ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪೨ ಶ್ರೀಮದ್ರಾಮಾಯಣವು [ಸರ್ಗ ೧ ಸುತ್ತಿರುವುದನ್ನು ನೋಡು' ಇಲ್ಲಿ ಕೆಲವುಗಿಡಗಳು ಯಥೇಚ್ಛವಾದ ಪುಷ್ಪ ಗಳಿಂದ ತುಂಬಿ, ಸುತ್ತಲೂ ಮಕರಂದಗಂಧವನ್ನು ಹರಡುತ್ತಿರುವುವು ಮತ್ತೆ ಕೆಲವುಗಿಡಗಳಲ್ಲಿ ಅಷ್ಟಾಗಿ ಹೂಗಳಿಲ್ಲದೆ ಅಲ್ಲಲ್ಲಿ ಮೊಗ್ಗುಗಳುಮಾತ್ರ ವಿರಳವಾಗಿರುವುದರಿಂದ, ಹೆಚ್ಚಾಗಿ ಹಸುರೆಲೆಗಳ ಕಾಣುತ್ತಿರುವುವು ಹೊಸಹೊಸ ಹೂಗಳನ್ನು ಕುಡಿಯುವುದರಲ್ಲಿ ಅತ್ಯಾತುರದಿಂದಮ್ಮತಿಳಿಯ ರುವ ಈ ಭಮರಪಚ್ಚಯು, ಈ ಗಿಡಗಳ ಆಂದವನ್ನು ನೋಡಿ ಪರವ ಶವಾಗಿ ಯಾವುದೊಂದು ಗಿಡವನ್ನೂ ಬಿಟ್ಟು ಹೋಗಲಾರದೆ, ಒಂದೊಂ ದು ಹೂವಿಗೂ ಪ್ರವೇಶಿಸಿ, ಇದೊ ! ಇದು ರಸವತ್ತಾದುದು ' ಇದು ರುಚಿಯುಳ್ಳುದು' ಇದು ಚೆನ್ನಾಗಿ ಅರಳಿರುವುದು” ಎಂದು ಸುತ್ತಿ ಸುತ್ತಿ ಪ್ರವೇಶಿಸುತ್ತಿರುವುದು ನೋಡು' ಮಕರಂದದಾಸೆಯಿಂದ ಈ ಭ್ರಮರ ಗಳು ಒಂದೊಂದು ತೀರವೃಕ್ಷಗಳಲ್ಲಿಯೂ ಮಗ್ಗಿ, ಅಲ್ಲಲ್ಲಿ ಕ್ಷಣಕಾಲದವ ರೆಗೆ ಆಡಗಿದ್ದು, ಪುನಃ ಮೇಲೆಹಾರಿ, ಮತ್ತೊಂದುಕಡೆಗೆ ಹೋಗುತ್ತಿರು ವುವು ಇದೋ ಇಲ್ಲಿನ ನೆಲದಲ್ಲಿ ಎಡೆಬಿಡದೆ ಮರದಿಂದುರಿಗಿರುವ ಹೂಗಳು, ಸುತ್ತಲೂ ಪ್ರಸರಣವನ್ನು ಹಾಸಿಟ್ಟಂತೆ ಎಷ್ಟ ಸುಖಕರವಾಗಿರು ವುದು ನೋಡು ಇದೋ ಈ ಬೆಟ್ಟದ ತಪ್ಪಲುಗಳಲ್ಲಿ ಬಂಡೆಗಳಮೇಲೆ ಉ ದಿರಿ ಬಿದ್ದಿರುವ ಬಗಬಗೆಯ ಬಣ್ಣಗಳುಳ್ಳ ಹೂಗಳು, ಅಲ್ಲಲ್ಲಿ ಹಳದಿ ಮತ್ತು ಕೆಂಪುಬಣ್ಣಗಳುಳ್ಳ ಚಿತ್ರಾಸ್ತರಣಗಳನ್ನು ಹಾಸಿಟ್ಟಂತೆ ಎಷ್ಟು ಮನೋಹ ವಾಗಿರುವುವು ನೋಡು' ವತ್ರನೆ' ವಸಂತಕಾಲದಲ್ಲಿ ಈ ವೃಕ್ಷಗಳಿಗಿರುವ ಪ ಹೃಸಮೃದ್ಧಿಯನ್ನು ನೋಡಿದೆಯಾ? ಈ ಋತುವಿನಲ್ಲಿ ಗಿಡಗಳು ಪರಸ್ಪರಸ್ಸ ರ್ಧೆಯಿಂದ ತಮ್ಮ ತಮ್ಮ ಸಮೃದ್ಧಿಯನ್ನು ತೋರಿಸುವಂತೆ, ಒಂದಕ್ಕಿಂತ ಲೂ ಮತ್ತೊಂದು ಹೆಚ್ಚಾಗಿ ಪುಷ್ಪಗಳನ್ನು ಬಿಡುತ್ತಿರುವುವಲ್ಲದೆ, ಭ್ರಮರ ಧ್ವನಿಗಳೆಂಬ ವ್ಯಾಜದಿಂದ ಒಂದನ್ನೊಂದು ಕರೆದು ಹೀಗಳೆಯುವಂತೆಯೂ ತೋರುವುವು ನೋಡು ' ಒಂದೊಂದು ಶಾಖೆಯೂ ಪುಷಸರಗಳಿಂದ ಲಂಕೃತವಾಗಿರುವುದನ್ನು ನೋಡಿದೆಯಾ ? ಇದೋ' ಇತ್ತಲಾಗಿ ಕಾರಂ ಡವಪಕ್ಷಿಯು ನೀರಿಗಿಳಿದು ತನ್ನ ಪ್ರಿಯೆಯೊಡನೆ ವಿಹರಿಸುತ್ತ,ನನಗೆ ಕಾಮೋ