ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೫] ಕಿಷಿಂಧಾಕಾಂಡವು ೧೩೬೯ ರನ್ನು ಮಾತಾಡಿಸುವನು (ಎಲೈ ಮಹಾತ್ಮರೆ' ನೀವಾದರೋ ಧರದಲ್ಲಿ ಚೆನ್ನಾಗಿ ಶಿಕ್ಷಿತರಾದವರು ಬಹಳ ಪರಾಕ್ರಮವುಳ್ಳವರು ಸಮಸ್ತಪ್ರಾಣಿ ಗಳಲ್ಲಿಯೂ ವಾತ್ಸಲ್ಯವುಳ್ಳವರು ನಿಮ್ಮ ಗುಣಾತಿಶಯಗಳೆಲ್ಲವನ್ನೂ ಯ ಧಾಸ್ಥಿತವಾಗಿ ಈ ಹನುಮಂತನು ನನಗೆ ತಿಳಿಸಿದನು ಇಷ್ಟುಗುಣಾ ಡ್ಯರಾದ ನಿಮ್ಮಂತವರು ಕೇವಲ ವಾನರನಾದ ನನ್ನೊಡನೆ ಸ್ನೇಹವನ್ನು ಬಳೆ ಸಬೇಕೆಂದು ಬಂದಮೇಲೆ,ಇದಕ್ಕಿಂತಲೂ ಮೇಲಾದ ಗೌರವವೂ,ಉತ್ತಮ ವಾವ ಲಾಭವೂ, ನನಗೆ ಬೇರೆಯಾವುದುಂಟು? ರಾಮಾ'ನಿಜವಾಗಿ ನನ್ನ ಸ್ನೇ ಹವು ನಿನಗೆ ಇಷ್ಟವಾಗಿದ್ದರೆ,ಇದೋ ಕೈನೀಡಿರುವನು ನಿನ್ನ ಕೈಯಿಂದ ಈ ನನ್ನ ಕೈಯನ್ನು ಹಿಡಿದು ಈ ಸ್ನೇಹಕ್ಕೆ ಎಂದಿಗೂ ಚ್ಯುತಿಯಿಲ್ಲದಂತೆ ದೃಢ ಪಡಿಸು”ಎಂದು ಇದನ್ನು ಕೇಳಿದೊಡನೆ ರಾಮನಿಗೆ ಪರಮಸಂತೋಷವುಂ ಟಾಯಿತು ತನ್ನ ಕೈಯಿಂದ ಸುಗ್ರೀವನ ಕೈಯನ್ನು ಗ್ರಹಿಸಿದನು ಮೇಲೆ ಮೇಲೆ ದೃಢವಾದ ಸ್ನೇಹಭಾವವನ್ನು ತೋರಿಸುತ್ತಾ, ಸುಗ್ರೀವನನ್ನು ಬಿಗಿ ಯಾಗಿ ಅಪ್ಪಿಕೊಂಡನು ಇತ್ತಲಾಗಿ ಹನುಮಂತನು ರಾಮಲಕ್ಷ್ಮಣರಿಗೆ ತನ್ನ ನಿಜರೂಪವನ್ನು ತೋರಿಸಿದಮೇಲೆ, ಸುಗ್ರೀವನಬಳಿಗೆ ಬರುವಾಗ ರಾ ಜಾಜ್ಞೆಯನ್ನು ಮೀರಬಾರದೆಂಬುದಕ್ಕಾಗಿ *ಪುನಃ ಭಿಕ್ಷುರೂಪವನ್ನೇ ಧರಿಸಿ, ರಾಮಲಕ್ಷಣರೊಡಗೂಡಿ ಸುಗ್ರೀವನಬಳಿಗೆ ಬಂದಿದ್ದನು ಈಗ ಸುಗ್ರೀ ವನ ಮುಂದೆ, ಆ ಭಿಕ್ಷುರೂಪವನ್ನು ಬಿಟ್ಟು, ನಿಜರೂಪವನ್ನು ಧರಿಸಿ, ಅರಣಿಕಾ ವ್ಯಗಳನ್ನು ಜೈಬೆಂಕಿಯನ್ನು ಹುಟ್ಟಿಸಿದನು ಆಮೇಲೆ ಜ್ವಲಿಸುತ್ತಿರುವ ಆ ಅಗ್ನಿ ಯನ್ನು ಯಥಾವಿಧಿಯಾಗಿ ಪೂಜಿಸಿ, ಆ ಸಂಸ್ಕತಾಗ್ನಿ ಯನ್ನು ರಾಮ ಸುಗ್ರೀವರ ನಡುವೆ ತಂದಿಟ್ಟನು ಆಗ ರಾಮಸುಗ್ರಿವರಿಬ್ಬರೂ, ಕೈಹಿಡಿ ದುಕೊಂಡು ಆ ಆಗ್ರಿ ಯನ್ನು ಪ್ರದಕ್ಷಿಣವಾಗಿ ಸುತ್ತಿ ಬಂದು, ಅಗ್ನಿ ಸಾಕ್ಷಿಕ ವಾಗಿಯೇ ಸ್ನೇಹವನ್ನು ಮಾಡಿದರು ಇಬ್ಬರೂ ಪರಮಸಂತುಷ್ಟಚಿತ್ತರಾಗಿ, ಒಬ್ಬರನ್ನೊಬ್ಬರು ಎಷ್ಟು ನೋಡುತಿದ್ದರೂ ತೃಪ್ತಿಹೊಂದದೆ ನಿಂತಿದ್ದರು

  • ಇಲ್ಲಿ ಫನಃ ಹನುಮಂತನು ಭಿಕ್ಷುರೂಪವನ್ನು ಬಿಟ್ಟನೆಂಬುದರಿಂದ, ಇವನು ರಾಮಲಕ್ಷ್ಮಣರನ್ನು ಕರೆತರುವಾಗ, ಸುಗ್ರೀವನ ನಂಬಿಕೆಗಾಗಿ ಮೊದಲು ತಾನು ಬಿಟ್ಟ ದ ಭಿಕ್ಷುರೂಪವನ್ನೇ ಪುನ ತಾಳಿಬಂದನೆಂದೂ ಗ್ರಾಹ್ಯವು