ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨] ಕಿಷಿಂಧಾಕಾಂಡವು ೧೩೫೧ ನೀನು ಹೀಗೆ ಭಯಪಡುವೆಯೋ, ಆ ದುಷ್ಟಾತ್ಮನಾದ ನಿನ್ನ ಸಹೋದರನು ಇಲ್ಲಿಗೆ ಹೇಗೆ ಬರುವನು?ಆದುದರಿಂದ ನಿನಗೆ ಈಗ ಸ್ವಲ್ಪವೂ ಭಯಕ್ಕೆ ಕಾ ರಣವಿರುವುದೆಂದು ನನಗೆ ತೋರಲಿಲ್ಲ ನೀನೇ ನಿನ್ನ ಬುದ್ಧಿಚಾತುಗ್ಯದಿಂದ ಚೆ ನ್ಯಾಗಿ ವಿಚಾರಮಾಡಿನೋಡು ಮನಸ್ಸಿನಲ್ಲಿ ಧೈರವಿಲ್ಲದೆ ಹೀಗೆ ಭಯಪ ಡುವೆಯಲ್ಲಾ' ಆಹಾ! ನಿನ್ನ ಕಪಿಸ್ವಭಾವವು ಈಗ ಚೆನ್ನಾಗಿ ಸ್ಪಷ್ಟವಾ ಯಿತು ಸ್ವಬುದ್ದಿಯನ್ನೂ ಜ್ಞಾನವನ್ನೂ ಚೆನ್ನಾಗಿ ಉಪಯೋಗಿಸಿ ಇಂಗಿ ತಗಳಿಂದಲೇ ಇತರರ ಸ್ವಭಾವವನ್ನು ತಿಳಿದು ಸಮಸ್ತ ಕಾಕ್ಯಗಳನ್ನೂ ನಡೆಸಬೇಕಲ್ಲವೆ' ಸ್ಪಬುದ್ಧಿಯನ್ನು ಪಯೋಗಿಸಲಾರದ ರಾಜನು ಯಾವ ಪ್ರ ಜಯನ್ನೂ ಚೆನ್ನಾಗಿ ಪಾಲಿಸಲಾರನು” ಎಂದನು ಹನುಮಂತನು ಹೇಳಿದ ಈ ಶುಭವಾಕ್ಯವೆಲ್ಲವನ್ನೂ ಕೇಳ ಸುಗ್ರೀವನು, ಅದಕ್ಕಿಂತಲೂ ಯುಕ್ತಿ ಯುಕ್ತವಾದ ಮಾತಿನಿಂದ ಅವನನ್ನು ಕುುತು (ಎಲೈ ಮಿತ್ರನೆ' ಇದೇನು? ನೀನು ಅವರ ರೂಪವನ್ನು ಚೆನ್ನಾಗಿ ನೋಡಲಿಲ್ಲವೇನು ಆಜಾನುಬಾಹುಗ ಳಾಗಿ, ವಿಸ್ತಾರವಾದ ಕಣ್ಣುಳ್ಳವರಾಗಿರುವ ಅವರಿಬ್ಬರನ್ನೂ ಸಾಮಾನ್ಯರೆಂ ದೆಣಿಸಬಹುದೆ? ಇದರಮೇಲ ಭಯಂಕರವಾದ ಕತ್ತಿಯನ್ನೂ, ಧನುರ್ಬಾಣ ಗಳನ್ನೂ ಹಿಡಿದಿರುವ ದೇವಕುಮಾರರಂತೆ ಬೆಳಗುತ್ತಿರುವ ಆವೀರರನ್ನು ನೋಡಿದರ ಯಾರಿಗೆ ತಾನೇ ಭಯವುಂಟಾಗದು' ಅವರ ಸ್ವರೂಪವು ವಾಲಿ ಯಂತ ಕಾಣದಿದ್ದರೂ, ಆ ವಾಲಿಯು ಇವರಿಬ್ಬರನ್ನೂ ನಮ್ಮ ಕಡೆಗೆ ಗೂಢ ಚಾರರನ್ನಾಗಿ ಕಳುಹಿಸಿರಬಹುದಲ್ಲವೆ ನನಗೆ ಈಗ ಇದೇ ವಿಷಯವಾದ ಶಂಕ ಹುಟ್ಟಿರುವುದು ಆದರೆ ಇಂತಹ ಮಹಾಪುರುಷರು ವಾಲಿಗೆ ಹೇಗೆ ಲಭಿಸು ವರಂದು ನೀನು ಕೇಳಬಹುದು ರಾಜರಿಗೆ ಬಹಳಮಂದಿ ಮಿತ್ರರುಂಟು ಆದು ದರಿಂದ ಅರಸರ ವಿಷಯದಲ್ಲಿ ಮಾತ್ರ ಎಷ್ಟು ಮಾತ್ರವೂ ನಂಬಿಕೆಯನ್ನಿಡ ಬಾ~ದು ಮನುಷ್ಯನು, ತನ್ನ ಮೇಲೆ ಹಗೆತೀರಿಸಿಕೊಳ್ಳುವುದಕ್ಕಾಗಿ ಗೂಢ ವೃತ್ತಿಯಿಂದ ತಿರುಗುತ್ತಿರುವ ಶತ್ರುಗಳ ರಹಸ್ಯವನ್ನು ಹೇಗಾದರೂ ಪ್ರಯ ತ್ನ ಪಟ್ಟು ಆಗಾಗಕಂಡುಕೊಳ್ಳುತ್ತಿರಬೇಕು ಹಾಗಿಲ್ಲದಿದ್ದರೆ ಅವರುಹೇಗೋ ನಂಬಿಕೆಯನ್ನು ಹುಟ್ಟಿಸಿ, ತಾವುಮಾತ್ರ ಇತರರನ್ನು ನಂಬದೆ, ತಮ್ಮನ್ನು ನಂಬಿದ ಶತ್ರುಗಳು ಎಚ್ಚರತಪ್ಪಿರುವ ಸಂದರವನ್ನು ನೋಡುತ್ತ, ರಂ