ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩ ಸರ್ಗ ೧] ಕಿಷಿಂಧಾಕಂಡವು. ಪ್ರೇಕವನ್ನು ಹೆಚ್ಚಿಸುತ್ತಿರುವುದು ವತ್ರನೆ!*ನಾವು ಹಿಂದೆ ನೋಡಿಬಂದ ಮಂದಾಕಿನಿಗೂ ಈ ಸರಸ್ಸಿನಂತೆಯೇ ಅತಿಮನೋಹರವಾದ ರೂಪವುಂ ಟಲ್ಲವೆ?ಇದಲ್ಲದೆ ಅದರ ಗುಣಗಳು ಲೋಕವಿಖ್ಯಾತಗಳಾಗಿ ಹೆಸರುಗೊಂಡಿ ರುವುದೂ ಯುಕ್ತವಾಗಿಯೇ ಇರುವುದು ಅಕ್ಷಣಾ' ಹೋದುದು ಹೋ ಗಲಿ! ಈಗಲಾದರೂ ಆಸೀತೆಯು ನಮ್ಮ ಕಣ್ಣಿಗೆ ಬಿದ್ದು, ಅವಳೊಡನೆ ಸೇರಿ ನಾವು ಇಲ್ಲಿ ವಾಸಮಾಡುವುದಾಗಿದ್ದರೂ,ಇದರಮೇಲೆ ನನಗೆ ಇಂದ್ರ ಪದವಿ ಯು ಬಂದರೂ ಅದರಲ್ಲಿ ಆಸೆ ಹುಟ್ಟದು ಇನ್ನು ಆ ಅಯೋಧ್ಯೆಯಿಂ ದೇನು ? ಎಲೆ ವತ್ರನೆ | ಮುಖ್ಯವಾಗಿ ರಮಣೀಯಗಳಾದ ಈ ಶಾದ ಲಪ್ರದೇಶಗಳಲ್ಲಿ ಆ ಸೀತೆಯೊಡನೆ ನಾನು ವಿಹರಿಸುತ್ತಿರುವ ಪಕ್ಷದಲ್ಲಿ ನನಗೆ ಬೇರೆ ಚಿಂತೆಯಲ್ಲಿರುವುದು ? ಬೇರೆ ಇಂಪಾದಿಪದವಿಗಳಲ್ಲಿಯೂ ನನಗೆ ಆಸೆಹುಟ್ಟದು ಬಗೆಬಗೆಯ ಹೂಗಳಿಂದಲೂ, ಮನೋಹರ ವಾದ ಎಲೆಗಳಿಂದಲೂ ಕೂಡಿದ ಈ ವೃಕ್ಷಗಳು ಸೀತಾಪಿಯಕ್ಕನಾದ ನನ ಗೆ ಹುಚ್ಚು ಹಿಡಿಸುವಂತಿರುವುವು ವತ್ಸನೆ' ಶೀತಲವಾದ ನೀರಿಂದ ತುಂಬಿ ಕಮಲಗಳಿಂದ ನಿಬಿಡವಾದ ಈ ಪಂಪಾಸರೋವರವನ್ನು ನೋಡು ! ಇದ ರಲ್ಲಿ ಚಕ್ರವಾಕಗಳೂ, ಕಾರಂಡವಗಳೂ, ನೀರುಕೋಳಿಗಳೂ, ಕ್ಷೌಂಚರ ಭೂ ಎಷ್ಟು ಹೇರಳವಾಗಿರುವುವು ನೋಡಿದೆಯಾ? ಇದರ ತೀರಪ್ರದೇಶಗಳಲ್ಲಿ ಸುತ್ತಲೂ ಅನೇಕಾನೇಕವಾಗಿ,ಹಂದಿ, ಹುಲ್ಲಿ, ಮುಂತಾದ ಮೃಗಜಾತಿಗಳು ಸಂತೋಷದಿಂದ ಸಂಚರಿಸುತ್ತಿರುವುವು ಇದರಲ್ಲಿ ಅನೇಕಪಕ್ಷಿಗಳು ಕಿವಿಗಿಂ ಪಾಗಿ ಕೂಗುತ್ತಿರುವುದರಿಂದ, ಇದಕ್ಕೆ ಮೇಲೆಮೇಲೆ ಶೋಭಾತಿಶಯವು ಹೆ ಚು ತ್ತಿರುವುದು ವತ್ಸನೆ | ಹೀಗೆ ಸಂತೋಷದಿಂದ ಕೂಗಿಡುತ್ತಿರುವ ಈ ಬಗೆಬಗೆಯ ಪಕ್ಷಿಗಳಲ್ಲವೂ ನನ್ನ ಮನಸ್ಸಿನ ಕಾಮವನ್ನು ಹೆಚ್ಚಿಸುತ್ತಿರುವುವ ಲ್ಲಾ 'ಇವುಗಳನ್ನು ನೋಡಿದ ಹಾಗೆಲ್ಲಾ ನನ್ನ ಮನಸ್ಸಿಗೆ, ಶ್ಯಾಮಾಂಗಿಯಾ ಗಿಯೂ, ಚಂದ್ರಮುಖಿಯಾಗಿಯೂ, ಕಮಲದಳದಂತೆ ಕಣ್ಣುಳ್ಳವಳಾಗಿ ಯೂ ಇರುವ ಆ ನನ್ನ ಪ್ರಾಣಪ್ರಿಯಯ ಸ್ಮರಣೆಯುಂಟಾಗುತ್ತಿರುವುದು.

  • ಇಲ್ಲಿ ಈ ಪಂಪಾಸರೋವರದಂತೆ ರೂಪವು ಮಂದಾಕಿನಿಗೂ ಪ್ರಾಪ್ತವಾ ದಪಕ್ಷದಲ್ಲಿ, ಆಗ ಅದೂ ಮನೋಹರವಾದ ಗುಣವುಳುದೆಂದು ಲೋಕದಲ್ಲಿ ಹೊಂದಿ ರುವ ಖ್ಯಾತಿಯೆಲ್ಲವೂ ಯುಕ್ತವಾಗುತ್ತಿತ್ತೆಂದು ಮಹೇಶ್ವರತೀರ್ಥ ವ್ಯಾಖ್ಯಾನವು.