನಾಗಿ ಪರಾಲೋಚಿಸಿ, ಈ ಕಾಠ್ಯವು ಕೆ ಡದಂತೆ ಉಪಾಯವನ್ನು ಹುಡುಕಿ ಹೇಳು ” ಎಂದನು ಇದನ್ನು ಕೇಳಿ ಜಾಂ ಬವಂತನು ಆ ಅಂಗದನನ್ನು ನೋಡಿ “ಎಲೈ ಯುವರಾಜನೆ' ನೀನು ಪ್ರಯ ತ್ನಿಸಿ ಬಂದ ಕಾರಕ್ಕೆ ಲೋಪವೆಂಬುದೆಂದಿಗಾದರೂ ಉಂಟೆ? ನೀನು ಚಿಂತಿ ಸಬೇಡ ! ಈ ಕಾಠ್ಯವನ್ನು ಸಾಧಿಸಬಲ್ಲ ಮಹಾವೀರನನ್ನು ಇದೋ ಈಗಲೇ ತೋರಿಸಿಕೊಡುವೆನು ” ಎಂದನು, ವೃದ್ಧನಾದ ಜಾಂಬವಂತನು ಆ ವಾನರ,