ಪುಟ:ಶ್ರೀಮದ್ರಾಮಾಯನದವು ಕಿಷ್ಕಿಂದಾಖಾಂದವು.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮೦ ಶ್ರೀಮದ್ರಾಮಾಯಣವು [ಸರ್ಗ, ೮. ತಮ್ಮ ಸುಖದುಃಖಗಳನ್ನು ಹೇಳಿಕೊಳ್ಳುತಿದ್ದರು ಮಹಾನುಭಾವನಾಗಿ ಯೂ ಪುರುಷಶ್ರೇಷ್ಠ ನಾಗಿಯೂ ಇರುವ ಆ ರಾಮನ ಮಾತುಗಳನ್ನು ಕೇಳಿ, ಬುದ್ಧಿಶಾಲಿಯಾದ ವಾನರೇಂದ್ರನು, ಇನ್ನು ತನ್ನ ಕಾರವು ಕೈಗೂಡಿತೆಂದೇ ಮನಸ್ಸಿನಲ್ಲಿ ಭಾವಿಸಿ ಸಂತೋಷದಿಂದಿದ್ದನು ಇಲ್ಲಿಗೆ ಏಳನೆಯ ಸರ್ಗವು ಸುಗ್ರೀವನು ತನ್ನ ಶೇ ೧ಕಕಾರಣವನ್ನು ರಾಮನಿಗೆ ವಿವರಿಸಿ ತಿಳಿಸಿದುದು ರಾಮನ ಮಾತಿಗೆ ಸುಗ್ರೀವನು ಪರಮಸಂತುಷ್ಟನಾಗಿ, ಲಕ್ಷ್ಮಣನಿ ಗಿದಿರಾಗಿ ರಾಮನನ್ನು ಕುರಿತು, ' ಎಲೈ ರಾಮನೆ'ರಾಜಯೋಗ್ಯಗಳಾದ ಧೈತ್ಯ ಶಯ್ಯಾದಿ ಸಮಸ್ತಗುಣಗಳಿಂದ ಕೂಡಿದ ಸೀನು, ನನಗೆ ಮಿತ್ರನಾಗಿರು ವೆಯಾದುದರಿಂದ, ಇನ್ನು ನಾನು ಸತ್ವವಿಧದಲ್ಲಿಯೂ ದೇವತಾನುಗ್ರಹಕ್ಕೆ ಪಾತ್ರನಾದೆನು ಇದರಲ್ಲಿ ಸಂದೇಹವಿಲ್ಲ ಎಲೈ ದೋಷರಹಿತನೆ ! ನಿನ್ನಂತ ವನ ಸಹಾಯವಿದ್ದಮೇಲೆ, ದೇವರಾಜ್ಯವನ್ನಾ ದರೂ ಸಂಪಾದಿಸುವುದು ದು ಪ್ಯರವಲ್ಲ ಇನ್ನು ನಮ್ಮ ಕರಾಜ್ಯವು ನನಗೆ ವಶವಾಗುವುದರಲ್ಲಿ ಸಂದೇಹವೇ ನಿದೆ?ಸರೊತ್ತಮವಾದ ರಘುವಂಶದಲ್ಲಿ ಹುಟ್ಟಿದ ಮಹಾತ್ಮನೊಬ್ಬನು, ಅಗ್ನಿ ಸಾಕ್ಷಿಕವಾಗಿ ನನಗೆ ಮಿತ್ರನಾಗಿ ಲಭಿಸಿರುವಾಗ, ಇನ್ನು ನಾನು ನನ್ನ ಬಂ ಧುಮಿತ್ರವರ್ಗಗಳಲ್ಲಿ ಪೂಜ್ಯನಾಗುವುದರಲ್ಲಿ ಸಂದೇಹವೇನಿದೆ? ನಾನ ನಿ ನಗೆ ತಕ್ಕ ಮಿತ್ರನೆಂಬುದನ್ನು ನೀನು ಕಾಲಕ್ರಮದಿಂದ ತಿಳಿಯಬಹುದು ನ ನಲ್ಲಿರುವ ಸಾಮಾದಿಗುಣಗಳನ್ನು ನಾನೇ ಹೇಳಿಕೊಳ್ಳುವುದು ಆತ್ಮಸ್ತು ತಿಯೆನಿಸುವುದರಿಂದ, ಈಗ ನಾನು ಅದೊಂದನ್ನೂ ಹೇಳಲಾರೆನು ಮಹಾತ್ಮ ರಾಗಿಯೂ, ಕೃತಾತ್ಮರಾಗಿಯೂ ಇರುವ ನಿನ್ನಂತವರಿಗೆ ಬೇರೆಯವರಲ್ಲಿ ಹುಟ್ಟುವಪ್ರೀತಿಯು,ಆತ್ಮಜ್ಞಾನಿಗಳ ಧೈಯ್ಯದಂತೆ ಎಂದಿಗೂ ಚ್ಯುತಿಯಿಲ್ಲದೆ ನಿಶ್ಚಲವಾಗಿರುವುದು ನಿಜವಾದ ಸ್ನೇಹಭಾವವುಳ್ಳವರು, ತಮ್ಮಿಬ್ಬರಲ್ಲಿ ರುವ ಸುವರ್ಣರಜತಾದಿಗಳನ್ನಾಗಲಿ, ವಸ್ತ್ರ ಭೂಷಣಾದಿಗಳನ್ನಾಗಲಿ, ಬೇರೆ ಯಾವವಸ್ತುವನ್ನಾಗಲಿ ತಮ್ಮೊಳಗೆ ಅವಿಭಕ್ತವಾದಂತೆ ಎಣಿಸುವರೇಹೊರತು ಭೇದಬುದ್ಧಿಯನ್ನು ತೋರಿಸುವುದಿಲ್ಲ. ಧನವಂತ