ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬೬ ಶ್ರೀಮದ್ರಾಮಾಯಣವು - [ಸರ್ಗ ೭, ಈುಲದಲ್ಲಿ ಹುಟ್ಟಿದ ಆತನ ವಂಶವಾವುದೆಂಬುದನ್ನೂ ನಾನು ಕೇಳಿದವನಲ್ಲ ಟ್ಟಿದೆ ಅಂತವನಿಗೆ ರಾವಣನ ಸ್ಥಲಬಲಾದಿಗಳು ತಿಳಿಯದೆಂಬುದು ಹೇಗೆ? ಹೀಗೆ ತಿಳಿದಿ ದರೂ ಅದನ್ನು ರಾಮನಿಗೆ ಮರೆಸಿಡಬೇಕೆಂಬುದೇ ಇವನ ಮುಖೋದ್ದೇಶವು, ಈತ ನು ರಾಮನ ಬಲವನ್ನು ಪರೀಕ್ಷಿಸುವಾಗಲೂಕೂಡ, ವಾಲಿಯು ದುಂದುಭಿಮೊದಲಾದ ವರನ್ನು ಜಯಿಸಿದ ವೃತ್ತಾಂತಗಳೆಲ್ಲವನ್ನೂ ಹೇಳಿದರೂ, ಅವನು ರಾವಣನನ್ನು ಜಯಿ ಸಿದ ವೃತ್ತಾಂತವನ್ನು ಮಾತ್ರ ಮರೆಸಿಬಿಟ್ಟನು ಹಾಗಿದ್ದರೆ ಸುಗ್ರೀವನಿಗೂ ಮೊದಲು ಈ ವಿಷಯವೊಂದೂ ತಿಳಿಯದೆ ಆಮೇಲೆ ತಾರೆಯಿಂದ ತಿಳಿದಿರಬಾರದೆ?”ಎಂದರೆ, ತಾರೆ ಯನ್ನು ನೋಡಿದುದು ಮೊದಲು ಕವಲಕಾಮಪರವಶನಾಗಿ ಲೋಕವ್ಯಾಪಾರಗಳನ್ನೇ ಮರೆತವನಹಾಗಿದ್ದ ಸುಗ್ರೀವನು, ಆ ತಾರೆಯೊಡನೆ ರಾಮಕಾರವನ್ನಾಲೋಚಿಸಿದನೇಬು ದೂ ಅಸಂಭವವು ಸುಗ್ರೀವನಿಗೆ ರಾವಣನ ಸ್ಥಿತಿಗತಿಗಳೊಂದೂ ನಿಜವಾಗಿ ತಿಳಿಯದಿ ಪಕ್ಷದಲ್ಲಿ, ಹಿಂದೆ ರಾಮನು ಕೇಳಿದಾಗ ಸೀತೆಯು ಹೋದ ದಿಕ್ಕನ್ನಾದರೂ ಸ್ಪಷ್ಟ ವಾಗಿ ಹೇಳಿಬಿಡುತ್ತಿದ್ದನು ಹೀಗೆ ತನಗೆ ತಿಳಿದಿದ್ದ ವಿಷಯಗಳನ್ನೂ ರಾಮನಿಗೆ ತಿಳಿಸದೆಮ ರೆಸಿಬಿಟ್ಟಿರುವುದರಿಂದಲೂ ಮೇಲಿನ ಇತರಕಾರಣಗಳಿಂದಲೂ, ಆ ಸುಗ್ರೀವನಿಗೆಇತರವಿಷ ಯಗಳ ತಿಳಿದಿದ್ದುವೆಂದೇ ಊಹ್ಯವು ಆದರೆ ಕೆಲವರು 'ರಾವಣನಿರುವ ಸ್ಥಳವನ್ನು ನಾನು ಕಾಣೆನು” ಎಂದು ಹೇಳಿದ ಸುಗ್ರಿವನ ಮಾತಿಗೆ, ರಾವಣನು ಈಗ ಎಲ್ಲಿರುವ ನೆಂಬುದನ್ನು ತಾನು ಕಾಣದುದಾಗಿ ಸುಗ್ರೀವನು ಹೇಳಿರುವನೆಂದು ಅರವನ್ನು ಮಾ ಡುವರು ಇದೂ ಯುಕ್ತವಲ್ಲ ಸೀತೆಯನ್ನೆತ್ತಿಕೊಂಡು ಹೋದ ರಾಕ್ಷಸನ ವೃತ್ತಾಂ ತವು ಸ್ವಲ್ಪ ಮಾತ್ರವಾದರೂ ತಿಳಿದರೆ ಸಾಕೆಂದು ರಾಮನು ಅತ್ಯಾತುರದಿಂದ ಕೇಳುತ್ತಿ ರುವಾಗ, ಸುಗ್ರೀವನಿಗೆ ರಾವಣನ ತಾತ್ಕಾಲಿಕವಾಸಸ್ಥಳವು ತಿಳಿಯದಿದ್ದರೂ,ಇತರವಿಷ ಯಗಳನ್ನಾದರೂ ತನಗೆ ತಿಳಿದಮಟ್ಟಿಗೆ ಹೇಳಿಬಿಡುತ್ತಿದ್ದ ಹೊರತು 'ಆರಾಕ್ಷಸನು ಎಲ್ಲಿ ವಾಸಮಾಡುತ್ತಿರುವನು?” ಎಂದು ರಾಮನು ಕೇಳಿದುದಕ್ಕೆ,ಸುಗ್ರೀವನು 'ಈಗ ಅವನೆಲ್ಲಿರುವನೆಂಬುದನ್ನು ನಾನರಿಯೆನು” ಎಂದು ಉತ್ತರವನ್ನು ಹೇಳಿ ನಿಲ್ಲಿಸಿ ಬಿಡಲಾ ರನು ಅಥವಾ ಹಾಗೆ ಹೇಳಿದ್ದರೂ ರಾಮನು ಅಷ್ಟಕ್ಕೆ ಬಿಡದೆ ಪುನಃ ಪ್ರಶ್ನೆ ಮಾಡಿ ಇ ತರವಿಷಯಗಳನ್ನಾದರೂ ಕೇಳಿ ತಿಳಿಯುತ್ತಿದ್ದನು ಇದಲ್ಲದೆ ಹೀಗೆ ಅಸಂಬದ್ಧವಾದ ಉತ್ತರವನ್ನು ಹೇಳಿದ್ದರೆ ರಾಮನಿಗೆ ಅವನ ಮಾತಿನಲ್ಲಿ ನಂಬಿಕೆಯೂ ಹುಟ್ಟಲಾರದು. ರಾಮನು ಸುಗ್ರೀವನನ್ನು ಪ್ರಶ್ನೆ ಮಾಡುವಾಗಲೂಆ ರಾಕ್ಷಸನ ನಿಯತವಾದ ವಾಸಸ್ಥ ಇವನ್ನು ಕೇಳಿದನೇಹೋರತು, ಆಗಿನ ವಾಸಸ್ಥಾನವನ್ನು ಕೇಳಿದವನಲ್ಲ ಆ ರಾವಣನು ವಶಿಸಮಾಡುತ್ತಿದ್ದ ಸ್ಥಳವನ್ನು ಕಂಡುಹಿಡಿದು, ಅದನ್ನು ಭಂಗಪಡಿಸಿದ ಮಾತ್ರದಲ್ಲಿಯೇ