ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭೨ ಶ್ರೀಮದ್ರಾಮಾಯಣವು (ಸರ್ಗ 4 ಛದಲ್ಲಿ ಮುಚ್ಚಿಡಲ್ಪಟ್ಟಿದ್ದರೂ, ಅಥವಾ ಆಕಾಶದಲ್ಲಿ ಬಚ್ಚಿಡುಟ್ಟಿದ್ದರೂ ನಾನು ಬಿಡುವವನಲ್ಲ ಮಧುಕೈಟಭರು ಕದ್ಭುಯ್ದ ಶ್ರುತಿಯನ್ನು ವಿಷ್ಣುವು ಉದ್ಧರಿಸಿ ತಂದಂತೆ, ಅವಳನ್ನು ಎಲ್ಲಿದ್ದರೂ ನಿನಗೆ ನಾನುತಂದೊಪ್ಪಿಸುವೆನು. ರಾಮಾ' ಈಗ ನಾನು ಹೇಳುವ ಮಾತನ್ನು ನಿಜವೆಂದು ದೃಢವಾಗಿ ನಂಬು! ಎಲೈ ಮಹಾಬಾಹುವಾದ ರಾಮನೆ | ವಿಷಮಿಶ್ರವಾಗಿ ಮಾಡಲ್ಪಟ್ಟ ಭಕ್ಷ ವನ್ನು ಭುಜಿಸಿದವರಂತೆ, ಇಂದ್ರನೂಡಗೂಡಿದ ದೇವಾಸುರರಾದರೂ ನಿನ್ನ ಪತ್ನಿ ಯನ್ನು ಬಚ್ಚಿಟ್ಟು ಬದುಕಲಾರರಂದು ತಿಳಿ' ಎಲೈವೀರನೆ' ಇನ್ನು ನಿನ್ನ ದುಃಖವನ್ನು ಬಿಡು ಆ ಕಯನ್ನು ನಾನೇ ನಿನಗೆ ತಂದೊಪ್ಪಿಸುವೆನು ನನಗೆ ಹಿಂದೆ ಒಂದು ಅನುಮಾನವೂ ಹುಟ್ಟಿದ' ಅವಳೇ ನಿನ್ನ ಪತ್ನಿ ಯಾದಸೀತೆಯೆಂ ಬುದರಲ್ಲಿ ಸಂದೇಹವಿಲ್ಲ ಕೂರಕ್ರಿಯಾದ ರಾಕ್ಷಸನೊಬ್ಬನು ಆಕೆಯನ್ನೆತ್ತಿ ಕೊಂಡು ಅಂತರಿಕ್ಷದಲ್ಲಿ ಹೋಗುತಿದ್ದುದನ್ನು ಕಂಡೆನು ಆಕಾಲದಲ್ಲಿ ಆಕೆಯು (ರಾಮಾ' ರಾಮಾ' ಲಕ್ಷಣಾ!!!” ಎಂದು ಹೀನಸ್ವರದಿಂದ ಕೂಗಿಕೊಳ್ಳು ತಿದ್ದಳು ಹೆಣ್ಣು ಹಾವಿನಂತೆ ರಾವಣನ ತೊಡೆಯಲ್ಲಿ ಸಿಕ್ಕಿ ನರಳುತ್ತಿದ್ದಳು ಆ ಕಾಲದಲ್ಲಿ ನಾನು ಬೇರೆ ನಾಲ್ಕು ಮಂದಿ ಕಪಿಗಳೊಡನೆ ಈ ಬೆಟ್ಟದ ತಪ್ಪಲ ಫಿ ಕುಳಿತಿದ್ದೆನು ನಮ್ಮನ್ನು ಕಂಡು ಆಕೆಯು ತನ್ನ ಆಭರಣಗಳನ್ನು ತೆಗೆದು,ತಾ ನು ಹೊದೆದಿದ್ದ ಉತ್ತರೀಯದಲ್ಲಿ ಕಟ್ಟಿ, ನಮ್ಮ ಕಡೆಗೆ ಬಿಸಬಳು ನಾವು ಅದ ನ್ನು ತೆಗೆದು ಸುರಕ್ಷಿತವಾಗಿಟ್ಟಿರುವೆವು ಬೇಕಾದರೆ ಈಗಲೂ ಅವುಗಳನ್ನು ತಂ ದು ನಿನಗೆ ತೋರಿಸುವೆವು ನೀನು ಅವುಗಳ ಗುರುತನ್ನು ಕಂಡು ಹಿಡಿಯಬಹು ದು” ಎಂದನು ಈ ಪ್ರಿಯವಾಕ್ಯವನ್ನು ಕೇಳಿದೊಡನೆ ರಾಮನು ಅತ್ಯಾತುರ ದಿಂದ ಸುಗ್ರೀವನನ್ನು ಕುರಿತು, * ಮಿತ್ರನೆ' ಹಾಗಾದರೆ ಶೀಘ್ರದಲ್ಲಿ ಅವು ಗಳನ್ನು ತರಿಸು' ಹೀಗಿದ್ದರೂ ನೀನು ತಾಮಸಮಾಡಬಹುದೆ?” ಎಂದನು ಆ ಕ್ಷಣವೇ ಸುಗ್ರೀವನು ದುರ್ಗಮವಾದ ತನ್ನ ಗುಹೆಯನ್ನು ಪ್ರವೇಶಿಸಿ, ರಾಮ

  • ಹೀಗೆ ಆಭರಣಗಳನ್ನು ನೋಡಿದೊಡನೆ ಸೀತೆಯನ್ನು ನೋಡುವುದಕ್ಕಾಗಿ ರಾಮನು ಆತುರಪಡುತಿದನೆಂಬುದರಿಂದ, ಚೇತನನ ಯಾದೃಚ್ಛಿಕಪ್ರಾಸಂಗಿಕಸಕ್ರ ತಗಳನ್ನು ನೋಡುವುದರಿಂದ, ಭಗವಂತನಿಗೆ ಆತನನ್ನು ಪಡೆಯಬೇಕೆಂಬ ತ್ವರೆಯು ಹುಟ್ಟುವುದೆಂಬ ತತ್ವಾರವು ಧ್ವನಿತವಾಗುವುದು