ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೦ ಶ್ರೀಮದ್ರಾಮಾಯಣವ [ಸರ್ಗ, ೩. ಮಾತಾಡುತ್ತಿರುವಾಗ ಇವನ ಮುಖದಲ್ಲಿಯಾಗಲಿ, ಕಣ್ಣುಗಳಲ್ಲಿಯಾಗಲಿ, ಹಣೆಯಲ್ಲಿಯಾಗಲಿ, ಕಣ್ಣು ಬೊಂಬೆಗಳಲ್ಲಿಯಾಗಲಿ, ಬೇರೆ ಅವಯವಗ ಇಲ್ಲಿಯೇ ಆಗಲಿ,ಯಾವುದೊಂದು ವಿಕಾರಚೇಷ್ಟೆಗಳೂ ಕಾಣಿಸಲಿಲ್ಲ ಮತ್ತು #ಈತನ ಮಾತುಗಳು ವಿಶೇಷಶಬ್ದಾಡಂಬರವಿಲ್ಲದೆ, ಪದವರ್ಣಗಳಲ್ಲಿ ಸ್ವಲ್ಪ ವಾದರೂ ಸಂದೇಹವು ತೋರದೆ, ಆಡಿದ ನುಡಿಗಳು ಅತಿಮಂದವಾಗಿಯಾ ಗಲಿ ವೇಗವಾಗಿಯಾಗಲಿ ಇಲ್ಲದೆ, ಗಂಭೀರಗಳಾಗಿ ಇದ್ದುವು ಈತನಸ್ವರ ವು ಎದೆಯಿಂದ ಹೊರಟುಬರುವಾಗಲೂ, ಕಂರದಲ್ಲಿರುವಾಗಲೂ, ಅತ್ಯುಚ್ಚ ವೂ, ಅತಿನೀಚವೂ ಅಲ್ಲದೆ, ಮಧ್ಯಮಸಾಸ್ಥಾಯಿಯಿಂದ ವರ್ತಿಸುತ್ತಿರುವು ದು ಇವನು ವ್ಯಾಕರಣಸಂಸ್ಕಾರದಿಂದ ಶಬ್ದ ಶುದ್ದಿಯನ್ನು ಹೊಂದಿದವ ನಾದುದರಿಂದ, ಇವನ ವಾಕ್ಯಗಳಲ್ಲಿ ಪದಗಳು ವ್ಯಕ್ತವಾಗಿಯೂ, ವರ್ಣ ಗಳು ಸ್ಪುಟವಾಗಿಯೂ ಇರುವವು ಇವನು ಮಾತಾಡುವಾಗ ಅತಿತ್ವರಿತ ಜ ದಂತೆ ಸಂಭಾಷಣಮಾಡುವುದೇ ಸಲ್ಲಕ್ಷಣವು ಇದೇ ವಿಷಯವು ಶಿಕ್ಷಾಶಾಸ್ತ್ರದಲ್ಲಿ “ಗಿ ತೀ ಶೀಘಿ ಶಿರ ಕಂಪೀ ತಥಾ ಲಿಖಿತ ಪಾರಕ: ಅನರ್ಥಜ್ಯೋಲ್ಪಕಂರಶ್ಯ ಷಡೇತೇ ಪಾರಕಾಧಮಾ 1 ನ ಶಿರಃ ಕಂಪಯೇದ್ಘಾತಂ ಭುವಚಾತ್ಯಕ್ಷಿಣೀ ತಥಾ 1 ತೈಲ ಪೂರ್ಣಮಿವಾತ್ಮಾನಂ ತದ್ವರ್ಣೇ ಪ್ರಯೋಜಯೇತ್ ಎಂದು ವಿವರಿಸಲ್ಪಟ್ಟಿದೆ ಹನುಮಂತನು ಸಂಭಾಷಿಸುವಾಗ ಈ ತರದ ದೋಷಗಳೆಂದೂ ಕಾಣಿಸಲಿಲ್ಲವಾದುದ ರಿಂದ, ಆತನು ಶಿಕ್ಷೆಯನ್ನೂ ಚೆನ್ನಾಗಿ ಅಧ್ಯಯನಮಾಡಿದವನೆಂದು ಭಾವವು

  • ಇದುವರೆಗೆ ವರ್ಣೋಚ್ಛಾರಣಶಕ್ತಿಯನ್ನು ಹೇಳಿದುದಾಯಿತು ಈ ಶ್ಲೋ ಕಗಳಿಂದ ಅವನ ವಾಕ್ಯಪ್ರಯೋಗಚಾತುರಿಯು ಹೇಳಲ್ಪಡುವುವು ಇಲ್ಲಿ ವಾಕ್ಯದೊ ಪಗಳಲ್ಲಿ ಕೆಲವನ್ನು ಮಾತ್ರವೇ ಹೇಳಿದ್ದರೂ, ಇವು ಶಿಕ್ಷಾಶಾಸ್ತ್ರದಲ್ಲಿ ಹೇಳಲ್ಪಟ್ಟಿರುವ ಹದಿನಾಲ್ಕು ವಾಕ್ಯದೋಷಗಳಿಗೂ ಉಪಲಕ್ಷಕಗಳೆಂದು ಗ್ರಾಹ್ಯವು ಆ ವಾಕ್ಯದೆ ಷಗಳಾವವೆಂದರೆ – “ ಶಂಕಿತಂ ಭೀತಮುದ್ದುಮವ್ಯಕ್ತಮನುನಾಸಿಕಂ, ಕಾಕು ಸ್ವರಂ ಶೀರ್ಷಗತಂ ತಥಾ ಸ್ಥಾನವಿವರ್ಜಿತಮ್ | ವ್ಯಾಕುಲಂ ಕಾಲುಭಿನ್ನಂಚ ಪಾಠ ದೋಷಾಶ್ಚತುರ್ದಶ |?” ಎಂಬಿವೆಲ್ಲವೂ ವಾಕ್ಯದೋಷಗಳು