ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೬೭ ] ಕಿಷಿಂಧಾಕಾಂಡವು ೧೩೩೩ ತೋಷದಿಂದ ಬಾಲವನ್ನಾಡಿಸುತ್ತ, ಮೇಲೆಮೇಲೆ ಬೆಳೆಯುತ್ತಲೇ ಇದ್ದನು. ವೃದ್ಧರಾದ ವಾನರರೆಲ್ಲರೂ ಸ್ತೋತ್ರಮಾಡುತ್ತಿದ್ದಾಗ ಅವನತೇಜಸ್ಸು ಮೇ ಲೆಮೇಲೆ ವೃದ್ಧಿ ಹೊಂದಿತು.ಅವನ ಆಕಾರವು ಎಣೆಯಿಲ್ಲದಂತೆ ಕಾಣಿಸಿತು ಪ ರೈತಗುಹೆಯಲ್ಲಿ ಉತ್ಸಾಹದಿಂದುಬ್ಬಿ ಬಳೆಯುವ ಸಹ್ಮದಂತೆ ಈತನು ವಿ ಬೃಂಭಿಸುತ್ತಿದ್ದನು ಹೀಗೆ ಉತ್ಸಾಹದಿಂದುಬ್ಬುತ್ತಿರುವ ಥೀಮಂತನಾದ ಆ ಹನುಮಂತನಮುಖವು,ಕೆಂಪಗೆಕಾಯಿಸಿದ ಹುರಿಯುವ ಮಡಕೆಯಂತೆಯೂ, ಹೊಗೆಯಿಲ್ಲದ ಬೆಂಕಿಯಂತೆಯ ಜ್ವಲಿಸುತಿತ್ತು ಆಗ ಹನುಮಂತನು ಸಂ ತೋಷದಿಂದುಬ್ಬಿದ ರೋಮಾಂಚವುಳ್ಳವನಾಗಿ, ವಾನರರ ಮಧ್ಯದಲ್ಲಿ ಎ ದ್ದು ನಿಂತು, ಅಲ್ಲಿದ್ದ ವೃದ್ಧರಾದ ವಾನರರನ್ನು ನಮಸ್ಕರಿಸಿ, ಈ ಮಾತನ್ನು ಹೇಳುವನು, (ಎಲೈ ಪೂಜ್ಯರೆ' ಅಗ್ನಿಗೆ ಸಖನಾದ ವಾಯುದೇವನು ಎಣೆ ಯಿಲ್ಲದ ಶಕ್ತಿಯುಳ್ಳವನು ಅಸಾಧಾರಣವಾದ ಗಮನವೇಗವುಳ್ಳವನು ಸಾ ಟೆಯಲ್ಲದ ಬಲವುಳ್ಳವನು ನೆಲವನ್ನು ಮುಟ್ಟದೆ ಆಕಾಶದಲ್ಲಿಯೇ ಸಂಚರಿಸ ತಕ್ಕವನೆಂಬುದನ್ನು ಕಾಣಿರಾ ' ಶೀಘ್ರವೇಗವುಳ್ಳ ಮಹಾತ್ಮನಾದ ಆ ವಾ ಯುವಿಗೆ ನಾನು ಪುತ್ರನಲ್ಲವೆ ? ಇನ್ನು ಹಾರುವುದರಲ್ಲಿ ನನಗೆ ಸ ಾ ನರಾದವರು ಬೇರೆಯಾರುಂಟು? ವಿಸ್ತಾರವಾಗಿಯೂ, ಆಕಾಶವನ್ನೊದೆಯು ವಂತೆ ಮಹೋನ್ನತವಾಗಿಯೂ ಇರುವ ಮಹಾಮೇರುಪವ್ವತವನ್ನು ಕೂ ಡ, ನಾನು ನಡುವೆ ಎಲ್ಲಿಯೂ ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಸಹ ಶ್ರಾವರ್ತಿಯಾದರೂ ಸುತ್ತಿಬರಬಲ್ಲೆನು ನನ್ನ ತೋಳಿನಬಲದಿಂದಲೇ ಈ ಮಹಾಸಮುದ್ರಜಲವೆಲ್ಲವನ್ನೂ ಮೇಲೆ ಚೆಲ್ಲಿ, ಅನೇಕ ಪಕ್ವತಗಳಿಂದ ಲೂ, ನದಿಗಳಿಂದಲೂ, ಮಡುಗಳಿಂದಲೂ ತುಂಬಿದ ಈ ಸಮಸ್ತಲೋ ಕವನ್ನೂ ಆ ನೀರಿನಲ್ಲಿ ತೇಲಾಡಿಸಬಲ್ಲೆನು ಈಗ ನನ್ನ ತೊಡೆಗಳ, ಮ ಇು ಮೊಳಕಾಲುಗಳ ವೇಗದಿಂದಲೇ ಮಹಾಗ್ರಾಹಗಳಿಂದ ಕೂಡಿದ ಈ ಸಮುದ್ರವನ್ನೂ ಕೂಡ ಉಲ್ಲೋಲಕಲ್ಲೋಲವಾಗುವಂತೆ ತುಳುಕಾಡಿಸಿ, ಅದರಲ್ಲಿರುವ ತಿಮಿತಿಮಿಂಗಲಾದಿಸಮಸ್ಯಪ್ರಾಣಿಗಳೂ ಆಕಾಶದಲ್ಲಿ ತಮ್ಮ ಳಿಸುವಂತೆ ಮಾಡುವೆನು ನೋಡಿರಿ' ಆಕಾಶದಲ್ಲಿ ಗರುಡನು ತನ್ನ ಆಹಾ ರಾರ್ಥವಾಗಿ ಸರ್ಪಗಳನ್ನು ಹಿಡಿಯಬೇಕೆಂದು ಮಹಾವೇಗದಿಂದ ತಿರುಗು