ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ೧.] ಕಿಂಧಾಕಾಂಡವು. ೧೩೪೧ ಉರಿಯುವಂತೆ ಕಾಣುವುವು ನೋಡು' ಇದೋ ಈ ಪಂಪಾತೀರದಲ್ಲಿ ಹುಟ್ಟಿ ಒಂದಕ್ಕೊಂದಕ್ಕೆ ಹೆಣೆದಂತೆ ಒತ್ತಾಗಿ ಬೆಳೆದು, ನಾಲ್ಕು ಕಡೆಗಳೆಗೂ ಮಕ ರಂದದ ಸುವಾಸನೆಯನ್ನು ಹೊರಡಿಸುತ್ತಿರುವ ಹೂಗಿಡಗಳನ್ನು ನೋ ಡು' ಮಾಲತಿ, ಮಲ್ಲಿಗೆ, ಕಣಗಿಲೆ, ತಾಳೆ , ವಾಸಂತಿಕೆ, ನಿರ್ಗುಂಡಿ, ಮೊಲೆ, ಅದಿರುತ್ತೆ, ನಾಗಕೇಸರಿ, ಕಡವು, ಖರ್ಜೂರ, ಪದ್ಮ ಪರ್ಣಿ ಮುಂತಾದ ಪುಷ್ಪಲತೆಗಳನ್ನೂ, ಮತ್ತು ಸಿಕ್ಕದ ಕೇಸರಗಳಂತೆ ಹೊಂಬಣ್ಣವಾಗಿ ಕಾಣುತ್ತಿರವ ಈ ಲೋಧಪಷ್ಟಗಳನ್ನೂ, ಅಂಕೋಲೆ, ಗೋರಂಟೆಪಾ. ರಿಭದ್ರಕ, ಮಾವು, ಪಾದರಿ, ಕೋವಿದಾರ, ಮುಂತಾದ ಹೂಗಿಡಗಳನ್ನೂ ನೋಡು, ಸುಗಂಧಪೂರ್ಣಗಳಾದ ಮಾಧವೀಲತೆಗಳೂ, ಮೋಲ್ಲೆಯಪೊದ ರುಗಳೂ, ನಕಮಾಲಗಳೂ, ಮಧುವೃಕ್ಷಗಳೂ, ವಕುಳ, ಸಂಪಗೆ, ತಿಲಕ ನಾಗಕೇಸರಿ, ಕಡವು, ಪ್ರಮಿತಗಳಾದ ಖರ್ಜರಗಳು, ಪದ್ಮ ಪರ್ಣಿ,ನೀಲಾ ಶೋಕಗಳು, ಕೋವಿದಾರ, ಅರ್ಜುನ ಮೊದಲಾದ ಬಗೆಬಗೆಯ ಗಿಡ ಗಳೂ ಈ ಬೆಟ್ಟದತಪ್ಪಲುಗಳಲ್ಲಿ ಶೋಭಿಸುತ್ತಿರುವುವು ನೋಡು : ಕೇದಗೆ, ಉದ್ದಾಲಕ,ಬಾಗೆ, ಶಿಂಶುಪಾವೃಕ್ಷಗಳು, ಆಲ, ಬೂರಗ, ಅರಳಿ, ಮುತ್ತುಗ, ಕೆಂಪುಗೋರಂಟಿ, ಕಿನಿಶ, ನಕಮಾಲ,ಚಂದನ, ಸ್ಪಂದನ, ಮೊದಲಾದ ಈ ವೃಕ್ಷವಿಶೇಷಗಳೆಲ್ಲವೂ ಪುಷ್ಪಭರಿತಗಳಾಗಿ, ಪಷಿತಗಳಾದ ಬೇರೆಬೇರೆ ಹೂ ಬಳ್ಳಿಗಳಿಂದ ಪರಿವೇಷ್ಟಿತಗಳಾಗಿ ಎಷ್ಟೇ ಸೊಗಸನ್ನು ಬೀರುತ್ತಿರುವುವು ಎಲೆ ವತ್ಪನೆ ! ಪಂಪಾತೀರದಲ್ಲಿ ತಂಗಾಳಿಯಿಂದಲುಗಿಸಲ್ಪಟ್ಟು, ನೇತ್ರಾ ನಂದಕರಗಳಾದ ಈ ಬಗೆಒಗೆಯ ವೃಕ್ಷಗಳನ್ನು , ಸಮೀಪದಲ್ಲಿರುವ ಈ ಬ ಳ್ಳಿಗಳು, ಕಾಮೋದ್ರೇಕದಿಂದ ಮತ್ತರಾದ ಉತ್ತಮಸ್ತಿಯರು ತಮ್ಮ ಪ್ರಿ ಯರನ್ನ ಪ್ಪಿಕೊಳ್ಳುವಂತೆ ಎಡೆಬಿಡದೆ ಸುತ್ತಿಕೊಂಡು ಹಬ್ಬಿ ಬೆಳೆದಿರುವುದನ್ನು ನೋಡು' ಇದೋ ಈ ತಂಗಾಳಿಯು, ಗಿಡದಿಂದ ಗಿಡಕ್ಕೂ, ಬೆಟ್ಟದಿಂದ ಬೆಟ್ಟಕ್ಕೂ, ವನದಿಂದ ಎನಕ್ಕೂ ಪ್ರವೇಶಿಸುತ್ತ, ಬಗೆಬಗೆಯ ಮದ್ಯ ರಸವನ್ನು ಕುಡಿದು ಮತ್ತೇರಿರುವ ಪುರುಷನಂತೆ ಮಂದಗತಿಯಿಂದ ಬೀ

  • ಇದುವರೆಗಿನ ಗ್ರಂಥಗಳಿಂದ ವಿಷಯಾಂತರಪ್ರವಣರಾದ ಪ್ರಾಕೃತರ ರೀತಿ ಯು ಸೂಚಿತವೆಂದು ಗ್ರಾಹ್ಯವು.