ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೩೨ ಶ್ರೀಮದ್ರಾಮಾಯವು [ಸರ್ಗ ೪ ನ್ನು ಹಾಗೆಯೇ ನಡೆಸುವೆವು” ಎಂದನು ಇದನ್ನು ಕೇಳಿ ವಾಯುಪುತ್ರನಾ ದ ಹನುಮಂತನು ಪರಮಸಂತುಷ್ಟನಾಗಿ, ವಾಲಿಯನ್ನು ನಿಗ್ರಹಿಸುವುದ ಕ್ಕೆ ತಕ್ಕ ದಾರಿಯು ಸಿಕ್ಕಿತೆಂದು ನಿಶ್ಚಯಿಸಿಕೊಂಡು, ಅವರೊಡನೆ ಸ್ನೇಹವ ನ್ನು ಬೆಳೆಸಬೇಕೆಂದುದ್ದೇಶಿಸಿದನು ಇಲ್ಲಿಗೆ ಮೂರನೆಯ ಸರ್ಗವು 5 ಲಕ್ಷಣನು ಹನುಮಂತನಿಗೆ ತನ್ನ ವೃತ್ತಾಂತಗಳನ್ನು . *ಹೇಳಿದುದು ಎಲ್ಲರೂ ಸುಗ್ರಿವನಬಳಿಗೆ ಹೋದುದು)

  • ಆಮೇಲೆ ಹನುಮಂತನು ಲಕ್ಷ್ಮಣನ ಮಧುರವಾದ ಮಾತುಗಳ ನ್ನು ಕೇಳಿ, ರಾಮನೂ ಕಾರ್ಯಾರ್ಥಿಯಾಗಿಯೇ ಸುಗ್ರೀವನಲ್ಲಿಗೆ ಬರುತ್ತಿರು ವನೆಂಬುದನ್ನು ತಿಳಿದು, ಪರಮಸಂತುಷ್ಟನಾಗಿ, ತನ್ನ ಮನಸ್ಸಿನಲ್ಲಿ ತಾನು ಸುಗ್ರೀವನನ್ನು ಸ್ಮರಿಸಿಕೊಂಡು, ಆಹಾ' ಈ ರಾಮನೂ ಸುಗ್ರೀವನಲ್ಲಿ ಕಾರ್ಯಾರ್ಥಿಯಾಗಿಯೇ ಬಂದಿರುವನು ಇನ್ನು ಮಹಾಭಾಗ್ಯನಾದ ನಮ್ಮ ಸುಗ್ರೀವನಿಗೆ ಕಪಿರಾಜ್ಯವು ಕೈಗೆ ಸೇರಿತೆಂದೇ ಎಣಿಸಬಹುದು "ಎಂದುಹರ್ಷ ಗೊಂಡಿದ್ದನು ಹೀಗೆ + ಪರಮಸಂತುಷ್ಟನಾದ ಹನುಮಂತನು, ಮಾತಿನಲ್ಲಿ ನಿಪುಣನಾದುದರಿಂದ, ತನ್ನ ಸಂತೋಷವನ್ನು ತನ್ನಲ್ಲಿಯೇ ಅಡಗಿಸಿಕೊಂಡು

ಮನನ್ನು ಕುರಿತು (ಎಲೈ ನರಶ್ರೇಷ್ಠ ನೆ' ಈ ವನವಾದರೋ ಅನೇಕವಿಷ ಸರ್ಪಗಳಿಗೂ, ಕ್ರೂರಮೃಗಗಳಿಗೂ ನಿತ್ಯಾಶ್ರಯವಾದ ದಂಡಕಾರಣ್ಯವು ಅದರಲ್ಲಿಯೂ ಈ ಪಂಪಾತೀರವನವು ಅತಿ ದುರ್ಗಮವಾಗಿರುವುದು ನೀನು ನಿನ್ನ ತಮ್ಮನೊಡನೆ ಇಷ್ಟು ಭಯಂಕರವಾದ ಕಾಡಿಗೆ ಬಂದುದೇಕೆ?”ಎಂದನು ಇದನ್ನು ಕೇಳಿ, ಲಕ್ಷಣನು ರಾಮನ ಇಂಗಿತವನ್ನು ತಿಳಿದು ಆಂಜನೇಯನಿಗೆ

  • ಈ ಸರ್ಗದಲ್ಲಿ ರಾಮನಿಗೆ ಹನುಮಂತ ನಮೂಲಕವಾಗಿ ಸುಗ್ರೀವಸಖ್ಯೆ, ವಾದುದರಿಂದ, ಭಗವಂತನಿಗೆ ಚೇತನನ ಲಾಭವು ಆಚಾರ ಮುಖದಿಂದಲೇ ನಡೆಯಬೇ ಕೆಂಬ ವಿಷಯವು ಸೂಚಿತವಾಗಿದೆ
  • ಇಲ್ಲಿ “ತತಃ ಪರಮಸಂಹೃಷ್ಯ ಹನೂರ್ಮಾ ಪ್ಲವಗ ರ್ಷಭಃ” ಎಂದು ಮೂಲವು ಇಲ್ಲಿ 'ಪ್ಲವಗ ರ್ಷಭ ”ಎಂಬಲ್ಲಿರುವ ಗಕರು ಗಾಯಿತ್ರಿಯ ಹತ್ತನೆಯ ವರ್ಕವಾದುದರಿಂದ, ಇದುವರೆಗೆ ರಾಮಾಯಣದಲ್ಲಿ ಒಂಬತ್ತು ಸಾವಿರ ಗ್ರಂಥಗಳು ಮುಗಿದು,ಈ ಶ್ಲೋಕದಿಂದ ಹತ್ತನೆಯ ಸಹಸ್ರವು ಆರಂಭಿಸುವುದಾಗಿ ತಿಳಿಯಬೇಕು.