ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೬ ಶ್ರೀಮದ್ರಾಮಾಯಣವು [ಸರ್ಗ, ೩. ಯಲ್ಲಿ ಈ ಜಟಾಭಾರಗಳೇನು? ನೀವಿಬ್ಬರೂ ರೂಪಲಾವಣ್ಯಾದಿಗಳಿಂದ ಒ ಬ್ಬರನ್ನೊಬ್ಬರು ಹೋಲುತ್ತ, ದೇವಲೋಕವನ್ನು ಬಿಟ್ಟು ಬಂದ ದೇ ವಕುಮಾರರಂತೆ ತೋರುತ್ತಿರುವಿರಿ'ಚಂದ್ರಸೂಯ್ಯರಿಬ್ಬರೂ ಸೈಚ್ಛೆಯಿಂದ ಒಂದಾಗಿ ಭೂಮಿಗಿಳಿದುಬಂದಂತೆ ಕಾಣುತ್ತಿರುವಿರಿ ನಿಮ್ಮ ವಿಶಾಲವಾದ ಎದೆಯೇ ನೀವು ಮಹಾವೀರರೆಂಬುದನ್ನು ತೋರಿಸುತ್ತಿರುವುದು ಸಿಂಹದಂತೆ ಭುಜದ ಕಟ್ಟುಳ್ಳವರಾಗಿ, ಮುಖಲಕ್ಷಣಗಳಿಂದಲೇ ಮಹೊತ್ಸಾಹವನ್ನು ತುಳುಕಿಸುತ್ತಿರುವ ನಿಮ್ಮನ್ನು ನೋಡಿದರೆ, ಮದದಿಂದುಬ್ಬಿದ ಮಹಾವೃಷಭ ಗಳಂತೆ ತೋರುತ್ತಿರುವುದು ಈ ಅಗುಳಿಗಳಂತೆ ದುಂಡಾಗಿಯೂ, ಉದ್ದವಾಗಿ ಯೂ ಇರುವ ಈ ನಿಮ್ಮ ತೋಳುಗಳು, ಯಾವಾಗಲೂಭೂಷಣಗಳಿಂದಲಂಕ

  • ಇಲ್ಲಿ 'ಆಯತಾಶ್‌ ಸುವೃತ್ತಾಶ್ ಬಾಹವ: ಪರಿಫೆಪಮಾ | ಸರ್ವಭೂ ಷಣ ಭೂಷಾರ್ಹಃ ಕಿಮರ್ಥಂ ನ ವಿಭೂಷಿತಾ,” ಎಂದು ಮೂಲವು ಇಲ್ಲಿ 'ಸರ್ವ ಭೂಷಣಭೂಷಾರ್ಹ” ಎಂಬುದಕ್ಕೆ ಬೇರೆ ವಿಧವಾದ ಕೆಲವು ಅರ್ಧವಿಶೇಷಗಳುಂಟು (ಸರ್ವಭೂಷಣಭೂಷಾರ್ಹಾ8) ಸಮಸ್ತಭೂಷಣಗಳನ್ನೂ ಭೂಷಿಸತಕ್ಕ ಎಂದರೆ ಆಭರಣಸ್ಯಾಭರಣಂ' ಎಂಬಂತೆ, ಆಭರಣಗಳನ್ನೂ ತನ್ನ ಸೌಂದರ್ಯದಿಂದಲಂಕ ರಿಸತಕ್ಕ ಈ ಬಾಹುಗಳು ಕಿಮರ್ಥಂ ನ ವಿಭೂಷಿತಾಃ # ಏಕೆ ಅಲಂಕರಿಸಲ್ಪಡಲಿಲ್ಲ? ಇವುಗಳನ್ನು ಭೂಷಣಗಳಿಂದಲಂಕರಿಸಿ, ಆ ಭೂಷಣಗಳಿಗೆ ನೀವೇಕ ಶೂಭಾತಿಶಯ ವನ್ನು ೦ಟುಮಾಡಲಿಲ್ಲವೆಂದು ಭಾವವು, ಅಥವಾ ದೃಷ್ಟಿದೋಷಪರಿಹಾರಾರ್ಥವಾಗಿ ಈ ಬಾಹುಗಳ ಸೌಂದರ್ಯವನ್ನು ಸ್ವಲ್ಪವಾದರೂ ಮರಸಿಡಬೇಕಾದುದೇ ನ್ಯಾಯ ವ ಹಾಗೆ ಮಾಡದಿರುವುದೇಕೆ ? ಅಥವಾ ಅಲ್ಲಲ್ಲಿ ಆಭರಣಗಳಿಂದ ಮರಸಿಟ್ಟಿರುವಾ ಗಲ ಈ ಬಾಹುಗಳ ಸೌಂದರ್ಯವ್ರು ನಮ್ಮೆಲ್ಲರನ್ನೂ ವಶೀಕರಿಸಿ ಮರುಳುಮಾಡ ಬಲ್ಲುವು ಹಾಗೆ ಸ್ವಲ್ಪವನ್ನೂ ಮರೆಸಿಡದೆ ಬಾಹುಸಾಂದರ್ಯವಲ್ಲವನ್ನೂ ಸಾಕಲ್ಯ ವಾಗಿ ತೋರಿಸಿ ಅದಕ್ಕೆ ಮೇಲೆ ನೀವು ಸಾಧಿಸಬೇಕಾದುದೇನೆಂದು ಭಾವವು ಅಥವಾ ಹೀಗೆ ಭೂಷಣಗಳನ್ನು ತೆಗೆದು ಹಾಕಿರುವುದು ಯಾವ ಶತ್ರುಗಳನ್ನು ನಿರ್ಮೂಲ ಮಾಡುವುದಕ್ಕೆ?” ಎಂದೂ ಭಾವವ

ಇದರಿಂದ ಅಪ್ರತಿಹತಸಂಕಲ್ಪನಾಗಿದ್ರೂ ನಿತ್ಯಸೂರಿಗಳನ್ನು ಬಿಟ್ಟು ಚತು ರ್ವಿಧದಿಂದ ಅವತರಿಸುವುದಕ್ಕೆ ಕಾರಣವೇನೆಂದು ಹೇಳಿದುದಾಗಿ ತತ್ವಾರ್ಥವನ್ನು ಗ್ರ ಹಿಸಬೇಕು ಇಲ್ಲಿ ತೋಳುಗಳಿಗೆ ಬಹುವಚನವನ್ನು ಹೇಳುವುದರಿಂದ ರಾಮನು ಹ ನುಮಂತನಿಗೆ ನಾಲ್ಕು ತೋಳುಗಳಿಂದಲೇ ಪ್ರತ್ಯಕ್ಷನಾದನೆಂದೂ ಕೆಲವರ ಭಾವವು.