ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭೧ ಸರ್ಗ & ] ಕಿಷಿಂಧಾಕಾಂಡವು ಶೀಘ್ರದಲ್ಲಿಯೇ ಅವನ ಪ್ರಾಣಗಳನ್ನು ಹೀರಿಬಿಡುವುವು, ಉರಿದುಬಿದ್ದ ಬೆ ಟ್ಯದಂತೆ ನಿನ್ನ ವೈರಿಯಾದ ವಾಲಿಯು ನೆಲದಮೇಲೆ ಬೀಳುವುದನ್ನು ನೋಡು ವೆ” ಎಂದನು ಹೀಗೆ ರಾಮನು ಹೇಳಿದ ವಾಕ್ಯವನ್ನು ಕೇಳಿ ಸುಗ್ರೀವನು ಸಂತೋಷದಿಂದುಬ್ಬಿ, ಸಾರವತ್ತಾದ ಮಾತಿನಿಂದ (“ಎಲೈ ಪುರುಷಶ್ರೇಷ್ಠ ನೆ' ಹಾಗಿದ್ದರೆ ನಿನ್ನ ಅನುಗ್ರಹಬಲದಿಂದ ನಾನು ನನ್ನ ಪ್ರಿಯೆಯನ್ನೂ, ನ. ನ್ಯ ರಾಜ್ಯವನ್ನೂ ಹಿಂತಿರುಗಿ ಪಡೆಯಬಹುದು ಇನ್ನು ನೀನು ನನಗೆ ವೈರಿಯಾ ದ ಆ ವಾಲಿಯನ್ನು ಕೊಲ್ಲುವುದಕ್ಕೆ ಪ್ರಯತ್ನಿಸಬೇಕು” ಎಂದನು ಹೀಗೆ ರಾಮಸುಗ್ರಿವರಿಬ್ಬರೂ ಅಗ್ನಿ ಸಾಕ್ಷಿಕವಾಗಿ ಪರಸ್ಪರಸ್ನೇಹವನ್ನು ಮಾಡು ವಕಾಲದಲ್ಲಿ ಅತ್ಯಲಾಗಿ ಪದ್ಮದಳದಂತೆ ಶೋಭಿಸುತ್ತಿರುವ ಸೀತೆಯ ಎಡದ ಕಣ್ಮ, ಬಂಗಾರದಂತೆ ಹೊಂಬಣ್ಣವುಳ್ಳ ವಾಲಿಯ ಎಡದಕಣ್ಮ, ಅಗ್ನಿ ಯಂತೆ ಉರಿಯುತ್ತಿರುವ ರಾವಣನ ಎಡದಕಣ್ಣೂ ಏಕಕಾಲದಲ್ಲಿ ಆದಿರಿದು ವು ಇಲ್ಲಿಗೆ ಐದನೆಯ ಸರ್ಗವು (ಸುಗ್ರೀವನು ರಾಮನ ಕಾಠ್ಯವನ್ನು ನಿರಹಿಸುವುದಾಗಿ. ಪ್ರತಿಜ್ಞೆ ಮಾಡಿದುದು - ಆಮೇಲೆ ಪುನಃ ಸುಗ್ರೀವನು ರಫುಪುತ್ರನಾದ ರಾಮನನ್ನು ಕುರಿ ತು ಸಂತೋಷದಿಂದ, ರಾಮಾ : ನನ್ನ ಮಂತ್ರಿ ಶ್ರೇಷ್ಠನಾದ ಈ ಹನು ಮಂತನು, ನೀನು ನಿರ್ಜನವಾದ ಕಾಡಿಗೆ ಹೊರಟುಬಂದ ಕಾರಣವನ್ನು ಹೇಳಿರುವನು ನೀನು ತಮ್ಮನಾದ ಲಕ್ಷ್ಮಣನೊಡನೆ ಕಾಡಿನಲ್ಲಿ ವಾಸಮಾಡು ತಿರುವಾಗ, ಜನಕಪುತ್ರಿಯಾದ ನಿನ್ನ ಪತ್ನಿ ಯು ರಾಕ್ಷಸನಿಂದ ಅಪಹೃತಳಾದ ಳೆಂಬುದನ್ನೂ ಕೇಳಿದೆನು ನೀನೂ ಥೀಮಂತನಾದ ಈ ಲಕ್ಷಣನೂಇಲ್ಲದ ವೇಳೆಯಲ್ಲಿ, ಆದೇಸಮಯವನ್ನು ನಿರೀಕ್ಷಿಸುತಿದ್ದ ಆ ರಾಕ್ಷಸನು, ಅಡ್ಡಲಾ ಗಿ ಬಂದ ಜಟಾಯುವನ್ನೂ ಕೊಂದು,ಭಯದಿಂದ ತತ್ತಳಿಸಿ ಗೋಳಿಡುತ್ತಿರುವ ನಿನ್ನ ಪತ್ನಿ ಯನ್ನೆತ್ತಿಕೊಂಡು ಹೋದುದಾಗಿಯೂ ಕೇಳಿದೆನು ಆದರೇನು ! ಎಲೈಮಿತ್ರನೆ' ಇನ್ನು ಸ್ವಲ್ಪ ಕಾಲದೊಳಗಾಗಿಯೇ ನಿನಗೆ ಪತ್ನಿ ವಿಯೋ ಗದಿಂದುಂಟಾಗಿರುವ ಈ ದುಃಖವು ನೀಗುವುದೆಂದು ತಿಳಿ / ಅವಳು ಪಾತಾ