ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬೭ ಸರ್ಗ, ೫.] ಕಿಷಿಂಧಾಕಾಂಡವು. ವ್ಯ ರಾಮನನ್ನು ಕುರಿತು, 14 ಅಣ್ಣಾ' ವಾಯುಪುತ್ರನಾದ ಈ ವಾನರ ನಿ, ನಮ್ಮ ಮಾತನ್ನು ಕೇಳಿ ಪರಮಸಂತೋಷವನ್ನು ಸೂಚಿಸುತ್ತಿರುವನು ಇದರಿಂದ ಈತನೂ ನಮ್ಮಲ್ಲಿ ಕಾವ್ಯಾರ್ಥಿಯಾಗಿಯೇ ಬಂದಿರುವಂತಿದೆ ಆದ ರಿಂದ ಈತನು ನಮ್ಮ ಕಾವ್ಯವನ್ನು ನಡೆಸಿಕೊಡುವವಿಷಯದಲ್ಲಿ ಹೇಳಿದ ಮಾ ತುಗಳು ಯಥಾರ್ಥವೆಂದೇ ನಂಬಬಹುದು ಸ್ವಕಾಯ್ಯಾರ್ಥಿಯಾದ ಸುಗ್ರೀವ ನು ನಮ್ಮ ಕಾವ್ಯವನ್ನು ನಡೆಸಿಕೊಡದೆ ತೀರದು ಇನ್ನು ನೀನು ಕೃತಾರ್ಥ ನು ವಾಯುಕುಮಾರನಾದ ಈ ವೀರನು ಪ್ರಸನ್ನ ಮುಖನಾಗಿ ಸಂ ತೋಷದೊಡನೆ ಸ್ಪಷ್ಟವಾಗಿ ಮಾತಾಡುವುದರಿಂದ, ಈತನು ಆಸತ್ಯವನ್ನು ಹೇಳಲಾರನು” ಎಂದನು ಆಮೇಲೆ ಮಹಾಪ್ರಾಜ್ಞನಾದ ಹನುಮಂತನು, ಆ ರಾಮಲಕ್ಷ್ಮಣರಿಬ್ಬರನ್ನೂ ಸುಗ್ರೀವನಬಳಿಗೆ ಕರೆದುಕೊಂಡು ಹೋಗು ವುದಾಗಿ ನಿಶ್ಚಯಿಸಿ, ಆಗಲೇ ತನ್ನ ಸನ್ಯಾಸಿರೂಪವನ್ನು ಬಿಟ್ಟು ನಿಜರೂಪವ ನ್ನು ತೋರಿಸಿ, ಅವರಿಬ್ಬರನ್ನೂ ಹೆಗಲಮೇಲೆ ಕುಳ್ಳಿರಿಸಿಕೊಂಡು, ಸುಗ್ರೀವನ ಬಳಿಗೆ ಹೊರಟನು ಹೀಗೆ ಮಹಾಯಶಸ್ವಿಯಾಗಿಯೂ, ವಾಯುಪ್ರಿನಾ ಗಿಯೂ ಇರುವ ಥೀಮಂತನಾದ ಹನುಮಂತನು, ತಾನು ಕೃತಾರ್ಥನಾದಂ ತೆ ಸಂತೋಷಗೊಂಡು, ಆ ರಾಮಲಕ್ಷಣರೂಡಗೂಡಿ ಋಶ್ಯಮೂಕಪ ಊತಕ್ಕೆ ಹೋದನು ಇಲ್ಲಿಗೆ ನಾಲ್ಕನೆಯಸರ್ಗವು | - *ರಾಮಸುಗ್ರಿವರಿಬ್ಬರೂ ಸೇರಿ ಅಗ್ನಿ ಸಾಕ್ಷಿಕವಾಗಿ ಆಣೆ ) 1 ಯಿಟ್ಟು ಪರಸ್ಸರಸ್ನೇಹವನ್ನು ಒಳೆಸಿದುದು ; ಆಮೇಲೆ ಹನುಮಂತನು ಋಶ್ಯಮೂಕವನ್ನೇರಿ,ಆ ಮಾರ್ಗವಾಗಿ ಮ ಲಯಪತಕ್ಕ ಹೋಗಿ,ಸುಗ್ರಿವನ ಸಮೀಪಕ್ಕೆ ಬಂದ ಆತನನ್ನು ಕುರಿತು,

  • ಈ ಸರ್ಗದಲ್ಲಿ ರಾಮನನ್ನು ನೋಡಿ ವಾಲಿಯೆಂದು ಭಯಪಟ್ಟ ಸುಗ್ರೀವ ನು, ಹನುಮಂತನ ಮೂಲಕವಾಗಿ ನಿಜಸ್ಥಿತಿಯನ್ನು ತಿಳಿದಮೇಲೆ ನಿರ್ಭಯನಾಗಿ, ಆತ ನೊಡನೆ ಸ್ನೇಹವನ್ನು ಮಾಡಿದನೆಂಬುದರಿಂದ, ಚೇತನನು ತನ್ನ ಪಾಪಗಳನ್ನು ನೋಡಿ ಮೊದಲು ನಿರ್ದೆತುಕಕೃಪಾಕರನಾದ ಭಗವಂತನಿಗೂ ಅಂಜಿ, ಕೊನೆಗೆ ಆಚಾಯ್ಯಮು ಖದಿಂದ ನಿಜತತ್ವವನ್ನು ತಿಳಿದು, ಭಗವತ್ಪಾಪಾತ್ರನಾಗುವನೆಂಬ ತತ್ವಾರವು ಸೂ ಚಿಸಲ್ಪಡುವುದು.