ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬೪ ಶ್ರೀಮದ್ರಾಮಾಯಣವು [ಸರ್ಗ ೪. ಈ ರಾಮನು,ಪರರು ತನಗೆ ಮಾಡಿದ ಉಪಕಾರವನ್ನು ಎಂದಿಗೂ ಮರೆಯು ವವನಲ್ಲ ಈತನಿಗೆ ತಿಳಿಯದ ವಿಷಯಗಳಿಲ್ಲ ಯಾವಾಗಲೂ ಸುಖಾರ್ಹನಾ ದವನು ಲೋಕಪೂಜ್ಯನು ಸಮಸ್ತಭೂತಗಳಿಗೂ ಹಿತವನ್ನೇ ಬಯಸತಕ್ಕ ವನು, ಇವನು ರಾಜ್ಯಭ್ರಷ್ಟನಾಗಿ ಬಂದ ವನವಾಸದಲ್ಲಿದ್ದರೂ, ನಾನು ಇವನಗುಣಾತಿಶಯಗಳಿಗೆ ಪರವಶನಾಗಿ ಈತನಲ್ಲಿ ದಾಸ್ಯವೃತ್ತಿಯನ್ನು ಮಾ ಡುತ್ತಿರುವೆನು ನಾವಿಬ್ಬರೂ ಇಲ್ಲದಾಗ ಯಾವನೋ ರಾಕ್ಷಸನು ಈತನ ಪ ತ್ರಿಯನ್ನು ಅಪಹರಿಸಿಬಿಟ್ಟನು ಆ ರಾಕ್ಷಸನಾರೆಂದು ಇದುವರೆಗೂ ತಿಳಿಯ ಲಿಲ್ಲ ಆದರೆ ನಾವು ಕಾಡಿನಲ್ಲಿ ಅವಳನ್ನು ಹುಡುಕುತ್ತ ಬರುತ್ತಿರುವಾಗ, ಶಾ ಪದಿಂದ ರಾಕ್ಷಸತ್ವವನ್ನು ಹೊಂದಿದ್ದ ಔತಿಪುತ್ರನಾದ ದನುವೆಂಬವನನ್ನು ಕಂಡೆವು ಅವನು ನಮ್ಮನ್ನು ಕುರಿತು, ಮಹಾಸಮರ್ಥನಾದ ಸುಗ್ರೀವನೆಂಬ ವಾನರರಾಜನೊಬ್ಬನಿರುವನೆಂದೂ, ಆತನು ಮಹಾವೀರ್ಯವುಳ್ಳವನೆಂದೂ ಸೀತೆಯನ್ನು ಕದ್ದುಯ್ದ ರಾಕ್ಷಸನಾರೆಂಬುದನ್ನು ಆ ಸುಗ್ರೀವನು ಬಲ್ಲವೆಂ ದೂ ತಿಳಿಸಿ, ಆಗಲೇ ಶಾಪವಿಮುಕ್ತನಾಗಿ ದಿವ್ಯರೂಪವನ್ನು ಹೊಂದಿ ಸು ಖವಾಗಿ ಸ್ವರ್ಗಲೋಕಕ್ಕೆ ಹೊರಟುಹೋದನು ಎಲೈ ವಾನರಶ್ರೇಷ್ಠನೆ? ನೀನು ನಮ್ಮನ್ನು ಕೇಳಿದುದರಿಂದ ಇದಸ್ಥಿತಿಯನ್ನು ಯಥಾವಸ್ಥಿತವಾಗಿ ತಿ ಳಿಸಿಬಿಟ್ಟಿರುವೆನು ಪ್ರಕೃತದಲ್ಲಿ ನಾನೂ ನಮ್ಮಣ್ಣನಾದ ಈ ರಾಮನೂ ನಿಮ್ಮ ಸುಗ್ರೀವನನ್ನೇ ನಂಬಿ ಬಂದಿರುವೆವು ಆಹಾ ' ನಾನೇನು ಹೇಳಲಿ ? ಯಾವನು ಪೂತ್ವದಲ್ಲಿ ಆರ್ಥಿಗಳಿಗೆ ಬೇಕಾದಷ್ಟು ಧನವನ್ನು ಕೊಟ್ಟು -- - ನೋಡಿ ತಾನು ದಾಸ್ಯವೃತ್ತಿಯನ್ನವಲಂಬಿಸಿರುವುದಾಗಿ ಹೇಳಿದುದೇಕೆ? ಎಂದರೆ, ತನಗೆ ಸ್ವರೂಪಸಿದ್ಧವಾದ ದಾಸ್ಯವೇ ಈಗ ಆತನ ಗುಣಾತಿಶಯಗಳಿಂದ ಇನ್ನೂ ಹೆಚ್ಚಿ ತೆಂದು ಗ್ರಾಹ್ಯವು ಮತ್ತು ಇಲ್ಲಿ 'ಲಕ್ಷಣೋನಾಮ ನಾಮತ "ಎಂಬುದರಿಂದ ತನ್ನ ಹೆಸರಿನಿಂದಲೇ ತಾನು ಕೈಂಕಯ್ಯಲಕ್ಷಿಸಂಪನ್ನನೆಂಬುದು ವ್ಯಕ್ತವಾಗುವುದರಿಂದ, ಆ ದಾಸ್ಯವು ತನಗೆ ಸ್ವರೂಪಸಿದ್ಧವೆಂದೂ ಭಾವವು ಇದಲ್ಲದೆ ಮುಂದಿರುವ 'ಮಹಾರ್ಹಸ್ಯ, ವನವಾಸಾಶ್ರಿತಸ್ಯ ' ಎಂಬೀ ಎರ ಡು ವಿಶೇಷಕಗಳ ಸಾಹಚರದಿಂದ, ಆ ರಾಮನು ಸಮೃದ್ಧಿದಶೆಯಲ್ಲಿದ್ದರೂ, ದೀನದ ಶೆಯಲ್ಲಿದ್ದರೂ ಆತನಲ್ಲಿ ದಾಸ್ಯವೇ ತನಗೆ ಸಹಜವೆಂಬುದೂ ಸ್ಪಷ್ಟವಾಗಿದೆ