ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܬܘ ಸರ್ಗ, ೬೩] ಕಿಂಧಾಕಾಂರು. ಭೂ ಸೇರಿಬಂದು ವಾಯುದೇವನಿಗೆ ಕೋಪಸಮಾಧಾನವನ್ನು ಮಾಡತೊ ಡಗಿದರು ಇದರಿಂದ ವಾಯುವು ಪ್ರಸನ್ನ ನಾದಮೇಲೆ ಬ್ರಹ್ಮನು ಬಾಲ ನಾದ ನಿನ್ನ ಬಳಿಗೆ ಬಂದು ನಿನಗೆ ಎಂದಿಗೂ ಶಸ್ತದಿಂದ ಸಾವಿಲ್ಲದಿರಲಿ " ಎಂದು ವರವನ್ನು ಕೊಟ್ಟನು ಎಲೈ ಸತ್ಯವಿಕ್ರಮನೆಗೆ ಆಗ ದೇವೇಂದ್ರನು ನಿನ್ನ ಬಳಿಗೆ ಬಂದು, ಮಹಾಘೋರವಾದ ತನ್ನ ವಜ್ರಾಯುಧದ ಪೆಟ್ಟಿನಿಂದ ಲೂ ನಿನಗೆ ನೋವಿಲ್ಲದುದನ್ನು ನೋಡಿ ಆಶ್ಚಯ್ಯಪಡುತ್ತ, ನಿನ್ನಲ್ಲಿ ಪ್ರೀತನಾಗಿ «ನಿನಗೆ ಸ್ವಚ್ಛಾಮರಣಶಕ್ತಿಯುಂಟಾಗಲಿ” ಎಂದು ಸಕ್ಕೋತ್ರಮವಾದ ಮತ್ತೊಂದುವರವನ್ನು ಕೊಟ್ಟನು ಎಲೈ ವಾನರವೀರನೆ' ಹೀಗೆ ಭಯಂಕರ ಪರಾಕ್ರಮವುಳ್ಳ ನೀನು ಕೇಸರಿಯ ಕ್ಷೇತ್ರದಲ್ಲಿ ಹುಟ್ಟಿದವನು ವಾಯು ದೇವನಿಗೆ ಸೌರಸಪುತ್ರನು ತೇಜಸ್ಸಿನಲ್ಲಿಯೂ, ಲಂಫನದಲ್ಲಿಯೂ, ನಿನ್ನ ತಂದೆಯಾದ ವಾಯುವಿಗೆ ಸಾಟಿಯಾದವನು ಸಾಮರ್ಥ್ಯದಲ್ಲಿಯೂ ಪರಾ ಕ್ರಮದಲ್ಲಿಯೂ ನಿನ್ನನ್ನು ಬೇರೊಬ್ಬ ಪಕ್ಷಿರಾಜನೆಂದೇ ಹೇಳಬಹುದು ನಮ ಗಾದರೋ ಈಗ ಪ್ರಾಣಗಳನ್ನುಳಿಸಿಕೊಳ್ಳುವುದೇ ಕಷ್ಟವಾಗಿ ತೋರಿರು ವುದರಿಂದ, ಈಗ ನೀನೇ ನಮ್ಮೆಲ್ಲರಿಗೂ ಪ್ರಾಣದಾನವನ್ನು ಮಾಡಿ ಕಾಪಾಡ ಬೇಕು ಎಲೈವತ್ಪನೆ ! ವಿಷ್ಣು ದೇವನು ತ್ರಿವಿಕ್ರಮಾವತಾರವನ್ನು ಮಾಡಿ ದಾಗ, ನಾನು ಪಕ್ವತಾರಣ್ಯಗಳಿಂದ ತುಂಬಿದ ಈ ಸಮಸ್ತ ಭೂಮಂಡಲ ವನ್ನೂ ಇಪ್ಪತ್ತೊಂದಾವರ್ತಿ ಪ್ರದಕ್ಷಿಣಮಾಡಿ ಬಂದೆನು ಇಷ್ಟೆ ಅಲ್ಲದೆ ಮೊದಲು ಅಮೃತಮಥನದಲ್ಲಿ ಸಮುದ್ರವನ್ನು ಕಡೆಯುವುದಕ್ಕಾಗಿ ದೇವತೆ ಗಳು ಹೇಳಿ ಕಳುಹಿಸಿದಮೇರೆಗೆ, ನಾನು ನಾನಾವಿಧಮೂಲಿಕೆಗಳನ್ನು ಸಂ ಗ್ರಹಿಸಿತಂದೆನು ಆ ಓಷಧಿಗಳನ್ನು ಹಾಕಿ ಕಡೆದುದರಿಂದಲೇ ಸಮುದ್ರದಿಂದ ಅಮೃತವು ಹುಟ್ಟಿತು ಆಗ ನನಗೆ ಅಥಿಕವಾದ ಬಲವಿದ್ದಿತು ಹಾಗಿದ್ದ ನಾನು ಈಗ ವೃದ್ಧನಾದುದರಿಂದ ನನ್ನ ಶಕ್ತಿಯು ಕುಂದಿತು ಈ ಕಾಲದಲ್ಲಿ ನಮ್ಮಲ್ಲಿ ನೀನೊಬ್ಬನೇ ಸಮಸ್ತ ಶಕ್ತಿಗಳಿಂದಲೂ ಪೂರ್ಣನಾದವನು ಆದುದರಿಂದ ಈಗ ನಿನ್ನ ಪರಾಕ್ರಮವನ್ನು ಹೊರಪಡಿಸು ಹಾರುವುದರಲ್ಲಿ ನಿನಗೆಣೆಯಾ ದವರು ಬೇರೊಬ್ಬರೂ ಇಲ್ಲವು ಈ ವಾನರಸೈನ್ಯವೆಲ್ಲವೂ ನಿನ್ನ ವೀರವನ್ನು ನೋಡಬೇಕೆಂದೇ ಆತುರಪಡುತ್ತಿರುವುವು ಎಲೈ ವಾನರಹ್ಮನೆ' ಏಳು' ಈ