ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪೬ ಶ್ರೀಮದ್ರಾಮಾಯಣವು [ಸರ್ಗ ೧ ಇಂತಹ ವಿಯೋಗದುಃಖಗಳೆಲ್ಲವೂ ವಿಶೇಷಮೋಹದಿಂದಲೇ ಪ್ರಾಪ್ತವಾಗು ವುವು ಸ್ನೇಹವು ಹೆಚ್ಚಿದಷ್ಟೂ ವಿಯೋಗಕಾಲದಲ್ಲಿ ದುಃಖವನ್ನು ಹೆಚ್ಚಿಸು ತಿರುವುದು ಈ ತತ್ವವನ್ನು ಚೆನ್ನಾಗಿ ಪಯ್ಯಾಲೆ ಚಿಸಿ, ಪ್ರಿಯಜನದಲ್ಲಿದೆ ಚ್ಚು ಪ್ರೇಮವನ್ನು ಬಿಟ್ಟುಬಿಡು' ಬತ್ತಿ ಯಲ್ಲಿ ಎಷ್ಟೇ ತೇವವಿದ್ದರೂ ಹೆಚ್ಚಾ ದ ಸ್ನೇಹದ (ಎಣ್ಣೆಯ) ಸಂಬಂಧದಿಂದ ಬಲವಾಗಿ ಉರಿಯುವದಲ್ಲವೆ ? ಅಣ್ಣಾ' ಸೀತೆಯನ್ನು ಕದ್ದು ಆ ರಾವಣನು, ಪಾತಾಳದಲ್ಲಿಯ ಅಡ ಗಿದ್ದರೂ, ಅಥವಾ ಅದಕ್ಕಿಂತಲೂ ದುರ್ಗಮವಾದ ಬರ ರಹಸ್ಯ ಸ್ಥಳವನ್ನು ಸೇರಿದ್ದರೂ, ಇನ್ನು ಮೇಲೆ ಬಹುಕಾಲಕ್ಕೆ ಬದುಕಿರಲಾರನು ಆದರ ಪಾಪಿಯಾದ ಆ ರಾಕ್ಷಸನಿರುವ ಸ್ಥಳವಾವುದೆಂದು ತಿಳಿಯುವುದೊಂದೇ ಈ ಗ ನಮಗೆ ಬೇಕಾದುದು ಅವನ ಸುಳಿವು ತಿಳಿದರೆ ಸಾಕು ಆಗ ಅವನು ಸೀತೆ ಯನ್ನಾ ದರೂ ನಮಗೆ ತಂದೊಪ್ಪಿಸಬೇಕು ಇಲ್ಲವೇ ತನ್ನ ಪ್ರಾಣವನ್ನಾ ದರೂ ನಮಗೊಪ್ಪಿಸಬೇಕು' ಅಣ್ಣಾ 'ಇನ್ನು ಹೆಚ್ಚಾಗಿ ಹೇಳಿದುದರಿಂದೇನು? ಆ ರಾವಣನು ಸೀತಯನ್ನೆತ್ತಿಕೊಂಡು ಹೋಗಿ, ಇಂದ್ರನ ತಾಯಿಯಾದ ಆದಿತಿಯ ಗರ್ಭದಲ್ಲಿ ಅವಿತುಕೊಂಡರೂ, ಅಲ್ಲಿಯೂ ನಾನು ಅವನನ್ನು ಬಿಡುವವನಲ್ಲ ಅವನು ಸೀತೆಯನ್ನು ಕೂಡದಪಕ್ಷದಲ್ಲಿ ಅಲ್ಲಿಯೂ ಅವನನ್ನು ಕೂಂದುಬರುವನು ಇದು ನಿಜವು ಆದುದರಿಂದ, ಅಣ್ಣಾ'ದೈತ್ಯವನ್ನವಲಂ ಬಿಸು' ಥೈಲ್ಯವೆಂಬುದೇ ಸಮಸ್ಯಶ್ರೇಯಸ್ಸು ಗಳಿಗೂ ಮೂಲವು ಈ ಹೀನ ಸ್ವಭಾವವನ್ನು ಬಿಟ್ಟುಬಿಡು' ಕೈತಪ್ಪಿ ಹೋದ ಕಾವ್ಯವನ್ನು ಸಾಧಿಸಿಕೊಳ್ಳ ಬೇಕಾದರೆ ತಕ್ಕ ಪ್ರಯತ್ನವನ್ನು ಮಾಡಿದಹೊರತು ಸಾಧ್ಯವಲ್ಲ ಪ್ರಯತ್ನ ವಿಲ್ಲದೆ ಕಾರಸಿಯಿಲ್ಲ' ಉತ್ಸಾಹವಂಬುದೇ ಕಾರೈಸಿದ್ಧಿಗೆ ಪ್ರಬಲಸಾಧನ ವು ಉತ್ಸಾಹಕ್ಕಿಂತಲೂ ಮೇಲಾದ ಬೇರೆ ಬಲವಿಲ್ಲ ಉತ್ಸಾಹವುಳ್ಳವರಿಗೆ ಈ ಲೋಕದಲ್ಲಿ ದುರ್ಲಭವಾದುದೊಂದೂ ಇಲ್ಲ. ಉತ್ಸಾಹವುಳ್ಳ ಪುರು ಷರು ಎಂತಹ ಕಾಠ್ಯಗಳಲ್ಲಿಯೂ ಕ್ಷೇಶವನ್ನು ಹೊಂದರು.ಆದುದರಿಂದ ಈ ಗ ನಾವು ಯಾವವಿಧದಿಂದಲೂ ಉತ್ಸಾಹವನ್ನು ಮಾತ್ರ ಬಿಡದೆ, ಅದನ್ನೇ ದೃಢವಾಗಿ ಹಿಡಿದಿರುವ ಪಕ್ಷದಲ್ಲಿ,ನಮಗೆ ಸೀತೆಯು ಸಿಕ್ಕುವುದರಲ್ಲಿ ಸ್ವಲ್ಪವೂ