ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೦ ಶ್ರೀಮದ್ರಾಮಾಯಣವು [ಸರ್ಗ, ೬೩ ಸಿದ್ಧಿಹೊಂದಿದ ನಿನ್ನನ್ನು ಆಲಿಂಗಿಸಿದದಂತೆ, ಮನಸ್ಸಿನಿಂದಲೇ ವರಿಸಿದೆ ನೇಹೊರತು ಬೇರೆಯಲ್ಲ ಈಗಲೂ ನಿನ್ನ ಪಾತಿವ್ರತ್ಯಕ್ಕೆ ಭಂಗವುಂಟಾಗುವಂ ತೆನಿನ್ನನ್ನು ಹಿಂಸಿಸುವವನಲ್ಲ ಇದರಿಂದನಿನಗೆ ಮುಂದೆಶ್ರೇಯಸ್ಸುಂಟು ವೀರ್ ದಲ್ಲಿಯೂಬುದ್ದಿಯಲ್ಲಿಯೂ ಅಸಮಾನಕಾದ ಪುತ್ರನೊಬ್ಬನು ನಿನಗೆ ಹುಟ್ಟು ವನು ಅವನು ಮಹಾಧೀರನಾಗಿಯೂ ಮಹಾತೇಜಸ್ವಿಯಾಗಿಯೂ, ಲೋ ಕೋತ್ತರವಾದ ಬಲಪರಾಕ್ರಮಗಳುಳ್ಳವನಾಗಿಯೂ ಖ್ಯಾತಿಹೊಂದಿರ ವನು ಹಾರುವುದರಲ್ಲಿಯೂ ನೆಗೆಯುವುದರಲ್ಲಿಯೂ ನನಗೆ ಸಮಾನವಾದ ಶಕ್ತಿಯುಳ್ಳವನಾಗುವನು ನೀನು ಚಿಂತಿಸಬೇಡ” ಎಂದನು. ಎಲೈ ಆಂಜನೇ ಯನೆ' ಹೀಗೆ ಹೇಳಿದ ವಾಯುದೇವನ ಮಾತನ್ನು ಕೇಳಿ, ನಿನ್ನ ತಾಯಿಯಾದ ಅಂಜನೆಗೆ ಬಹಳ ಸಂತೋಷವುಂಟಾಯಿತು ಅಲ್ಲಿನ ಗುಹೆಯಲ್ಲಿಯೇ ವಾನರ ಶ್ರೇಷ್ಠನಾದ ನಿನ್ನನ್ನು ಹಡೆದಳು ನೀನು ಹುಟ್ಟಿದೊಡನೆ ಆಕಾಶದಲ್ಲಿ ಸೂ "ಬಿಂಬವು ಉದಿಸಿದುದನ್ನು ನೋಡಿ ಆ ಮಹಾರಣ್ಯದಲ್ಲಿ ಬೆಳೆದ ಒಂದು ದೊಡ್ಡಹಣ್ಣೆಂಬ ಭ್ರಾಂತಿಯಿಂದ ಅದನ್ನು ಹಿಡಿಯಬೇಕೆಂದು ಮೇಲೆ ಹಾ ರಿದೆ ಎಲೆ ಮಹಾಕಪೀ' ನೀನು ಆಕಾಶದಲ್ಲಿ ಮುನ್ನೂರುಯೋಜನಗಳದೂರ ಕ್ಕೆ ಹಾರಿ, ಸೂಕ್ಯನ ತೇಜಸ್ಸಿನ ಬೇಗೆಗೆ ಸಿಕ್ಕಿದರೂ ಸ್ವಲ್ಪಮಾತ್ರವೂ ಬಳಲಿಲ್ಲ ನೀನು ಹೀಗೆ ಅಂತರಿಕ್ಷದಲ್ಲಿ ಅತಿವೇಗದಿಂದ ಅಷ್ಟು ದೂರಕ್ಕೆ ಬಂ ದುದನ್ನು ನೋಡಿ, ಬುದ್ಧಿಶಾಲಿಯಾದ ದೇವೇಂದ್ರನು, ನಿನ್ನಿಂದ ಲೋಕಕ್ಕೆ ಏನಪಾಯವುಂಟಾಗಬಹುದೋ ಎಂದುಶಂಕಿಸಿ, ಕೋಪಗೊಂಡು ನಿನ್ನನ್ನು ತಡೆಯುವುದಕ್ಕಾಗಿ ತನ್ನ ವಜ್ರಾಯುಧವನ್ನು ನಿನ್ನ ಮೇಲೆ ಬೀಸಿದನು ಆ ಪ್ರಹಾರದಿಂದ ನೀನು ಆ ಪರತಶಿಖರದಲ್ಲಿ ಬಿದ್ದಾಗ, ನಿನ್ನ ಎಡದಹನುವು ಆ ಕಲ್ಲುಬಂಡೆಗೆ ತಗುಲಿ ಊಟಕೊಂಡಿತು ಅದುಮೊದಲು ನಿನಗೆ ಹನುಮಂ ತನೆಂಬ ಹೆಸರು ಪ್ರಸಿದ್ಧವಾಯಿತು'ಹೀಗೆ ನಿನಗೆ ಇಂದ್ರನು ಮಾಡಿದ ತಿರ ಸ್ವಾರವನ್ನು ನೋಡಿ ವಾಯುದೇವನಿಗೆ ಮಿತಿಮೀರಿದ ಕೋಪವುಂಟಾಯಿತು. ಈ ಮೂರುಲೋಕವನ್ನೂ ಹಾಳುಗೆಡಿಸಬೇಕೆಂಬ ಉದ್ದೇಶದಿಂದ ಎಲ್ಲೆಲ್ಲಿ ಯೂ ತನ್ನ ಸಂಚಾರವನ್ನೇ ನಿಲ್ಲಿಸಿಬಿಟ್ಟನು ದೇವತೆಗಳೆಲ್ಲರೂ ಭಯದಿಂದ ಬೆಜ್ಜರಬಿದ್ದರು ಮೂರುಲೋಕವೂ ತಳಿಸಿತು. ಆಗ ಸಮಸ್ತದೇವತೆಗ