ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೭೫ ಸರ್ಗ ೭] ಕಿಮ್ಮಂಧಾಕಾಂಡವು ರವಾಗಲಿ,ಅವನ ವೀರ್ಯವಾಗಲಿ ಎಂತದೆಂಬುದನ್ನೂ ನಾನರಿಯೆನು ದು ಗ್ರೀವನಿಗೆ ರಾವಣನ ಸ್ಥಿತಿಗತಿಗಳೆಲ್ಲವೂ ತಿಳಿದಿದ್ದುದೇನೋ ನಿಜವು ಆದರೆ ದೂರಾ ಲೋಚನೆಯುಳ್ಳ ಆ ಸುಗ್ರೀವನು,ರಾಮನಿಂದ ತನ್ನ ಕಾರವನ್ನು ಮಾಡಿಸಿಕೊಳ್ಳು ವುದಕ್ಕಾಗಿಯೇ, ತನಗೆ ರಾವಣನ ವಿಷಯವೇನೂ ತಿಳಿಯದಂತೆ ನಟಿಸಿರುವನು, ಈ ಕಾ ರಣದಿಂದಲೇ ಇವನು,ರಾಮನು ತನ್ನನ್ನು ಕುರಿತು, ಬೂಹಿ ಸುಗ್ರೀವ ಕಂ ದೇಶಂ ಹಿಯಂತೀ ಲಕ್ಷಿತಾ ತೈಯಾ'ಆ ಸೀತೆಯು ಯಾವದಾರಿಯಿಂದ ಉಯ್ಯಲ್ಪಡುತ್ತಿದ ಕು?” ಎಂದು ಕೇಳಿದುದಕ್ಕೂ ಪ್ರತ್ಯುತ್ತರವನ್ನು ಸರಿಯಾಗಿ ಹೇಳದೆ ಮರೆಸಿಬಿಟ್ಟ, ನು ಇದರಿಂದಲೇ ಸುಗ್ರೀವನು,ತಾನು ಪ್ರತ್ಯಕ್ಷವಾಗಿ ನೋಡಿದ ವಿಷಯವನ್ನೂ ಮರೆಸಿ ಟ್ಯವೆಂಬುದು ಸ್ಪಷ್ಟ್ಯವು ಆದರೆ ಹೀಗೆ ಮಾಡಿದುದರಿಂದ ಸುಗ್ರೀವನು ರಾನನ ವಿಷ ಯದಲ್ಲಿ ಮೊದಲೇ ಮಿತ್ರದ್ರೋಹವನ್ನು ಮಾಡಿದಂತಾಗಲಿಲ್ಲವೆ!” ಎಂದರೆ, ಬಹುದೂ ರಾಲೋಚನೆಯಿಂದಲೇ ಸುಗ್ರೀವನುಹೀಗೆ ಹೇಳಿರುವನೇ ಹೊರತು,ಇದು ಮಿತ್ರದ್ರೋ ಹವಲ್ಲ ಮೊದಲೇ ತಾನು ರಾಮನವೃತ್ತಾಂತವನ್ನು ತಿಳಿದಿರುವುದಾಗಿ ರಾಮನಿಗೆ ತಿಳಿಸಿ ಬಿಟ್ಟರೆ,ರಾಮನು ಸೀತಾನ್ವೇಷಣಕ್ಕಾಗಿಯೇ ಮೊದಲು ತನ್ನನ್ನು ನಿಯಮಿಸಿ ಬಿಡುವನು ವಾನರರೆಲ್ಲರೂ ವಾಲಿಗೆ ವಶರಾಗಿರುವುದರಿಂದ ಸಹಾಯಸಂಸತ್ತಿಲ್ಲದೆ ತಾನು ಅ ಕಾರವ ನ್ನು ನಿರ್ವಹಿಸುವುದಸಾಧ್ಯವು ಅಥವಾ ಪ್ರಯತ್ನದಿಂದ ಕೆಲವು ವಾನರರನ್ನು ವಶಪಡಿಸಿ ಕೊಂಡರೂ, ವಾಲಿಯು ರಾವಣನಿಗೆ ಮಿತನಾಗಿಯೂ,ತನಗೆ ವೈರಿಯಾಗಿಯೂ ಇರು ವುದರಿಂದ, ರಾವಣನ ಭಂಗವನ್ನಾಗಲಿ, ತನ್ನ ಕಾರಸಾಧನೆಯನ್ನಾಗಲಿ ಸ್ವಲ್ಪ ಮಾತ್ರ ವೂ ಸಹಿಸಲಾರದೆ ಹೇಗಾದರೂ ಕಾರಭಂಗವನ್ನು ಮಾಡಿಬಿಡಬಹುದು ಇದರಿಂದತನ್ನ ಮತ್ತು ರಾಮನ ಕಾರಗಳೆರಡೂ ಕೆಡುವುವು ಇವೆಲ್ಲವನ್ನೂ ಪರಾಲೋಚಿಸಿಯೇ ಸುಗ್ರಿ ವನು ತನಗೆ ಏನೊಂದೂ ತಿಳಿಯದಂತೆ ನಟಿಸಿದನೇಹೊರತು ಬೇರೆಯಿಲ್ಲವು, “ಹಾಗಿದ್ದ ರೆ ಸುಗ್ರೀವನು ವಾನರರನ್ನು ಕಳುಹಿಸುವ ಕಾಲದಲ್ಲಿ ಹೇಳಿದ ಮಾತಿನಿಂದ,ಆತನುಮೋ ದಲು ತನ್ನನ್ನು ವಂಚಿಸಿಬಿಟ್ಟನೆಂಬ ಸಂದೇಹವು ರಾಮನಿಗಾದರೂಹುಟ್ಟಲಾರದೆ?”ಎಂ ಬ ಶಂಕೆಯುಂಟಾಗಬಹುದು ಅದಕ್ಕೂ ಅವಕಾಶವಿಲ್ಲ ' ಮುಂದೆ ಲಕ್ಷಣನು ತಾರೆಯು ತನಗೆ ಹೇಳಿದ ರಾವಣವೃತ್ತಾಂತವನ್ನು ರಾಮನಲ್ಲಿ ತಿಳಿಸಿರುವನು ಸುಗ್ರೀವನೂ ಆ ಕೆಯ ಮೂಲಕವಾಗಿಯೇ ಆಮೇಲೆ ಈ ವೃತ್ತಾಂತವನ್ನು ಕೇಳಿ ತಿಳಿದಿರಬಹುದಾದದ ರಿಂದ, ಆಮೇಲೆ ಆ ವಿಷಯವನ್ನೇ ಕಪಿಗಳಿಗೂ ಹೇಳಿರಬಹುದಾದಸಂಭವವುಂಟು ಅದರಿಂದ ರಾಮನಿಗೆ ಈ ಶಂಕೆಯುಂಟಾಗುವುದಕ್ಕೂ ಕಾರಣವಿಲ್ಲ, ಇದಲ್ಲದೆ ಹಿಂದೆ ಸು ಗ್ರೀವನು ಚಕ್ರವಾಳಪಕ್ವತದವರೆಗೂ ಈ ಭೂಮಿಯನ್ನೆಲ್ಲಾ ಸುತ್ತಿರುವುದಾಗಿ ತಿಳಿಸಲ್ಪ