ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩೪ ಶ್ರೀಮದ್ರಾಮಾಯಣವು (ಸರ್ಗ, ೬೭ ತಿರುವಾಗ, ಆತನ ಒಂದು ಸುತ್ತಿಗೆ ಸಾವಿರಸುತ್ತಿನಂತೆ ನಾನು ಅವ ನನ್ನು ಪ್ರದಕ್ಷಿಣಮಾಡಬಲ್ಲವನೆಂದು ತಿಳಿಯಿರಿ ಸೂರನು ಉದಯಪ ರೈತದಿಂದ ಹೊರಡುವಾಗಲೇ ಅವನೊಡನೆ ಹೊರಟು, ಅವನಿಗೆ ಮೊದಲೇ ಅಸ್ತಗಿರಿಯನ್ನು ಸೇರಿ, ಆಸರನು ಆಕಾಶಮಧ್ಯದಲ್ಲಿ ಕಾಣುವಾಗಲೇ ನಾನು ಹಿಂತಿರುಗಿಬಂದು ಅವನನ್ನಿ ದಿರುಗೊಳ್ಳಬಲ್ಲೆನು ಆ ಸೂಯ್ಯನನ್ನಿ ದಿರುಗೊಂಡಮೇಲೆಯೂ ನಾನು ನೆಲವನ್ನು ಸೋಕಿ ವಿಶ್ರಮಿಸಿಕೊಳ್ಳದೆ ಮೊದಲಿನ ಮಹಾವೇಗದಿಂದಲೇ ತಿರುಗಿ ಮತ್ತೊಂದಾವರ್ತಿ ಸೂರನದಿ ರುಗೊಳ್ಳಬಲ್ಲೆನು ಇಷ್ಟೆ ಇಲ್ಲದೆ ಆಕಾಶದಲ್ಲಿ ಸಂಚರಿಸತಕ್ಕ ಬೇರೆ ಯಾವ ಭೂತಗಳನ್ನಾಗಲಿ, ಬೇರೆಯಾವ ಗ್ರಹನಕ್ಷತ್ರಗಳನ್ನಾಗಲಿ ವೇಗ ದಲ್ಲಿ ನಾನು ಮೀರಿಹೋಗಬಲ್ಲೆನು ಎಲೈ ವಾನರರೇ' ಈಗ ನಾನು ಆ ಕಾಶದಲ್ಲಿ ಹಾರುತ್ತಿರುವಾಗ ಆ ವೇಗದಿಂದಲೆ ಈ ಸಮುದ್ರವನ್ನು ಶೋಷಿಸಿಬಿಡುವೆನು ನೋಡಿರಿ ' ಭೂಮಿಯನ್ನೂ ಭೇದಿಸಿಬಿಡುವೆನು' ಪರ ತಗಳನ್ನೂ ಚೂರ್ಣ ರವಾಗಿ ಮಾಡುವೆನು ನಾನು ಹಾರುವಾಗ ನನ್ನ ತೊಡೆಯ ವೇಗದಿಂದ ಈ ಸಮುದ್ರವೇ ನನ್ನ ಹಿಂದೆ ಹೊರಟು ಬರಬೇಕಾಗುವುದೆಂದು ತಿಳಿಯಿರಿ ಈಗ ನಾನು ಸಮುದ್ರವನ್ನು ಲಂ ಫಿಸುವುದಕ್ಕಾಗಿ ಆಕಾಶಕ್ಕೆ ಹಾರಿದಕ್ಷಣವೇ, ನನ್ನ ವೇಗಂದ ಇಲ್ಲಿನ ಕಾ ಡುಗಳಲ್ಲಿರುವ ಲತೆಗಳಿಂದಲೂ, ವೃಕ್ಷಗಳಿಂದಲೂ, ಬಗೆಬಗೆಯ ಪ್ರಷ್ಟ ಗಳು ನನ್ನ ಹಿಂದೆ ಸೆಳೆಯಲ್ಪಡುವುದನ್ನು ನೋಡುವಿರಿ ಈ ಪಷ್ಟಗಳಿಂದ ಆಕಾಶಗಲ್ಲಿ ನಾನು ಹೋಗುವ ದಾರಿಯು ನಕ್ಷತ್ರಗಳಿಂದ ತುಂಬಿದ ಛಾ ಯಾಪಥ (ಸ್ವಾತೀನಕ್ಷತ್ರಮಾರ್ಗ)ದಂತೆ ಕಾಣುವುದನ್ನು ನೋಡಿರಿ! ಎಲೈ ವಾನರೋತ್ತಮರೆ' ನಾನು ಇಲ್ಲಿಂದ ಆಕಾಶಕ್ಕೆ ನೆಗೆಯುವದನ್ನಾ ಗಲಿ ಹಾರಿಹೋಗುವದನ್ನಾಗಲಿ, ಸಮುದ್ರದ ಆ ದಕ್ಷಿಣತೀರದಲ್ಲಿ ಇಳಿಯವು ದನ್ನಾಗಲಿ, ಸಮಸ್ತಭೂತಗಳೂ, ಎಷ್ಟಾದ್ಯದಿಂದ ನೋಡುವುವೆಂಬು ದನ್ನು ನಿಮ್ಮ ಕಣ್ಣಾರೆ ನೀವೇನೊಡಬಹುದು ಈಗ ನಾನು ಆಕಾಶದಲ್ಲಿ ಹೋಗುವಾಗ ಮಹಾಮೇಫುದಂತೆ ಗಗನಸ್ಥಲವೆಲ್ಲವನ್ನೂ ವ್ಯಾಪಿಸಿ, ಆ ಆ ಕಾಶವನ್ನೇ ನುಂಗಿಬಿಡುವಂತೆ ಕಾಣುವುದನ್ನು ನೀವೇ ನೋಡುವಿರಿ ! ಹೆಚ್ಚಾ