ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಗ ೧ | ಕಿಂಧಾಕಾಂಡವು ೧೩೪೫ ನಾಗಿ ಬರುತ್ತಿರುವಾಗಲೂ, ನನ್ನನ್ನು ಬಿಡದೆ ಹಿಂಬಾಲಿಸಿ ಬಂದ ಆ ಸೀತೆ ಯನ್ನೂ ಅಗಲಿದಮೇಲೆ, ಆ ದುಃಖದಲ್ಲಿ ನಾನು ಹೇಗೆ ಪ್ರಾಣವನ್ನು ಧರಿಸಿ ಕೊಂಡಿರಲಿ? ಲೋಕಮನೋಹರವಾಗಿ, ತುಂಬಿದೆವೆಗಳಿಂದ ಕೂಡಿದ ಕಣ್ಣು ಗಳುಳ್ಳುದಾಗಿ, ಪದ್ಮಗಂಧವುಳ್ಳುದಾಗಿ, ನಿರ್ದೋಷವೆನಿಸಿಕೊಂಡಿರುವ ಆ ಸೀತೆಯ ಮುದ್ದು ಮೊಗವನ್ನು ನೋಡದೆ, ನನ್ನ ಮನಸ್ಸು ಸುಕ್ಕಿಹೋದಂ ತೆ ತೋರುತ್ತಿರುವುದು ಈ ಸ್ವಾಭಾವಿಕವಾದ ಮಂದಹಾಸದಿಂದಲೂ, ಆ ಗಾಗ ಸಕಾರಣವಾದ ಮುಗಳ್ಗೆಯಿಂದಲೂ ಕೂಡಿ, ಕಿವಿಗಿಂಪಾಗಿಯೂ, ಹಿತವಾಗಿಯೂ ಇರುವ ಆ ಸೀತೆಯ ಎಣೆಯಿಲ್ಲದ ಮುದ್ದು ಮಾತುಗಳನ್ನು ನಾನು ಪುನಃ ಯಾವಾಗ ಕೇಳುವೆನೋ? ಆಹಾ! ವತ್ರನೆ' ಶ್ಯಾಮಾಂಗಿಯಾ ದ ಆ ನನ್ನ ಪ್ರಾಣಪ್ರಿಯೆಯು, ಕಾಡಿನಲ್ಲಿ ಸಿಕ್ಕಿ ಕಷ್ಟಪಡುತ್ತ, ದುಃಖಭಾಗಿನಿ ಯಾಗಿದ್ದಾಗಲ, ನಾನು ಮನ್ಮಥತಾಪಕ್ಕೊಳಗಾದುದನ್ನು ನೋಡಿದ ಕ್ಷ ಣದಲ್ಲಿ, ತಾನು ಸ್ವಲ್ಪವೂ ದುಃಖವಿಲ್ಲದವಳಂತೆ ಸಂತೋಷವನ್ನೇ ತೋರಿಸು ತ್ಯ, ನನ್ನೊಡನೆ ಉಲ್ಲಾಸಕರಗಳಾದ ಮಾತುಗಳನ್ನಾಡಿ ನನ್ನನ್ನು ಸಂತೋ ಷಪಡಿಸುತಿದ್ದಳಲ್ಲಾ 'ಎಲೈ ರಾಜಕುಮಾರನೆ' ನಾನು ಅಯೋಧ್ಯೆಗೆ ಹೋದ ಮೇಲೆ ಮನಸ್ವಿನಿಯಾದ ನನ್ನ ತಾಯಿ ಕೌಸಲ್ಯಯು ಬಂದು, ನನ್ನನ್ನು ನೋ ಡಿತನ್ನ ಸೊಸೆಯ ಕ್ಷೇಮಲಾಭಗಳನ್ನು ವಿಚಾರಿಸಿ ಆ ಸೊಸೆಯೆ?"ಎಂದು ಕೇಳಿದರೆ ನಾನೇನು ಹೇಳಲಿ?ವತ್ಸ ಲಕ್ಷ್ಮಣಾ'ಆದುದಾಯಿತು'ಇನ್ನು ನೀನಾ ದರೂ ಹೋಗಿ ಭಾತೃವತ್ಸಲನಾದ ಭರತನನ್ನು ನೋಡು' ನಾನಂತೂ ಆ ಜನಕಪುತ್ರಿಯನ್ನಗಲಿ ಬದುಕಿರಲಾರೆನು "ಎಂದನು ಹೀಗೆ ಅನಾಥನಂತೆಗೋ ಆಡುತ್ತಿರುವ ಅಣ್ಣನಾದ ರಾಮನನ್ನು ನೋಡಿ, ಲಕ್ಷ್ಮಣನು, ಯುಕ್ತವಾಕ್ಯ ಗಳಿಂದ ಆತನನ್ನು ಕುರಿತು, ಅಣ್ಣಾ ಇದೇನು' ಸಮಾಧಾನದಿಂದಿರು ಧೈ ಗ್ಯವನ್ನು ತಂದುಕೊಳ್ಳುವನಾಗು' ನಿನಗೆ ಮಂಗಳವಾಗಲಿ' ದುಃಖಿಸಬೇಡ ! ಧಮ್ಮಾತ್ಮನಾದ ನಿನಗೂ ಹೀಗೆ ಬುದ್ದಿಯು ಕಲುಷಿತವಾಗುವುದೆಂದರೇನು?

  • ಇದರಿಂದ ಸಂಸಾರಬಂಧಮುಕ್ತನಾದ ಚೇತನನು “ಏತತ್ಕಾಮಗಾಯನ್ನಾ ಸ್ನೇ?” ಎಂಬಂತೆ ತನ್ನ ಸಾನ್ನಿಧ್ಯದಲ್ಲಿ ಸಾಮಗಾನಮಾಡುತ್ತಿರುವುದನ್ನು ತಾನು ಯಾ ವಾಗ ಕೇಳುವೆನೆಂದು ಭಗವಂತನು ಆತುರಪಡುತ್ತಿರುವುದಾಗಿ ಸೂಚಿತವು

86