ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪೪೪ ಶ್ರೀಮದ್ರಾಮಾಯಣವು [ಸರ್ಗ ೧, ವತ್ರನೆ' ಚಿತ್ರವಿಚಿತ್ರಗಳಾದ ಈ ಬೆಟ್ಟದ ತಪ್ಪಲುಗಳಲ್ಲಿ,ಜಿಂಕೆಗಳು ತಮ್ಮ ಹೆಣ್ಣು ಜಿಂಕೆಗಳೊಡಗೂಡಿ ವಿಹರಿಸುತ್ತಿರುವುದನ್ನು ನೋಡು' ಇವುಗಳ ಕಣ್ಣಿ ನಂತೆಯೇ ಕಣ್ಣುಳ್ಳ ಆ ಸೀತೆಯಿಂದ ನಿಯುಕ್ತನಾಗಿ ಇಲ್ಲಿ ಸುತ್ತುತ್ತಿರುವ ನನ್ನ ಮನಸ್ಸಿಗೆ ಇವೆಲ್ಲವೂ ಮೇಲೆಮೇಲೆ ಸಂಕಟವನ್ನು ಹೆಚ್ಚಿಸುತ್ತಿರುವು ವು ಮೃಗಗಳಿಂದಲೂ, ಪಕ್ಷಿಗಳಿಂದಲೂ ನಿಬಿಡವಾಗಿ, ಅತಿರಮ್ಯವಾದ ಈ ಸಾನುಪ್ರದೇಶದಲ್ಲಿರುವಾಗಲೇ, ನಾನು ಆ ನನ್ನ ಪ್ರಿಯೆಯನ್ನು ನೋಡುವ ಪಕ್ಷದಲ್ಲಿ ಆಗಲೇ ನನಗೆ ಕ್ಷೇಮವುಂಟೇ ಹೊರತು ಬೇರೆಯಲ್ಲ ಲಕ್ಷಣಾ ! ಆ ನನ್ನ ಪ್ರಿಯಪತ್ನಿ ಯು ಈಗಲೇ ಇಲ್ಲಿಗೆ ಬಂದು, ಈ ಪಂಪಾತೀರದಲ್ಲಿ ಬೀ ಸುತ್ತಿರುವ ಸುಖಕರವಾದ ಈ ತಂಗಾಳೆಯನ್ನು ಸೇವಿಸುವಹಾಗಾದರೆ, ಆಗ ನಾನು ಸುಖವಾಗಿ ಬದುಕಬಲ್ಲೆನು ಎಲೆ ವತ್ರನೆ ! ಪದ್ಮ ಸೌಗಂಧಿಕಾರಿ ಇಷ್ಟಗಳ ವಾಸನೆಯೊಡಗೂಡಿ, ದುಃಖವನ್ನು ನೀಗಿಸುತ್ತ, ಮಂಗಳಕರವಾ ಗಿ ಬೀಸುತ್ತಿರುವ ಈ ಪಂಪೋಪನನದ ತಂಗಾಳಿಯನ್ನು ತಮ್ಮ ತಮ್ಮ ಪತ್ನಿ ಸಮೇತರಾಗಿ ಸಂತೋಷದಿಂದನುಭವಿಸುವವರೇ ಲೋಕದಲ್ಲಿ ಪರಮಭಾಗ್ಯ ಶಾಲಿಗಳಲ್ಲವೆ? ವತ್ಸನೆ' ಇವೆಲ್ಲವೂ ಹಾಗಿರಲಿ ' ಶ್ಯಾಮಾಂಗಿಯಾಗಿಯೂ, ಕ ಮಲದಳದಂತೆ ಕಣ್ಣುಳ್ಳವಳಾಗಿಯೂ ಇರುವ ನನ್ನ ಪ್ರಾಣಪ್ರಿಯೆಯಾದ ಆ ಜನಕಪುತ್ರಿಯು, ತನ್ನನ್ನಗಲಿ ಹೇಗೆ ಬದುಕಿರುವಳೊ ಕಾಣೆನಲ್ಲಾ' ಪ್ರಾ ಇತ್ಯಾಗಕ್ಕೂ ಸ್ವಾತಂತ್ರ್ಯವಿಲ್ಲದ ಆ ಅಬಲೆಯು ಹೇಗೆ ಜೀವಿಸುವಳೊ | ವತ್ರನೆ' ನಾವು ಹಿಂತಿರುಗಿ ಅಯೋಧ್ಯೆಗೆ ಹೋದಮೇಲೆ, ಧರಜ್ಞನಾಗಿ ಯೂ, ಸತ್ಯವಾದಿಯಾಗಿಯೂ ಇರುವ ಆ ಸೀತೆಯ ತಂದೆಯಾದ ಜನಕನು ಬಂದು, ಅನೇಕಜನಗಳಮುಂದೆ ಸೀತೆಯ ಕ್ಷೇಮಲಾಭವನ್ನು ವಿಚಾರಿಸಿ ದರೆ, ಆಗ ನಾನು ಅವನಿಗೆ ಏನುತ್ತರವನ್ನು ಕೊಡಲಿ? ನಾನಾದರೋ ಪರ ಮದುರ್ಭಾಗ್ಯನು' ಹೆತ್ತ ತಂದೆಯಿಂದಲೇ ಕಾಡುಪಾಲಾಗಿ ಕಳುಹಿಸಲ್ಪಟ್ಟಿ ರುವೆನು ಈ ದುರವಸ್ಥೆಯಲ್ಲಿಯೂ ಆ ನನ್ನ ಪ್ರಾಣಪ್ರಿಯೆಯಾದ ಸೀತೆ ಯು ನನ್ನನ್ನು ಬಿಟ್ಟಿರಲಾರದೆ, ಪಾತಿವ್ರತ್ಯವನ್ನೇ ಅವಲಂಬಿಸಿ, ನನ್ನನ್ನು ಹಿಂಬಾಲಿಸಿ ಬಂದಳಲ್ಲಾ' ಆ ಪ್ರಿಯಪತ್ನಿ ಯು ಈಗ ಎಲ್ಲಿರುವಳೊ ಕಾಣೆನ ಲ್ಲಾ 'ವತ್ರನೆ' ನಾನು ರಾಜ್ಯಭ್ರಷ್ಟನಾಗಿ ದೀನದಶೆಯನ್ನು ಹೊಂದಿ, ದುಃಖಿ