ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬೨ ಶ್ರೀಮದ್ರಾಮಾಯಕನ [ಸರ್ಗ, ೬೭. ಸಮುದ್ರವನ್ನು ಲಂಘಿಸು ನಿನಗಿರುವ ಗಮವಶಕ್ತಿಯು ಯಾವಭೂತಗಳಿ ಗೂ ಇಲ್ಲವಲ್ಲವೆ? ಈ ಸಮಸ್ತ ವಾನರರೂ ದುಃಖಿಸುವುದನ್ನು ಕಾಣೆಯಾಗಿ ಈಗಲೂ ನೀನು ಉಪೇಕ್ಷಿಸಬಹುದೆ? ಪೂತ್ವದಲ್ಲಿ ವಿಷ್ಣುದೇವನು ಬಲಿಚಕ್ರ ವರ್ತಿಯು ಕೊಟ್ಟ ಮೂರಡಿಯ ನೆಲವನ್ನಾ ಕ್ರಮಿಸಿದಂತೆ ನಿನ್ನ ವೇಗವನ್ನು ತೋರಿಸಿ ಸಮುದ್ರವನ್ನು ಲಂಘಿಸು” ಎಂದನು ಇದನ್ನು ಕೇಳಿ ಪ್ರಸಿದ್ಧವೇ ಗವುಳ್ಳ ಹನುಮಂತನು ಉತ್ಸಾಹಗೊಂಡವನಾಗಿ, ಆ ಸಮಸ್ತವಾನರಸೈನ್ಯ ವೂ ಸಂತೋಷಪಡುವಂತೆ, ಆಗಲೇ ತನ್ನ ದೇಹವನ್ನು ಅತ್ಯದ್ಭುತವಾಗಿ ಬೆಳಸಿ ಕೊಂಡನು ಇಲ್ಲಿಗೆ ಅರುವತ್ತಾರನೆಯ ಸರ್ಗವು | ಹನುಮಂತನು ತನ್ನ ಉತ್ಪತ್ತಿಯನ್ನೂ, ತನ್ನ ಒಲಪರಾ ಕ್ರಮಗಳನ್ನೂ ಎತ್ತಿಹೇಳಿ, ವಾನರರಿಗೆ ಉತ್ಸಾಹ ) ವನ್ನು ಹುಟ್ಟಿಸಿದುದು, ಸಮುದ್ರವನ್ನು ದಾಟುವುದಕ್ಕಾಗಿ ಮಹೇಂದ್ರಪರ ತವನ್ನು ಏರಿದುದು ಹೀಗೆ ಸಮುದ್ರದ ನೂರುಯೋಜನಗಳನ್ನೂ ಪೂರ್ಣವಾಗಿ ಹಾರ ಬೇಕೆಂದುಆಕಾರದಿಂದಲೂ,ವೀಲ್ಯದಿಂದಲೂ, ಮೇಲೆಮೇಲೆ ಉಬ್ಬುತ್ತಿರುವ ವಾನರೋತ್ತಮನಾದ ಆ ಆಂಜನೇಯನನ್ನು ಕಂಡೊಡನೆ, ಅಲ್ಲಿದ್ದ ಸಮಸ್ಯ ವಾನರರೂ ತಮ್ಮ ಚಿಂತೆಯನ್ನು ಬಿಟ್ಟು ಸಂತೋಷದಿಂದ ಉಕ್ಕುತಿದ್ದರು ಒ ಬ್ಲೊಬ್ಬರೂ ಸಹ್ಮನಾದವನ್ನು ಮಾಡತೊಡಗಿದರು ಒಬ್ಬೊಬ್ಬರೂ ಮುಂದೆಬಂದು ಬಲಾಢನಾದ ಹನುಮಂತನನ್ನು ಸ್ತುತಿಸುತಿದ್ದರು ಒಬ್ಬೊ ಬ್ಬರ ಮನಸ್ಸಿನಲ್ಲಿಯೂ, ಮಿತಿಮೀರಿದ ಹರ್ಷವು ನೆಲೆಗೊಂಡಿತು ಎಲ್ಲರೂ ಆಶ್ಚರದಿಂದ ಅವನಸುತ್ತಲೂಸೇರಿ,ಪೂತ್ವದಲ್ಲಿ ತ್ರಿವಿಕ್ರಮಾವತಾರವನ್ನೆತ್ತಿ ಸಮಸ್ತಲೋಕಗಳನ್ನೂ ಮೂರಡಿಗಳಿಂದ ಅಳೆಯುವುದಕ್ಕೆ ಪ್ರಯತ್ನಿಸಿದ ಶ್ರೀಮಹಾವಿಷ್ಣುವನ್ನು ಸುತ್ತಿನಿಂತು ಪ್ರಜೆಗಳು ಆಶ್ಚರದಿಂದ ಸ್ತಬ್ಧರಾಗಿ ನೋಡುತಿದ್ದಂತೆ, ಸಬ್ಬರಾಗಿ ನೋಡುತಿದ್ದರು ವಾನರರು ಸೋತ್ರ ಮಾಡುತಿದ್ದಷ್ಟೂ ಆ ಹನುಮಂತನಿಗೆ ದೇಹವೂ, ವೀರವೂ, ಮೇಲೆಮೇಲೆ ಉಬ್ಬಿ ಬರುತಿತ್ತು ಅವನ ಮನಸ್ಸಿನ ಸಂತೋಷವೂ ಇಕ್ಕಿಬರುತಿತ್ತು ಆ ಸಂ