ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫೬ ಸರ್ಗ, ೩]. ಕಿಂಧಾಕಾಂಡವು. ರಿಸಲ್ಪಡುವುದಕ್ಕೆ ಯೋಗ್ಯವಾಗಿರುವಾಗಲೂ, ನೀವು ಅವುಗಳನ್ನು ಉಚಿತರೀ ತಿಯಿಂದ ಅಲಂಕರಿಸದಿರುವುದೇಕೆ? ಎಲೈ ವೀರರೆ'ಮುಖ್ಯವಾಗಿ ನೀವಿಬ್ಬರೂ ಸಪ್ತಸಮುದ್ರಗಳಿಂದ ಪರಿವೇಷ್ಟಿತವಾಗಿ, ಅನೇಕ ಮಹಾರಣ್ಯಗಳಿಂದ ಕೂಡಿ, ಮೇರುವಿಂಧ್ಯಾದಿಪರತಗಳಿಂದಲಂಕರಿಸಲ್ಪಟ್ಟ ಈ ಸಮಸ್ತಭೂ ಮಂಡಲವನ್ನೂ ಏಕಾಧಿಪತ್ಯದಿಂದಾಳುವುದಕ್ಕೆ ತಕ್ಕವರೆಂದೇ ನನ್ನ ಭಾವವು. ಆಹಾ' ಗಂಧಮಾಲ್ಯಾದಿಗಳಿಂದಲಂಕರಿಸಲ್ಪಟ್ಟು,ಚಿನ್ನದ ಕಟ್ಟುಳ್ಳ, ಮತ್ತು ಮನೋಹರಗಳಾದ ಈ ನಿಮ್ಮ ಮಹಾಧನುಸ್ಸುಗಳೆರಡೂ ಇಂದ್ರನ ವಜ್ರಾ ಯುಧಗಳಂತೆ ಹೊಳೆಯುತ್ತಿರುವುವು ಮಹಾಪ್ರಮಾಣವುಳ್ಳುದಾಗಿಯೂ, ಅಗಲವಾಗಿಯೂ, ಪುಟಹಾಕಿದ ಚಿನ್ನದ ಹಿಡಿಗಳುಳ್ಳುದಾಗಿಯೂ ಇರುವ ಈ ನಿಮ್ಮ ಖಡ್ಡಗಳೆರಡೂ ಪರೆಯುರ್ಚ್ಛದ ಮಹಾಸರ್ಪಗಳಂತೆ ತೋರುತ್ತಿ ರುವುವು ಎಲೈ ಮಹಾತ್ಮರೆ' ಅವೆಲ್ಲವೂ ಹಾಗಿರಲಿ ' ನಾನು ನಿಮ್ಮನ್ನು ಇಷ್ಟು ವಿನಯದಿಂದ ಮಾತಾಡಿಸುತಿದ್ದರೂ ನೀವೇಕೆ ಪ್ರತ್ಯುತ್ತರವನ್ನು ಕೊಡುವುದಿಲ್ಲ?ನನ್ನ ನಿಜಸ್ಥಿತಿಯನ್ನಾದರೂ ನಿಮಗೆ ತಿಳಿಸಿಬಿಡುವೆನು ಕೇಳಿರಿ! ಥರಾನಾ ಸುಗ್ರೀವನೆಂಬ ವಾನರರಾಜನೊಬ್ಬನುಂಟು ' ಅವನು ನ್ನ ಣ್ಣನಿಂದ ತಿರಸ್ಕೃತನಾಗಿ ಬಂದು, ದುಃಖಿತನಾಗಿ ಈ ಭೂಮಿಯೆಲ್ಲವನ್ನೂ ಸುತ್ತುತ್ತಿರುವನು ಕವಿಶ್ರೇಷ್ಠರಿಗೆಲ್ಲಾ ಒಡೆಯನೆನಿಸಿಕೊಂಡ ಮಹಾತ್ಮ ನಾದ ಆ ಸುಗ್ರೀವನೇ ನನ್ನನ್ನು ನಿಮ್ಮಲ್ಲಿಗೆ ಕಳುಹಿಸಿರುವನು ನಾನು ಅವನ ಕಡೆಯ ವಾನರನು ನನಗೆ ಹನುಮಂತನೆಂದು ಹೆಸರು ಧಾತ್ಮ ನಾದ ಆ ಸುಗ್ರೀವನುನಿಮ್ಮೊಡನೆ ಸ್ನೇಹವನ್ನು ಬೆಳೆಸಬೇಕೆಂದಿರುವನು ನಾ ನಾದರೋ ಸುಗ್ರೀವನಿಗೆ ಮಂತ್ರಿಯಾದ ಒಬ್ಬ ವಾನರನು ನಾನು ವಾಯು ಪುತ್ರನು ಸುಗ್ರೀವನಿಗೆ ಪ್ರಿಯವನ್ನು ಂಟುಮಾಡಬೇಕೆಂಬುದಕ್ಕಾಗಿ ಈ ಸ ನ್ಯಾಸಿವೇಷವನ್ನು ಧರಿಸಿ ಋಶ್ಯಮೂಕಪಕ್ವತದಿಂದ ಇಲ್ಲಿಗೆ ಬಂದಿರುವೆನು, ನಾನು ಇಷ್ಟಬಂದಕಡೆಗೆ ಹೋಗಬಲ್ಲೆನು ಇಷ್ಟಬಂದರೂಪವನ್ನು ನಿಮಿ ಪಮಾತ್ರದಲ್ಲಿ ಧರಿಸಬಲ್ಲೆನು,”ಎಂದನು ಮಾತಿನಲ್ಲಿ ನಿಪುಣನಾದ ಆಂಜನೇ ಯನು ತನ್ನ ಮಾತಿನ ಭಾವನನ್ನು ಚೆನ್ನಾಗಿ ತಿಳಿಯಬಲ್ಲ ಆ ರಾಮಲಕ್ಷ ಣರೊಡನೆ ಹೀಗೆಂದು ಹೇಳಿ, ಬೇರೊಂದುಮಾತನ್ನೂ ಆಡದೆ ಸುಮ್ಮನಿದ್ದ