ಸರ್ಗ, ೬೭ ] ಕಿಷಿಂಧಾಕಾಂಡವು. ೧೩೬೫ ಗಿ ಹೇಳಿದುದರಿಂದೇನು? ಈಗ ನಾನು ಮೇಫುಗಳನ್ನು ಉರುಬಿಬಿಡುವೆನು ಪಕ್ವತಗಳನ್ನು ನಡುಗಿಸುವೆನು ನಾನು ಎಚ್ಚರಿಕೆಯಿಂದ ಹಾರುವಾಗ ಈ ಸಮುದ್ರವನ್ನೇ ಕೈಭಹೊಂದಿಸುವೆನು ಮುಖ್ಯವಾಗಿ ನನಗಿರುವ ಶ ಕಿಯು ಗರುಡನೊಬ್ಬನು, ವಾಯುದೇವನೊಬ್ಬನು ; ಇವರಿಬ್ಬರಿಗೆ ಹೊರ ತು ಬೇರೊಬ್ಬರಿಗೂ ಇಲ್ಲವು ಮಹಾವೇಗವುಳ್ಳ ಗರುಡನನ್ನೂ, ವಾಯುವ ನ್ಯೂ ಬಿಟ್ಟರ ಆಕಾಶದಲ್ಲಿ ಹಾರುವಾಗ ನನ್ನನ್ನು ಹಿಂಬಾಲಿಸತಕ್ಕ ಶಕ್ತಿಯುಳ್ಳ ಭೂತವು ಈ ಪ್ರಪಂಚದಲ್ಲಿ ಬೇರೊಂದೂ ಇಲ್ಲವು ಎವೆಮುಚ್ಚುವುದ ರೊಳಗಾಗಿಯೇ ನಾನು ನಿರಾಧಾರವಾದ ಈ ಆಕಾಶದಲ್ಲಿ ಮೇಘದಿಂದ ಮಿಂಚು ಬರುವಂತೆ, ಹಾರಿಬರುವುದನ್ನು ನೋಡಿರಿ ' ಸೂತ್ವದಲ್ಲಿ ತ್ರಿವಿಕ್ರ ಮಾವತಾರವನ್ನೇ ತಿದ ಮಹಾವಿಷ್ಣುವಿನ ರೂಪದಂತೆಯೇ, ಈಗ ಈ ಸಮು ಪ್ರಲಂಫನಕಾಲದಲ್ಲಿ ನನ್ನ ರೂಪವು ಕಾಣುವುದನ್ನು ನೋಡಿರಿ' ಎಲೈ ವಾ ನರರ' ಇನ್ನು ನೀವು ಸಂತೋಷದಿಂದಿರಬಹುದು, ನಾನು ತಪ್ಪದೆ ಸೀತೆ ಯನ್ನು ನೋಡಿ ಬರುವೆನು ನನ್ನ ಬುದ್ಧಿಯ ನನಗೆ ಆ ಕಾಠ್ಯಸಿದ್ಧಿಯನ್ನು ಸೂ ಚಿಸುತ್ತಿರುವುದು ನನ್ನ ಮನಸ್ಸಿಗೆ ದೃಢವಾದ ನಂಬಿಕೆಯಿರುವುದು ನನ್ನ ದೇಹದಲ್ಲಿ ನಡೆಯತಕ್ಕ ಶುಭನಿಮಿತ್ತಗಳೂ ಮುಂದಿನ ಕಾರಸಿದ್ದಿಯನ್ನು ವ್ಯಕ್ತವಾಗಿ ಸೂಚಿಸುತ್ತಿರುವುವು ನಾನು ಸೀತೆಯನ್ನು ನೋಡಿಯೇ ಬರು ವೆನು ನೀವು ಚಿಂತಿಸಬೇಕಾದುದಿಲ್ಲ ಎಲೈ ಕಪಿವೀರರೆ' ನೀವು ನೂರುಯೋ ಜನಗಳನ್ನು ಹೇಳಿದಿರಿಲ್ಲವೆ? ಹತ್ತು ಸಹಸ್ರಯೋಜನಗಳನ್ನಾದರೂ ನಾನು ದಾಟಬಲ್ಲೆನೆಂದು ಈಗ ನನ್ನ ಮನಸ್ಸಿಗೆ ತೋರಿರುವುದು ನಾನು ವೇ ಗದಲ್ಲಿ ಗರುತ್ಯಂತನಿಗೂ, ನನ್ನ ತಂದೆಯಾದ ವಾಯುದೇವನಿಗೂ ಸಾಟಿ ಯೆಂದು ಮೊದಲೇ ಹೇಳಿರುವೆನಲ್ಲವೆ? ವಜ್ರಹಸ್ಯನಾದ ಇಂದ್ರನನ್ನಾದ ರೂ, ಸ್ವಯಂಭುವಾದ ಬ್ರಹ್ಮನನ್ನಾ ದರೂ ನಾನು ನನ್ನ ಪರಾಕ್ರಮದಿಂ ದ ಜಯಿಸಿ, ಅವರ ಕೈಯಿಂದ ಅಮೃತವನ್ನು ಕಿತ್ತು ತರಬಲ್ಲೆನು.ಇನ್ನು ಹೆ ಚ್ಚು ಮಾತುಗಳಿಂದೇನು? ಈಗ ರಾವಣನಿಗೂ, ಸೀತೆಗೂ ವಾಸಸ್ಥಾನವಾದ ಆ ಲಂಕೆಯನ್ನೇ ಇಲ್ಲಿಗೆ ತುತರಬೇಕೆಂಬ ಬುದ್ಧಿಯು ನನಗೆ ಹುಟ್ಟಿರುವುದು” ಎಂದನು.ಹೀಗೆ ಎಣೆಯಿಲ್ಲದ ತೇಜಸ್ಸುಳ್ಳವನಾಗಿ ಗರ್ಜಿಸುತ್ತಿರುವ ವಾನರ 105
ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೬
ಗೋಚರ