ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬೬ ಶ್ರೀಮದ್ರಾಮಾಯಣವು - [ಸರ್ಗ, ೪, ಎಲೈ ವಾಯುಪುತ್ರನೆ ಹೀಗೆ ಶೋಕಪೀಡಿತನಾಗಿ ನಿಮ್ಮಲ್ಲಿ ಮರೆಹೊಕ್ಕುಬಂ ದಿರುವ ಈ ರಾಮನಲ್ಲಿ, ಕಪಿರಾಜನಾದ ನಿಮ್ಮ ಸುಗ್ರೀವನು ಅವಶ್ಯವಾಗಿ ಆ ನುಗ್ರಹವನ್ನು ತೋರಿಸಬೇಕು”ಎಂದನು ಹೀಗೆ ಅತಿದೈನ್ಯದಿಂದ ಕಣ್ಣೀರು ತುಂಬಿಕೊಂಡು ಪ್ರಾರ್ಥಿಸುತ್ತಿರುವ ಲಕ್ಷಣವನ್ನು ನೋಡಿ, ಮಾತಿನಲ್ಲಿ ನಿಪುಣನಾದ ಹನುಮಂತನು (ಎಲೈವೀರನೆ' ಇದೇನು ಹೀಗೆ ಹೇಳುತ್ತಿರುವೆ? ಬುದ್ಧಿಸಂಪನ್ನರಾಗಿಯೂ, ತಾಳ್ಮೆಯುಳ್ಳವರಾಗಿಯೂ, ಜಿತೇಂದ್ರಿಯರಾಗಿ ಯೂ ಇರುವ ಇಂತಹ ಮಹಾತ್ಮರನ್ನು , ನಮ್ಮೊಡಯನಾದ ಸುಗ್ರೀವನು ತಾನಾಗಿಯೇ ಹುಡುಕಿಬಂದು ನೋಡಬೇಕಲ್ಲವೆ ? ಹೀಗಿರುವಾಗ ಆ ತನ ಭಾಗ್ಯವಶದಿಂದ, ನಿಮ್ಮಂತಹ ಮಹಾತ್ಮರ ಆತನಿಗೆ ದರ್ಶನವನ್ನು ಕೊ ಡಬೇಕೆಂದು ಬಂದಿರುವಾಗ, ಇನ್ನು ಹೇಳಬೇಕಾದುದೇನು? ನಿಮ್ಮಂತೆಯೇ ಆ ಸುಗ್ರೀವನೂ ಈಗ ದೀನದಶೆಯಲ್ಲಿರುವನು ಅಣ್ಣನಾದ ವಾಲಿಯೊಡನೆ ವೈರವನ್ನು ಬೆಳೆಸಿ ಆತನೂ ರಾಜ್ಯಭ್ರಷ್ಟನಾಗಿರುವನು ಅವನ ಸಹೋದ ರನಾದ ವಾಲಿಯು ಆತನ ಹೆಂಡತಿಯನ್ನೂ ಅಪಹರಿಸಿ, ಆತನನ್ನು ವಂಚಿಸಿ ರಾಜ್ಯದಿಂದೋಡಿಸಿಬಿಟ್ಟಿರುವನು ಇದರಿಂದ ಆತನೂ ಕಾಡಿನಲ್ಲಿ ಅಲೆಯು ತಿರುವನು ಅವನನ್ನು ಸಾಮಾನ್ಯನೆಂದು ತಿಳಿಯಬೇಡಿರಿ'ಸಾಕ್ಷಾತ್ಯರದೇ ವನ ಮಗನು ಆತನಿಗೆ ಈ ಆಪತ್ಕಾಲದಲ್ಲಿ ನಾವು ಸಹಾಯಕರಾಗಿರುವೆವು ಆತನು ಸೀತೆಯನ್ನು ಹುಡುಕುವುದರಲ್ಲಿ ನಿಮಗೆ ತಪ್ಪದೆ ಸಹಾ ಯಮಾಡುವನು” ಎಂದನು ಹೀಗೆ ಹನುಮಂತನು ಇಂಪಾದ ನುಡಿಗಳಿಂ ದ ಅವರಿಗೆ ಸಮಾಧಾನವನ್ನು ಹೇಳಿ ಎಲೈ ವೀರರೆ'ಇನ್ನು ನಾವು ಸುಗ್ರೀ ವನ ಬಳಿಗೆ ಹೋಗುವೆವೆ?” ಎಂದನು , ಹೀಗೆ ಹೇಳುತ್ತಿರುವ ಹನುಮಂತನ ನ್ನು ಧರ್ಮಾತ್ಮನಾದ ಲಕ್ಷಣನು ಯಥಾವಿಧಿಯಾಗಿಮನ್ನಿಸಿ,ಸವಿಪದಲ್ಲಿ

  • ಇಲ್ಲಿ ರಾಮನು ಶೋಕಾರೆಯಾದ ಆ ಸೀತೆಯನ್ನುದ್ದೇಶಿಸಿ ಶೋಕಾಕುಲ ನಾಗಿ ಸುಗ್ರೀವನನ್ನು ಮರೆಹೊಕ್ಕನೆಂಬುದರಿಂದ, ಬದ್ಧರಾಗಿ ದುಃಖಿಸುತ್ತಿಳುವ ಚೇತ ನರನ್ನು ನೋಡಿ ಭಗವಂತನು ತಾನೂ ದುಃಖಾಕುಲನಾಗುವನೆಂದೂ, ತಮ್ಮಿಬ್ಬರಿಗಿರು ವ ಈ ದುಃಖವು ಆಚಾರಮುಖದಿಂದಲ್ಲದೆ ನೀಗಲಾರದೆಂಬುದಕ್ಕಾಗಿ, ತಾನೇ ಆಚ ರಮೂಲಕವಾಗಿ ಚೇತನೋಜೀವನಕ್ಕೆ ಪ್ರಯತ್ನಿಸುವನೆಂದೂ ಧ್ವನಿತವಾಗುವುದು