ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬೭ ಸರ್ಗ ೬೭.] ಕಿಷಿಂಧಾಕಾಂಡವು ವುಳ್ಳವನಾಗಿಯೂ, ಶತ್ರುನಿಗ್ರಾಹಕನಾಗಿಯೂ ಇರುವ ಆಂಜನೇಯನು ಆಗಲೇ ಆ ಮಹೇಂದ್ರಪಕ್ವತದ ಶಿಖರಕ್ಕೇರಿಹೋದನು ಆ ಪಕ್ವತವಾ ದರೋ ವಿವಿಧವೃಕ್ಷಗಳಿಂದ ನಿಬಿಡವಾಗಿರುವುದು ಅಲ್ಲಲ್ಲಿ ಹುಲ್ಲೆಗಳು ಹ ಸುರುಹುಲ್ಲಿನ ಮೈದಾನಗಳಲ್ಲಿ ವಿನೋದದಿಂದ ವಿಹರಿಸುತ್ತಿರುವುವು ಬಳ್ಳಿ ಗಳೂ ಹೂಗಳೂ ತುಂಬಿ ಬೆಳೆದಿರುವುವು ಹುಲಿ ಸಿಂಹ ಮೊದಲಾ ಹಕ್ಕೂರಮೃಗಗಳು ಸುತ್ತಲೂ ತಿರುಗುತ್ತಿರುವುವು ಆಲ್ಲಲ್ಲಿ ಮದನಾನೆ ಗಳು ಸಂಚರಿಸುತ್ತಿರುವುವು ಮದವೇರಿದ ವನಪಕ್ಷಿಗಳು ಸುತ್ತಲೂ ಧ್ವನಿ ಮಾಡುತ್ತಿರುವುವು ಅದರ ನಾಲ್ಕು ಕಡೆಗಳಿಂದಲೂ ಗಿರಿನರೀಪ್ರವಾಹಗ ಳು ಸುರಿಯುತ್ತಿರುವುವು, ಸುತ್ತಲೂ ದೊಡ್ಡ ದೊಡ್ಡ ಶಿಖರಗಳು ಕಾ ಣುತ್ತಿರುವುವು ಹೀಗೆ ದೃಢವಾಗಿಯೂ ದುರ್ಗಮವಾಗಿಯೂ ಇರುವ ಆ ಮಹೇಂದ್ರಷ್ಟತವನ್ನು , ಮಹೇಂದ್ರಸಮಾನವಾದ ವೀರವುಳ್ಳ ಆ ವಾನರಶ್ರೇಷ್ಠನು ಲೀಲಾಮಾತ್ರದಿಂದೇರಿ ಹೋದನು ಮಹಾದೇಹವುಳ್ಳ ಈ ಹನುಮಂತನ ಕಾಲಿನ ತುಳಿತದಿಂದ ಅಷ್ಟು ದೊಡ್ಡ ಪಕ್ವತವೊಕೂಡ, ಸಿಂ ಹದ ಕಾಲಿನಿಂದಪ್ಪಳಿಸಲ್ಪಟ್ಟ, ದೊಡ್ಡ ಮದದಾನೆಯಂತೆ ಸಡಿಲಿಹೋಯಿ ತು ಹನುಮಂತನ ಪಾದಮುಟ್ಟನದಿಂದ ಮಹಾಶಿಲೆಗಳೆವೂ ಸಡಿಲಿಬಿದ್ದುವು ಹನುಮಂತನ ಕಾಲೊತ್ತಿಗೆ ಆಪರತದೊಳಗಿನ ಪ್ರವಜಲವು ಮೇಲೆ ಜಿನುಗಿ ಅನೇಕಗಿರಿನದಿಗಳಾಗಿ ಹೊರಡಲಾರಂಭಿಸಿದುವು ಅಲ್ಲಿ ಜಿಂಕೆ, ಆನೆ ಮುಂ ತಾದ ಮೃಗಗಳೆಲ್ಲವೂ ಭಯದಿಂದ ಚದರಿ ಪಲಾಯನಮಾಡುತಿದ್ದುವು ಆ ಪಕ್ವತದಮೇಲಿನ ದೊಡ್ಡ ಮರಗಳೆಲ್ಲವೂ ಕಂಪಿಸುತಿದ್ದುವು ಅಲ್ಲಿ ಮಧು ಪಾನದಿಂದ ಕೊಬ್ಬಿ ಬೆಳೆದಿದ್ದ ನಾಗದಂಪತಿಗಳೂ, ಗಂಧರೂಮಿಥುನಗಳೂ ವಿದ್ಯಾಧರಸಮೂಹಗಳೂ, ಅಕ್ಷಣವೇ ಮೇಲೆ ಹಾರುತಿದ್ದುವು ಅಲ್ಲಿನ ಸ ಮಸ್ತ ಪಕ್ಷಿಗಳೂ ಬೆಟ್ಟದ ತಪ್ಪಲುಗಳನ್ನು ಬಿಟ್ಟು ಚದರಿದುವು ಅಲ್ಲಿನಮಹಾ ಸರ್ಪಗಳು ಭಯದಿಂದ ಬಿಲದೊಳಗೆ ಹುದುಗಿಕೊಂಡುವು ಆ ಪಕ್ವತಶಿಖ ರಗಳಲ್ಲಿರುವ ದೊಡ್ಡ ಬಂಡೆಗಳೆಲ್ಲವೂ ಸಡಿಲಿಬಿದ್ದುವು ಆಂಜನೇಯನ ಕಾಲಿ ನ ತುಳಿತಕ್ಕೆ ಆ ಮಹಾಪರೈತವೇ ಸಂಪೂರ್ಣವಾಗಿ ಸಡಿಲಿಹೋಯಿತು ಅಲ್ಲಲ್ಲಿ ಬಿಲಗಳಿಂದ ಹೊರಗೆ ತಲೆಯಿಟ್ಟಿದ್ದ ಮಹಾಸರ್ಪಗಳು, ಹಾಗೆಯೇ MM